ಆನ್ಲೈನ್ ಉದ್ಯೋಗ ಹಗರಣಗಳು ಹೆಚ್ಚುತ್ತಿವೆ ಮತ್ತು ಜನರು ಸಾವಿರಾರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ವಂಚಕರು ವಿಧ ವಿಧವಾದ ಹೊಚ್ಚ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಜನರು ಕೂಡಾ ಸುಲಭವಾಗಿ ಕೆಡ್ಡಕ್ಕೆ ಬೀಳುತ್ತಿದ್ದಾರೆ. ಲಕ್ಷಗಟ್ಟಲೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಗೃಹಣಿಯರು ಅಂತೂ ಇವರಿಗೆ ಸುಲಭದ ಟಾಸ್ಕ್.
ಇದೀಗ ಹೊಸ ಸೈಬರ್ ಕ್ರೈಮ್ ಘಟನೆಯಲ್ಲಿ, ನಾಗ್ಪುರ ನಿವಾಸಿ 56 ವರ್ಷದ ಸರಿಕೊಂಡ ರಾಜು, ಕುತಂತ್ರಿ ಸೈಬರ್ ವಂಚಕನಿಗೆ ಬಲಿಯಾಗಿದ್ದಾರೆ. ರಾಜು ಅವರಿಗೆ 77 ಲಕ್ಷ ರೂ.ಗಳನ್ನು ವಂಚಿಸುವಲ್ಲಿ ವಂಚಕ ಯಶಸ್ವಿಯಾಗಿದ್ದಾನೆ. ಜನಪ್ರಿಯ ಪ್ಲಾಟ್ಫಾರ್ಮ್ ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು “ಲೈಕ್” ಮಾಡುವ ಮೂಲಕ ಹಣವನ್ನು ಸಂಪಾದಿಸಲು ರಾಜು ಅವರನ್ನು ಮನವೊಲಿಸುವುದು ಈ ಮೋಸದ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದೆ.
ರಾಜು ಅವರನ್ನು ಸೈಬರ್ ಅಪರಾಧಿ ತನ್ನ ಟೆಲಿಗ್ರಾಮ್ ಖಾತೆಯ ಮೂಲಕ ಮೊದಲು ಸಂಪರ್ಕಿಸಿ, ಅವಕಾಶಾಕಾಂಕ್ಷಿಯಂತೆ ನಟಿಸಿದ ಸ್ಕ್ಯಾಮರ್, ಹಣ ಗಳಿಸುವ ಈ ಉದ್ಯಮದ ಭಾಗವಾಗಿ “ಲೈಕ್” ಆಗಿರುವ ಯೂಟ್ಯೂಬ್ ಚಾನೆಲ್ಗಳ ಸ್ಕ್ರೀನ್ಶಾಟ್ಗಳನ್ನು ಕಳುಹಿಸುವಂತೆ ರಾಜುಗೆ ತಿಳಿಸಿದ್ದಾನೆ.
ರಾಜು ಸರಳ ಕಾರ್ಯಕ್ಕಾಗಿ ಸ್ವಲ್ಪ ಹಣವನ್ನು ಪಡೆಯುತ್ತಿದ್ದನು. ಈ ವಹಿವಾಟುಗಳಿಂದ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಂಡರು, ಮುಂದೆ ಅವರ ಖಾತೆಯಿಂದ ಗಣನೀಯ ಮೊತ್ತವನ್ನು ದೋಚಿತು.
ದೇಶದ ವಿವಿಧೆಡೆ ಮೋಸದ ಜಾಲಕ್ಕೆ ಅನೇಕರು ಬಲಿಯಾಗುತ್ತಿದ್ದಾರೆ. ಈ ಕುರಿತು ಸಾಕಷ್ಟು ವರದಿಗಳು ಮಾದ್ಯಮದಲ್ಲಿ ವರದಿಯಾಗುತ್ತಾಲೇ ಇವೆ.
ಸಿನಿಮಾ ರಿವ್ಯೂ ಕೊಡಲು ಹೋಗಿ 7.3 ಲಕ್ಷ ರೂ. ಕಳೆದುಕೊಂಡಿದ್ದ ಮಹಿಳೆ. ಚಲನಚಿತ್ರಗಳಿಗೆ ಆನ್ಲೈನ್ನಲ್ಲಿ ರಿವ್ಯೂ ನೀಡಿದರೆ ಹಣ ಸಿಗುವುದಾಗಿ ಆಮಿಷ ತೋರಿಸಿ ಮಹಿಳೆಯೊಬ್ಬರಿಗೆ ವಂಚಿಸಲಾಗಿದೆ. ಬೆಂಗಳೂರಿನಲ್ಲಿ ಪಾರ್ಟ್ ಟೈಂ ಕೆಲಸದ ಆಸೆಗೆ ಬಿದ್ದ ಗೃಹಿಣಿಯೊಬ್ಬರು ಆನ್ಲೈನ್ನಲ್ಲಿ ಏಳು ಲಕ್ಷದ ಮೂರು ಸಾವಿರ ರೂಪಾಯಿ ಹಣ ಕಳೆದುಕೊಂಡ ಬಗ್ಗೆ ಈ ಹಿಂದೆನೇ ವರದಿಯಾಗಿತ್ತು.
ಜೋಶ್ಬಾಯ ಎಂಬಾಕೆಗೆ ಟೆಲಿಗ್ರಾಂನಲ್ಲಿ ಮೆಸೇಜ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬ, ಚಲನಚಿತ್ರಗಳಿಗೆ ರಿವ್ಯೂ ನೀಡಿದರೆ ಕಮೀಷನ್ ಬರುತ್ತೆ ಎಂದು ಮೇಸೇಜ್ ಮಾಡಿದ್ದ. ಲಿಂಕ್ ಒಂದನ್ನು ಕಳಿಸಿ ರಿಜಿಸ್ಟರ್ ಮಾಡಿಕೊಳ್ಳಲು ಹೇಳಿದ್ದ. ತನ್ನ ಬ್ಯಾಂಕ್ಗೆ ಅಟ್ಯಾಚ್ ಆಗಿರುವ ನಂಬರ್ ನಿಂದ ಅಕೌಂಟ್ ನಂಬರ್, ಪಾನ್ ಕಾರ್ಡ್ ನಂಬರ್ಗಳನ್ನು ನಮೂದಿಸಿ ಮಹಿಳೆ ರಿಜಿಸ್ಟರ್ ಮಾಡಿದ್ದರು. ನಂತರ ಆತ ಚಲನಚಿತ್ರಕ್ಕೆ ರಿವ್ಯೂ ಕೊಡುವ ಟಾಸ್ಕ್ ಆಕೆಗೆ ನೀಡಿದ್ದ. ಕಮೀಷನ್ ಆಸೆಗೆ ಆತ ಹೇಳಿದಂತೆ ಕ್ಲಿಕ್ ಮಾಡುತ್ತಾ ಹೋಗಿದ್ದ ಮಹಿಳೆ, ನಂತರ ಹಂತಹಂತವಾಗಿ 7 ಲಕ್ಷದವರೆಗೂ ಹಣ ಕಳೆದುಕೊಂಡಿದ್ದಾರೆ.
ಆನ್ಲೈನ್ ವಂಚನೆಗೆ ಪೊಲೀಸರು ಕೂಡಾ ಬಲಿಯಾಗಿದ್ದಾರೆ. ಬ್ಯಾಂಕ್ ಕಸ್ಟಮರ್ ಕೇರ್ನಿಂದ ಎಂದು ಕರೆ ಮಾಡಿದ್ದ ವ್ಯಕ್ತಿ, ನಿಮ್ಮ ಎಸ್ಬಿಐ ಅಕೌಂಟ್ ಬ್ಲಾಕ್ ಆಗಿದೆ, ಖಾತೆ ಮುಂದುವರಿಯಬೇಕು ಎಂದರೆ ಪಾನ್ ಕಾರ್ಡ್ ಅಪ್ಡೇಟ್ ಮಾಡಿ ಎಂದಿದ್ದ. ಇದನ್ನು ನಂಬಿದ ಪೊಲೀಸ್ ಅಧಿಕಾರಿ ಪಾನ್ ಕಾರ್ಡ್ ನಂಬರ್ ಅನ್ನು ಅಪ್ಡೇಟ್ ಮಾಡಿದ ಕೂಡಲೇ ಅವರ ಎರಡು ಅಕೌಂಟ್ಗಳಿಂದ 72 ಸಾವಿರದವರೆಗೂ ಹಣ ಕಡಿತಗೊಂಡಿದೆ. ಒಂದೇ ನಂಬರನ್ನು ಎರಡು ಬ್ಯಾಂಕ್ ಅಕೌಂಟ್ಗಳಿಗೆ ಲಿಂಕ್ ಮಾಡಿರುವ ಕಾರಣ ಆನ್ಲೈನ್ ವಂಚಕ ಎರಡೂ ಖಾತೆಗೂ ಕನ್ನ ಹಾಕಿದ್ದಾನೆ.
ಹೋಟೆಲ್ಗಳು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ವಿಮರ್ಶೆಗಳನ್ನು ಬರೆಯುವ ಕೆಲಸಕ್ಕೆ ಸೇರಿ 29 ಲಕ್ಷ ರೂ. ಕಳಕೊಂಡ ಯುವಕ. ಮುಂಬೈನಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿ ಬರೋಬ್ಬರಿ 29 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪ್ರತಿ ವಿಮರ್ಶೆಗೆ 50 ರೂ. ನೀಡುವುದಾಗಿ ವಂಚಕರು ಭರವಸೆ ನೀಡಿದರು. ಒದಗಿಸಲಾದ ಲಿಂಕ್ ಮೂಲಕ ಟೆಲಿಗ್ರಾಮ್ ಗುಂಪಿಗೆ ಸೇರಿಕೊಂಡರು. ಈ ಪಾರ್ಟ್ ಟೈಂ ಕೆಲಸದ ಹೊರತಾಗಿ ಅವರು ಕೆಲವು ಆನ್ಲೈನ್ ಕಾರ್ಯಗಳನ್ನು ನಿರ್ವಹಿಸಬೇಕು. ಮಾಡಿದ ಕೆಲಸಕ್ಕೆ ಹಣ ಪಡೆಯುವ ಮೊದಲು ಕೊಟ್ಟ ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಲು ಹಣ ಪಾವತಿಸಬೇಕಾಗುತ್ತದೆ ಎಂಬ ಷರತ್ತು ಇತ್ತು.
ಕೆಲಸ ಪೂರ್ಣಗೊಳಿಸಲು 5 ಲಕ್ಷ ಪಾವತಿಸಿದ್ದು, ಬಳಿಕ ತೆರಿಗೆ ಕಟ್ಟಬೇಕು, ಇಲ್ಲವಾದಲ್ಲಿ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ವಂಚಕರು ಹೇಳಿದ್ದರು. ವಂಚಕರು 13 ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವಿವಿಧ ನೆಪದಲ್ಲಿ ಒಟ್ಟು 29 ಲಕ್ಷ ರೂ. ಯನ್ನು ದೂರುದಾರನಿಂದ ಸುಲಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯು ಭವಿಷ್ಯದಲ್ಲಿ ನಿಜವಾದ ಹಗರಣಗಳನ್ನು ತಡೆಗಟ್ಟಲು ನಿರಂತರ ಸಾರ್ವಜನಿಕ ಜಾಗೃತಿ ಮತ್ತು ಸೈಬರ್ ಭದ್ರತಾ ಶಿಕ್ಷಣದ ಅಗತ್ಯವನ್ನು ನೆನಪಿಸುತ್ತದೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅಪರಿಚಿತರಿಂದ ಅನಪೇಕ್ಷಿತ ಸಂದೇಶಗಳು ಮತ್ತು ಸಂಪರ್ಕದ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು.
ಇಂದು ಪ್ರತಿಯೊಂದು ಕೆಲಸವು ಆಲ್ ಲೈನ್ ಮೂಲಕ ನಡೆಯುವುದರಿಂದ ಸುಲಭದಲ್ಲಿ ಜನ ನಂಬುತ್ತಾರೆ. ಜೋತೆಗೆ ಹೆಚ್ಚಿನವರು ಇಂದು ಪಾರ್ಟ್ ಟೈಮ್ ಉದ್ಯೋಗವನ್ನು ಬಯಸುವುದರಿಂದ ಇದು ಸೈಬರ್ ವಂಚಕರು ಸುಲಭದಲ್ಲಿ ಜನರನ್ನು ಬಲಿ ತೆಗೆದುಕೊಳ್ಳಲು ಸಹಯಕವಾಗುತ್ತದೆ. ಅದರಲ್ಲೂ ಮಹಿಳೆಯರು ವರ್ಕ್ ಫ್ರಮ್ ಹೋಮ್ ಬಯಸುವುದರಿಂದ ಹೆಚ್ಚು ಅಂತವರನ್ನು ಬಲೆಗೆ ಬೀಳಿಸಲಾಗುತ್ತದೆ.