ತೂಕ ನಷ್ಟಕ್ಕೆ, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಬೇಕುಇದಕ್ಕಾಗಿ ಸೋಯಾ ಚಂಕ್ ಅನ್ನು ಆಹಾರದಲ್ಲಿ ಸೇರಿಸಬಹುದು.ಪ್ರೋಟೀನ್ಗಳ ಹೊರತಾಗಿ, ಇದು ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ.
ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಹೆಚ್ಚಿನವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತೂಕ ಇಳಿಸಿಕೊಳ್ಳಲು ಜನರು ವಿವಿಧ ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಕೆಲವರು ಗಂಟೆಗಟ್ಟಲೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಅನೇಕರು ತಮ್ಮ ಆಹಾರದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗುತ್ತಾರೆ. ಆದರೆ, ಇಷ್ಟೆಲ್ಲಾ ಮಾಡಿದರೂ ತೂಕ ಕಡಿಮೆಯಾಗುವುದಿಲ್ಲ. ಬದಲಿಗೆ ದೇಹ ಆಯಾಸಗೊಳ್ಳುತ್ತದೆ. ತೂಕ ಇಳಿಸಿಕೊಳ್ಳಲು, ಕಡಿಮೆ ಆಹಾರ ಸೇವನೆಯ ಅಗತ್ಯವಿಲ್ಲ. ಬದಲಾಗಿ ಸರಿಯಾದ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಕೆಲವು ಸರಳ, ಆರೋಗ್ಯಕರ ಮತ್ತು ನೈಸರ್ಗಿಕ ವಿಧಾನಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು.
ತೂಕ ನಷ್ಟಕ್ಕೆ ಸೋಯಾ ಚಂಕ್ಸ್ :
ತೂಕ ನಷ್ಟಕ್ಕೆ, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಇದಕ್ಕಾಗಿ ಸೋಯಾ ಚಂಕ್ಸ್ ಅನ್ನು ಆಹಾರದಲ್ಲಿ ಸೇರಿಸಬಹುದು. ಪ್ರೋಟೀನ್ ಹೊರತಾಗಿ, ಇದು ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಸೋಯಾಬೀನ್ ನಲ್ಲಿ ನಾರಿನಂಶ ಹೆಚ್ಚಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಸ್ನಾಯುಗಳ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
ತೂಕ ನಷ್ಟಕ್ಕೆ ಸೋಯಾಬೀನ್ ಅನ್ನು ಹೇಗೆ ಸೇವಿಸಬೇಕು :
1. ಸೋಯಾ ಅವಲಕ್ಕಿ :
ಬೆಳಗಿನ ಉಪಹಾರದಲ್ಲಿ ಸೋಯಾ ಬಿನ್ ಸೇವಿಸಬಹುದು. ಇದು ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೆಳಗಿನ ಉಪಹಾರ ತಯಾರಿಸಲು ಕುಡಿಯುವ ನೀರಿನಲ್ಲಿ ಸೋಯಾವನ್ನು ಹಾಕಿ. ಒಂದೆರಡು ನಿಮಿಷಗಳ ನಂತರ ಸೋಯಾದಲ್ಲಿರುವ ನೀರನ್ನು ಚೆನ್ನಾಗಿ ಹಿಂಡಿ ತೆಗೆಯಿರಿ. ನಂತರ ಮಿಕ್ಸಿಯಲ್ಲಿ ಹಾಕಿ ತರಿ ತರಿ ರುಬ್ಬಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಕಡಲೆಕಾಯಿಯನ್ನು ಹಾಕಿ 2 ನಿಮಿಷ ಫ್ರೈ ಮಾಡಿ. ಸ್ವಲ್ಪ ಅರಿಶಿನ ಪುಡಿ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ರುಬ್ಬಿಟ್ಟುಕೊಂಡ ಸೋಯಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಂತಿಮವಾಗಿ ನಿಂಬೆ ರಸ ಮತ್ತು ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೇರಿಸಿ. ಇಷ್ಟು ಮಾಡಿದರೆ ಸೋಯಾ ಅವಲಕ್ಕಿ ಸಿದ್ದವಾಗುತ್ತದೆ. ಬೆಳಗಿನ ಉಪಾಹಾರದಲ್ಲಿ ಸೋಯಾ ಅವಲಕ್ಕಿ ತಿನ್ನುವುದರಿಂದ ಹೊಟ್ಟೆಯು ತುಂಬಿರುತ್ತದೆ. ಪದೇ ಪದೇ ಹಸಿವಾಗುವುದಿಲ್ಲ. ತೂಕ ನಷ್ಟಕ್ಕೂ ಇದು ಪ್ರಯೋಜನಕಾರಿಯಾಗಿದೆ.
- ಸೋಯಾ ಚಂಕ್ಸ್ ಕರಿ :
ತೂಕ ಇಳಿಸಿಕೊಳ್ಳಲು ಸೋಯಾ ಚಂಕ್ ನ ಕರಿ ಮಾಡಬಹುದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸೋಯಾ ಚಂಕ್ಸ್ ಕರಿಯನ್ನು ಮಧ್ಯಾಹ್ನ ಅಥವಾ ರಾತ್ರಿಯ ಊಟದ ಜೊತೆಗೆ ಸೇವಿಸಬಹುದು. ಇದನ್ನು ಮಾಡಲು ನೀವು ಆಲಿವ್ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು. ಬೇಕಾದರೆ ಇದರೊಂದಿಗೆ ನಿಮ್ಮ ಆಯ್ಕೆಯ ತರಕಾರಿಗಳನ್ನು ಸಹ ಇದಕ್ಕೆ ಸೇರಿಸಬಹುದು.