ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ, ಕನ್ನಡ ಭಾಷೆ ದ್ರಾವಿಡ ಭಾಷಾ ವರ್ಗಕ್ಕೆ ಸೇರುತ್ತದೆ. ಅಧುನಿಕ ಭಾರತಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ 2ನೇ ಅತೀ ಹಳೆಯ ಭಾಷೆಯಾಗಿದೆ. ಕನ್ನಡ ಸಾಹಿತ್ಯ ಭಾರತದಲ್ಲಿ 3ನೇ ಅತೀ ಹಳೆಯ ಸಾಹಿತ್ಯಕ ಸಂಪ್ರದಾಯ ಸಂಸ್ಕೃತ ಸಾಹಿತ್ಯವಾಗಿದೆ.
ಕನ್ನಡ ಬರವಣಿಗೆಯ ಪ್ರಥಮ ಉದಾಹರಣೆ ದೊರಕಿರುವುದು. ಹಲ್ಲಿಡಿ ಶಾಸನದಲ್ಲಿ (ಸಾ.ಕ್ರಿ.ಶ 450) ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ದವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ 9ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನದ ಕವಿಯಾದ ಶ್ರೀ.ವಿಜಯನ ಕವಿರಾಜಮಾರ್ಗ, ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ಹಾಡು ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು. ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಪುಸ್ತಕಗಳಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು 6-7 ನೇ ಶತಮಾನದಲ್ಲಿ ಆಗಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರೆತಿಲ್ಲ.
ಕನ್ನಡ ಸಾಹಿತ್ಯದ ಚಿಂತಣೆಯನ್ನು ಮೂರು ಘಟಕಗಳಾಗಿ ವಿಂಗಡಿಸಬಹುದು.
1) ಹಳೆಗನ್ನಡ
2) ನಡುಗನ್ನಡ
3) ಆಧುನಿಕ ಕನ್ನಡ
- ಹಳೆಗನ್ನಡ :-
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 10ನೇ ಶತಮಾನದಿಂದ ಸುಮಾರು 12ನೇ ಶತಮಾನದವರೆಗಿನ ಕಾಲಘಟಕವನ್ನು ಹಳೆಗನ್ನಡ ಎಂದು ಗುರುತಿಸಲಾಗಿದೆ.ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿಕಾವ್ಯ ಎಂದು ಸಹ ಕರೆಯಬಹುದು. ಈ ಕಾಲದ ಸುಪ್ರಸಿದ್ಧ ಕವಿಗಳೆಂದರೆ ಪಂಪ (ಕ್ರಿ.ಶ.902-975) ಪಂಪನ . ಕನ್ನಡ ವಿಕ್ರಮಾರ್ಜುನವಿಜಯ ಅಥವಾ ಪಂಪ ಭಾರತ ಇಂದಿಗೂ ಅಧುನಿಕ ಮೇರು ಕೃತಿಯೆಂದು ಪರಿಗಣಿತವಾಗಿದೆ,
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ 3ನೇ ಶಾಂತಿನಾಥ ಪುರಾಣ ರಚಿಸಿದ ಪೊನ್ನ (929-966) ಈ ಸಂಸತ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (949)ನ ಪ್ರಮುಖ ಕೃತಿಗಳು ಜೈನ ಧರ್ಮಿಯವಾದವು. ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ದ ಸಾಹಸ ಭೀಮವಿಜಯ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ. (ಒಂದು ರೀತಿ ಗದ್ಯ ಮಿಶ್ರಿತ ಪದ್ಯ)
ಹಳೆಗನ್ನಡ ಗದ್ಯಗಳು :-
1) ಕವಿರಾಜ ಮಾರ್ಗ- ಶ್ರೀ. ವಿಜಯ
2) ಛಂದೋಬುದಿ -ನಾಗವರ್ಮ-2
3) ಕವೀಜೀಹ್ವಾಬಂಧನ- ಈಶ್ವರ ಕವಿ
4) ಛಂದಸ್ಸಾರ- ಗುಣವರ್ಮ
5) ನಂದಿ ಛಂದಸ್ಸು- ವೀರಭದ್ರ
6) ವಡ್ಡಾರಾಧನೆ – ಶಿವಕೋಟ್ಯಾಚಾರ್ಯ
ಹಳೆಗನ್ನಡದ ಕಾವ್ಯಗಳು :-
1) ಕಾವ್ಯಾವಲೋಖನ – ನಾಗವರ್ಮ-2
2) ಉದಯಾದಿತ್ಯಾಲಂಕಾರ – ಉದಯಾದಿತ್ಯ
3) ಶೃಂಗಾರ ರತ್ನಾಕರ ಕಾಮದೇವ
4) ಮಾಧವಾಲಂಕಾರ – ಮಾಧವ
5) ನರಪತಿ ಚರಿತೆ ಲಿಂಗರಾಜ
6) ರಸರತ್ನಾಕರ- ಸಾಳ್ವ
7) ಅಪ್ರತಿಮ ವೀರ ಚರಿತ್ರೆ- ತಿರುಮಲಾರ್ಯ
8) ಶಬ್ದಮಣಿ ದರ್ಪಣ- ಕೇಶಿರಾಜ
ಇನ್ನು ಆಧುನಿಕ ಕಾಲದಲ್ಲಿ ಹೇಳುವದಾದರೆ
ಭಾಷೆ ಇರೋದು ಸಂವಹನಕ್ಕೆ. ಸಂವಹನ ಕ್ರಿಯೆ ಸರಿಯಾಗಿ ನಡೆಯಬೇಕೆಂದರೆ ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ತಿಳಿಯಬೇಕು ಅಥವಾ ಅರ್ಥವಾಗಬೇಕು. ಬರೆಯುವಲ್ಲಿ ಶೈಲಿಯ ವ್ಯತ್ಯಾಸ ಇರುವಂತಹದೇ. ಸಾಹಿತಿಗಳಲ್ಲೇ ಬಗೆಬಗೆಯ ಶೈಲಿಗಳಿವೆ. ಕೆಲವರದು ಸುಂದರವಾದ ಶೈಲಿ. ಕೆಲವರದು ಸರಳ ಶೈಲಿ. ಕೆಲವರದು ನಿಗೂಢವಾದ ಶೈಲಿ. ನಾಗತಿಹಳ್ಳಿ , ರವಿ ಬೆಳಗೆರೆಯಂಥವರ ಶೈಲಿ ಆಕರ್ಷಕ. ಲಂಕೇಶರ ಗದ್ಯ ಶೈಲಿ ಹೃದ್ಯ. ದೇವುಡು ಅವರ ಪೌರಾಣಿಕ ಕಾದಂಬರಿಗಳು, ತರಾಸು ಅವರ ಐತಿಹಾಸಿಕ ಕಾದಂಬರಿಗಳು ಆ ಆ ವಾತಾವರಣ ಕಟ್ಟಿಕೊಡುವಂತಹವು. ಅನಕೃ ಶೈಲಿ ಸರಳ. ಪುರಾಣಿಕರ ಶೈಲಿ ಭಾವುಕತೆಯಿಂದ ಕೂಡಿದ್ದು. ಕಾರಂತರ ಶೈಲಿ ಗಂಭೀರವಾದದ್ದಾದರೂ ಅರ್ಥವಾಗುವಂತಹದೇ. ಸಿದ್ಧವನಹಳ್ಳಿ ಕೃಷ್ಣಶರ್ಮ, ಖಾದ್ರಿ ಶಾಮಣ್ಣನವರ ಪತ್ರಿಕಾ ಬರೆಹದ ಶೈಲಿಯೇ ವಿಶಿಷ್ಟ. ಬೀಚಿ ಸ್ಟೈಲ್ ಬೇರೆ.ಕುವೆಂಪು ಸಾಹಿತ್ಯದಲ್ಲಿನ ಗಾಂಭಿರ್ಯವೇ ಬೇರೆ, ಅದೇ ರೀತಿ ಬೇಂದ್ರೆ ಅವರ ಕಾವ್ಯದಲ್ಲಿನ ದೇಶಿತನದ ಗತ್ತೇ ಬೇರೆ. ಆದರೆ ಇವರೆಲ್ಲರೂ ಸಾಹಿತ್ಯ ಕೃಷಿ ಮಾಡಿದ್ದು ಮಾತ್ರ ಕನ್ನಡದಲ್ಲಿಯೇ ಹೀಗೆ ಒಬ್ಬೊಬ್ಬರದು ಒಂದೊಂದು ಬಗೆ.
ಯಾರೋ ಒಬ್ಬರು ಕಲಾವಿದೆಯೊಬ್ಬರ ಪರಿಚಯ ಮಾಡಿಕೊಡುತ್ತ ಮಾತನಾಡಿದ ಅಲಂಕಾರಿಕ ಶೈಲಿ ಜಾಲತಾಣದಲ್ಲಿ ಚರ್ಚೆಗೊಳಗಾಗಿರುವುದನ್ನು ಗಮನಿಸಿದೆ. ಕನ್ನಡ ಹೀಗೂ ಇದೆಯೆ ಎಂಬಂತಹ ಪ್ರತಿಕ್ರಿಯೆಯೂ ಬಂದಿದೆ. ಅಲಂಕಾರ ಮಾಡಬಹುದು. ಅಲಂಕಾರವೂ ಅತಿಯಾದರೆ ಚೆಂದ ಕಾಣಲಿಕ್ಕಿಲ್ಲ. ಏನೇ ಇದ್ದರೂ ಶಬ್ದಗಳು ಸುಂದರವಾಗಿದ್ದರೆ ಸಾಲದು. ಅದು ಇತರರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಮಾತ್ರವಲ್ಲ, ಬರೆದುದರಲ್ಲೂ ಅರ್ಥವಿರಬೇಕು. ಬರೀ ಚೆಂದದ ಒಂದಿಷ್ಟು ಶಬ್ದಗಳ ಗೊಂಚಲು ಆಗಬಾರದು. ನಮ್ಮ ಪಾಂಡಿತ್ಯ ಪ್ರದರ್ಶನಕ್ಕಿಂತ ಓದಿದವರಿಗೋ ಕೇಳುವವರಿಗೋ ಅರ್ಥವಾಗುವುದು ಮುಖ್ಯ. ಭಾಷಣವಾಗಲಿ, ಬರೆಹವಾಗಲಿ, ನಮ್ಮ ಮನಸ್ಸನ್ನು ಮುಟ್ಟುವುದು, ಮನದಾಳಕ್ಕೆ ಇಳಿಯುವುದು , ನಮ್ಮಲ್ಲಿ ರಸಾನುಭವವನ್ನುಂಟುಮಾಡುವುದು ಅಗತ್ಯ. ಇಲ್ಲದಿದ್ದರೆ ಆ ಬರೆಹ , ಭಾಷಣ ವ್ಯರ್ಥ. ಕೆಲವರು ಭಾಷಣ ಮಾಡಿದಾಗ, ಬರೆದದ್ದನ್ನು ಓದಿದಾಗ ಕೊನೆಗೂ ಅವರು ಏನು ನಿಶ್ಚಿತವಾಗಿ ಹೇಳಿದರು ಎನ್ನುವುದೇ ಗೊತ್ತಾಗುವುದಿಲ್ಲ. ವಾಕ್ಯಗಳು ಗೊಂದಲಮಯವಾಗಿರುತ್ತವೆ. ಆರಂಭಕ್ಕೂ ತುದಿಗೂ ಸಂಬಂಧವೇ ಇರುವುದಿಲ್ಲ. ಏನೋ ಒಂದಿಷ್ಟು ಶಬ್ದಗಳ ಕಸರತ್ತು ಅನಿಸುತ್ತದೆ. ಬಹಳಷ್ಟು ವಿಮರ್ಶಕರ ಬರೆಹಗಳನ್ನು ಗಮನಿಸಿ. ಹಾಗೇ ಇರುತ್ತದೆ.
ಭಾಷೆಯ ಮೇಲೆ ಹಿಡಿತ ಬೇಕು. ಶಬ್ದ ಸಂಪತ್ತೂ ಬೇಕು. ಆದರೆ ನಾವು ಬರೆಯುವುದು ಓದುಗರಿಗಾಗಿ ಎಂದಾದರೆ ಅದು ಎಲ್ಲ ಬಗೆಯ ಓದುಗರನ್ನೂ ತಲುಪುವಂತಿರಬೇಕು. ಪಾಂಡಿತ್ಯ ಇರಬೇಕಾದ್ದು ನಮ್ಮ ಭದ್ರತೆಗೆ. ನಮ್ಮ ತಿಳಿವಳಿಕೆ ಹೆಚ್ಚಿಸಿಕೊಳ್ಳಲು. ಅದು ಇತರ ಸಾಮಾನ್ಯ ಓದುಗರ ಮೇಲೆ ಬಲವಂತವಾಗಿ ಹೇರುವಂತಹದಲ್ಲ. ನಮ್ಮ ವಿಷಯ ಜ್ಞಾನ/ ಪಾಂಡಿತ್ಯ ನಾವು ಬರೆಯುವ ಸರಳವಾದ ಬರೆಹದಿಂದಲೂ ಜನರಿಗೆ ತಲುಪಿಸಲು ಸಾಧ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು