ಜೆರುಸಲೇಮ್ ; ಕಳೆದ ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ಮತ್ತು ಇಸ್ರೇಲ್ ಮೇಲೆ ನಡೆಸಿದ ಅಮಾನುಷ ಧಾಳಿಗೆ ಬೆಂಬಲ ವ್ಯಕ್ತಪಡಿಸಿದ ಆರೋಪದ ಮೇಲೆ ಪ್ರಮುಖ ಅರಬ್ ಇಸ್ರೇಲಿ ಜನಪ್ರಿಯ ನಟಿ ಮೈಸಾ ಅಬ್ದ್ ಎಲ್ಹಾದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಸ್ರೇಲಿ ಪೊಲೀಸರು ಆಕೆಯ ಹೆಸರನ್ನು ಬಹಿರಂಗಪಡಿಸದಿದ್ದರೂ “ನಜರೆತ್ ನಗರದ ನಿವಾಸಿ, ಮತ್ತು ದ್ವೇಷದ ಭಾಷಣದ ಶಂಕೆಯ ಮೇಲೆ ನಟಿ ಮತ್ತು ಸಾಮಾಜಿಕ ತಾಣಗಳ ಪ್ರಭಾವಶಾಲಿ ನಟಿಯನ್ನು ಬಂದಿಸಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು, “ಪ್ರಚೋದನೆ ಮತ್ತು ಭಯೋತ್ಪಾದನೆಗೆ ಬೆಂಬಲದ ವಿರುದ್ಧ ಹೋರಾಟವು ಸಾರ್ವಕಾಲಿಕವಾಗಿ ಮುಂದುವರಿಯುತ್ತದೆ” ಎಂದು ಹೇಳಿದರು. ಮೈಸಾ ಅಬ್ದ್ ಎಲ್ಹಾದಿ ಅವರು 85 ವರ್ಷದ ಯಫ್ಫಾ ಅದಾರ್ ಅವರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿರುವ ಚಿತ್ರಗಳನ್ನು ನಗುವ ಎಮೋಜಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಇಸ್ರೇಲ್ನಾದ್ಯಂತ ಅಮಾನುಷ ದಾಳಿಯ ನಂತರ ಅಕ್ಟೋಬರ್ 7 ರಂದು ಹಮಾಸ್ ವಶಕ್ಕೆ ಪಡೆದುಕೊಂಡ 200 ಕ್ಕೂ ಹೆಚ್ಚು ಬಂಧಿತರಲ್ಲಿ ಯಾಫಾ ಅದಾರ್ ಕೂಡ ಸೇರಿದ್ದಾರೆ. 1989 ರಲ್ಲಿ ಬರ್ಲಿನ್ ಗೋಡೆಯ ಪತನವನ್ನು ಉಲ್ಲೇಖಿಸಿ “ಲೆಟ್ಸ್ ಗೋ ಬರ್ಲಿನ್ ಸ್ಟೈಲ್ ” ಎಂಬ ಶೀರ್ಷಿಕೆಯೊಂದಿಗೆ ಹಮಾಸ್ ಪಡೆಗಳು ಇಸ್ರೇಲ್ನ ಭದ್ರತಾ ತಡೆಗೋಡೆಯನ್ನು ಭೇದಿಸುತ್ತಿರುವ ಮತ್ತೊಂದು ಚಿತ್ರವನ್ನು ಕೂಡ ಅಬ್ದ್ ಎಲ್ಹಾದಿ ಹಂಚಿಕೊಂಡಿದ್ದಾರೆ.
ನಟಿಯ ಪೋಸ್ಟ್ಗಳಿಗೆ ನೆಟಿಜನ್ಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. X ಬಳಕೆದಾರ ಆಡಮ್ ಅಲ್ಬಿಲಿಯಾ ಅವರು “ಯಹೂದಿಗಳ ಹತ್ಯೆಗಳು, ನಮ್ಮ ಶಿಶುಗಳ ಹತ್ಯೆಗಳು, ಜನರನ್ನು ಜೀವಂತವಾಗಿ ಸುಡುವುದು, ಅತ್ಯಾಚಾರ, ಕೊಲೆ ಮತ್ತು ಯಹೂದಿ ಮಹಿಳೆಯರ ಅಪಹರಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ, ಅವರು ಹಮಾಸ್ನ ಕ್ರಮಗಳನ್ನು ಉತ್ತೇಜಿಸುವ ಕೃತ್ಯಗಳನ್ನು ಪೋಸ್ಟ್ ಮಾಡಿರುವುದು ಅವರು ಇಸ್ರೇಲಿ ಪ್ರಜೆಗಳು ಮತ್ತು ಭಯೋತ್ಪಾದಕರೆಡೆಗೆ ಹೊಂದಿರುವ ಮನೋಭಾವನೆ ಯನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಅಬ್ದ್ ಎಲ್ಹಾದಿ ಅವರ ಸಹ-ನಟ ಓಫರ್ ಶೆಕ್ಟರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿ “ನಾನು ನಿಮ್ಮ ಬಗ್ಗೆ ನಾಚಿಕೆಪಡುತ್ತೇನೆ. ನಿಮ್ಮ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ನೀವು ನಜರೆತ್ನಲ್ಲಿ ವಾಸಿಸುತ್ತಿದ್ದೀರಿ, ನಮ್ಮ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ ಕಾರಣಕ್ಕಾಗಿ ಲಕ್ಷಾಂತರ ಇಸ್ರೇಲಿಗರು ನಿಮ್ಮ ಅಭಿಮಾನಿಗಳಾಗಿದ್ದಾರೆ ಆದರೆ ನೀವು ಅವರ ಬೆನ್ನಿಗೆ ಇರಿದಿದ್ದೀರ ಎಂದು ಹೇಳಿದ್ದಾರೆ.
ಮತ್ತೋರ್ವ ಬಳಕೆದಾರರು ನಿಮಗೆ ಎಷ್ಟೇ ಪ್ರೀತಿ , ವಿಶ್ವಾಸ ತೋರಿಸಿದರೂ ನೀವು ಕೊನೆಗೆ ಮಾಡುವುದು ಉಂಡ ಮನೆಗೆ ಎರಡು ಬಗೆಯುವ ಕೆಲಸ ಎಂದಿದ್ದಾರಲ್ಲದೆ ನೀವು ದೇಶದೊಳಗಿನ ಅಂತರಿಕ ಭಯೋತ್ಪಾದಕರು ಎಂದು ಹೇಳಿದ್ದಾರೆ.
ಅಬ್ದ್ ಎಲ್ಹಾದಿ ಹಲವಾರು ಇಸ್ರೇಲಿ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾಳೆ, ಹಾಲಿವುಡ್ ಚಲನಚಿತ್ರ “ವರ್ಲ್ಡ್ ವಾರ್ Z,” ಮತ್ತು ಬ್ರಿಟಿಷ್ ಸರಣಿ “ಬಾಗ್ದಾದ್ ಸೆಂಟ್ರಲ್”ನಲ್ಲೂ ಅಭಿನಯಿಸುತಿದ್ದಾಳೆ. ನಟಿಯು ಪ್ಯಾಲೆಸ್ಟೀನ್ ನಿಂದ ಇಸ್ರೇಲಿನ ನಗರವಾದ ನಜರೆತ್ ಗೆ ವಲಸೆ ಬಂದು ಅಲ್ಲಿ ವಾಸಿಸುತಿದ್ದಾಳೆ.