ತೆಲಂಗಾಣ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್ ಮತದಾರರಿಗೆ ಭರವಸೆಗಳ ಮಹಾಪೂರವನ್ನು ಹರಿಸುತ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಇದಕ್ಕಾಗಿ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ.
ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆರು ಗ್ಯಾರಂಟಿಗಳು, ಮಹಾಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂ., ಗ್ಯಾಸ್ ಸಿಲಿಂಡರ್ಗೆ 500 ರೂ. ಹಾಗೂ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ರೈತ ಭರವಸೆ ಯೋಜನೆಯಡಿ ರೈತರಿಗೆ ವಾರ್ಷಿಕ 15,000 ರೂ. ಸಿಗಲಿದ್ದರೆ, ಕೃಷಿ ಕಾರ್ಮಿಕರಿಗೆ ವಾರ್ಷಿಕ 12 ಸಾವಿರ ರೂ. ಸಿಗಲಿದೆ. ಜೊತೆಗೆ ಭತ್ತದ ಬೆಳೆಗೆ 500 ರೂ. ಬೋನಸ್ ನೀಡಲಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಜೊತೆಗೆ ಇಂದಿರಮ್ಮ ಇಂಟ್ಲು, ಯುವ ವಿಕಾಸಂ, ಚೇಯುತ ಎಂಬ ಗ್ಯಾರಂಟಿಗಳನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ಮದುವೆ ವೇಳೆ ಅರ್ಹ ಮಹಿಳೆಯರಿಗೆ 10 ಗ್ರಾಂ ಚಿನ್ನ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ನೀಡುವ ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೇಸ್ ಮುಂದಾಗಿದೆ. ಈ ಮೂಲಕ ನವೆಂಬರ್ 30 ರಂದು ನಡೆಯುವ ತೆಲಂಗಾಣದ ಚುನಾವಣೆಗೆ ಭರ್ಜರಿ ದಾಳ ಉರುಳಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಿ ಶ್ರೀಧರ್ ಬಾಬು, ಮದುವೆಯಾಗುವ ವಧುವಿಗೆ ಮಹಾಲಕ್ಷ್ಮೀ ಯೋಜನೆಯ ಖಾತ್ರಿಯಡಿ 1 ಲಕ್ಷ ರೂ. ನಗದು ಜೊತೆಗೆ 10 ಗ್ರಾಂ ಚಿನ್ನವನ್ನು ಹೆಚ್ಚುವರಿಯಾಗಿ ಕೊಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಸದ್ಯ ಇರುವ ಬಿಆರ್ಎಸ್ ಸರ್ಕಾರದ ಕಲ್ಯಾಣ ಲಕ್ಷ್ಮೀ ಮತ್ತು ಶಾದಿ ಮುಬಾರಕ್ ಯೋಜನೆಗಳಿಗೆ ಟಾಂಗ್ ಕೊಡಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್ನ ಈ ಭರವಸೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಆರ್ಎಸ್ ವಕ್ತಾರ ಶ್ರವಣ್ ದಾಸೋಜು, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಮ್ಮ ಚುನಾವಣಾ ಭರವಸೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಅವರು ಏನು ಬೇಕಾದರೂ ಭರವಸೆ ನೀಡಬಹುದು ಎಂದು ಹೇಳಿದ್ದಾರೆ.
ಸದ್ಯ ಬಿಆರ್ಎಸ್ ಸರ್ಕಾರವು ಕಲ್ಯಾಣ ಲಕ್ಷ್ಮೀ ಮತ್ತು ಶಾದಿ ಮುಬಾರಕ್ ಯೋಜನೆಗಳನ್ನು ಹೊಂದಿದ್ದು. ಅವುಗಳ ಅಡಿಯಲ್ಲಿ ಮದುವೆಯಾಗುವ 18 ವರ್ಷ ಮೀರಿದ ವಧುವಿಗೆ 1,00,116 ರೂ. ಅನ್ನು ಸರ್ಕಾರ ನೀಡುತ್ತಿದೆ. ಆದರೆ ವಧುವಿನ ಪೋಷಕರ ಆದಾಯ ವಾರ್ಷಿಕ 2 ಲಕ್ಷ ರೂ. ಮೀರುವಂತಿಲ್ಲ. ಜೊತೆಗೆ ತೆಲಂಗಾಣದ ನಿವಾಸಿಗಳಾಗಿರಬೇಕು. ಈಗ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮಹಾಲಕ್ಷ್ಮೀ ಯೋಜನೆಯನ್ನು ಘೋಷಿಸಿದ್ದು, ಸದ್ಯ 10 ಗ್ರಾಂ ಚಿನ್ನದ ಬೆಲೆ 50 ಸಾವಿರ ರೂ.ನಿಂದ 55 ಸಾವಿರ ರೂ.ವರೆಗೆ ಇದೆ. ಇದರೊಂದಿಗೆ ಒಂದು ಲಕ್ಷ ರೂ. ನಗದು ನೀಡಲಾಗುವುದು. ಇದರಿಂದ ಯೋಜನೆಯ ಮೊತ್ತ ಒಂದೂವರೆ ಲಕ್ಷ ರೂ. ದಾಟುವ ಸಾಧ್ಯತೆ ಇದೆ. ಪ್ರತಿ ಫಲಾನುಭವಿಗೆ ಒಂದೂವರೆ ಲಕ್ಷ ರೂ. ವಿನಿಯೋಗಿಸುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೇಸ್ ಸರ್ಕಾರದ ಮಹತ್ತರವಾದ ಯೋಜನೆಗಳು ಜಾರಿಗೆ ಬಂದು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ನಿರಾಶೆಗೊಳಿಸಿದೆ. ಗೃಹ ಲಕ್ಷಿö್ಮ ಯೋಜನೆಯಡಿಯಲ್ಲಿ ಅರ್ಹ ಮಹಿಳೆಗೆ 2000 ರೂ ತಿಂಗಳಿಗೆ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಈ ಯೋಜನೆಯನ್ನು ಸರ್ಕಾರ ದಿನಕ್ಕೆ ಕೈ ಬಿಡುವ ಲಕ್ಷಣಗಳಂತೆ ಕಾಣುತ್ತಿದೆ.
ಇತ್ತ ಪಡಿತರ ಕಾರ್ಡ್ನಲ್ಲಿ ಹೆಚ್ಚುವರಿ ಅಕ್ಕಿಯ ಬದಲು ದುಡ್ಡನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿತ್ತು. ಆರಂಭದಲ್ಲಿ ಒಂದಿಷ್ಟು ಗೊಂದಲ, ತಾಂತ್ರಿಕ ದೋಷದ ಮಧ್ಯೆಯು ಒಂದಿಷ್ಟು ಜನರಿಗೆ ಹಣವು ಬ್ಯಾಂಕ್ ಖಾತೆಗೆ ವರ್ಗವಣೆಯಾಯಿತ್ತು.
ಆದರೆ ಇಂದು ಈ ಎರಡು ಯೋಜನೆಯಡಿಯಲ್ಲಿ ಫಲನುಭವಿಗಳಿಗೆ ನಿರಾಶೆಗೊಳಿಸಿದೆ. ಹಣವು ವರ್ಗವಣೆಯಾಗದೆ ಜನರನ್ನು ರಾಜಕೀಯವಾಗಿ ಬಳಸಿದಂತೆ ಭಾಸಬಾಗುತ್ತಿದೆ. ಕರ್ನಾಟಕದಲ್ಲಿ ಭರ್ಜರಿಯಾಗಿ ಚುನಾವಣೆಯನ್ನು ಗೆದ್ದು ಆಡಳಿತದ ಚುಕ್ಕಾಣಿ ಹಹಿಡಿದಿರುವ ಕಾಂಗೇಸ್ ಗೆ ತೆಲಂಗಾಣ ಮತ್ತು ಇಲ್ಲಿನ ಮತದಾರರು ಸರ್ಕಾರ ಸ್ಥಾಪಿಸಲು ಅವಕಾಶ ನೀಡುವುದೇ ಕಾದು ನೋಡಬೇಕು.