ಅಂಜನಿ ಮಹಾದೇವ್ ದೇವಾಲಯವು ಮನಾಲಿಯಲ್ಲಿರುವ ಶಿವನ ಸಣ್ಣ ದೇವಾಲಯವಾಗಿದೆ. ಚಳಿಗಾಲದಲ್ಲಿ ಜಲಪಾತವು ಹೆಪ್ಪುಗಟ್ಟುತ್ತದೆ ಮತ್ತು 30 ಮೀಟರ್ ನೈಸರ್ಗಿಕ ಶಿವಲಿಂಗವನ್ನು ರೂಪಿಸುತ್ತದೆ. ಈ ರೀತಿ ಮಂಜುಗಡ್ಡೆಯಿಂದ ರೂಪುಗೊಂಡ ಶಿವಲಿಂಗವನ್ನು ಮತ್ತು ಪ್ರಕೃತಿಯ ಈ ಮ್ಯಾಜಿಕ್ ನೋಡಲು ನೂರಾರು ಭಕ್ತರು ಮತ್ತು ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಹಿಮಭರಿತ ಭೂದೃಶ್ಯದಿಂದ ಶಬ್ಧಿಸುವ ರಮಣೀಯ ಚಾರಣವು ದೇವಾಲಯಕ್ಕೆ ಕರೆದೊಯ್ಯುತ್ತದೆ. ಕಲ್ಲುಗಳ ಮೇಲೆ ನಡೆಯುತ್ತಾ, ನದಿಯನ್ನು ದಾಟುತ್ತಾ ಮತ್ತು ಮನಾಲಿಯಲ್ಲಿರುವ ಅಂಜನಿ ಮಹಾದೇವ್ ದೇವಾಲಯವನ್ನು ನೋಡಲು ಮೆಟ್ಟಿಲುಗಳನ್ನು ಬಳಸಿಕೊಂಡು ಹೋಗಬೇಕಾಗುತ್ತದೆ.
ಚಳಿಗಾಲದ ತಿಂಗಳುಗಳಲ್ಲಿ ತಾಪಮಾನವು ಘನೀಕರಿಸುವ ಹಂತಕ್ಕೆ ಇಳಿದಾಗ ಮಾತ್ರ ಮಂಜುಗಡ್ಡೆಯ ಶಿವಲಿಂಗವು ಗೋಚರಿಸುತ್ತದೆ. ಇದು ಹಳೆಯ ಬಂಡೆಯಾಗಿದ್ದು, ಅದರ ಮೇಲೆ ಬೀಳುವ ನೀರಿನಿಂದಾಗಿ ಪ್ರಸ್ತುತ ಆಕಾರವನ್ನು ಪಡೆದುಕೊಂಡಿದೆ.
ಅಂಜನಿ ಮಹಾದೇವ್ ಮಂದಿರ ಮನಾಲಿಯ ಸೋಲಾಂಗ್ ಕಣಿವೆಯ ಬುರ್ವಾ ಗ್ರಾಮದಲ್ಲಿದೆ. ಇದು ಮನಾಲಿಯಿಂದ ಸುಮಾರು 14 ಕಿ.ಮೀ ದೂರದಲ್ಲಿದೆ. ದೇವಾಲಯವನ್ನು ತಲುಪಲು ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ ಚಾರಣ ಮಾಡಬೇಕಾಗುತ್ತದೆ. ಕುದುರೆಗಳು ಮತ್ತು ಎಟಿವಿಗಳು ಸಹ ಬಾಡಿಗೆಗೆ ಲಭ್ಯವಿದೆ.
ಅಂಜನಿ ಮಹಾದೇವ್ ದೇವಾಲಯದ ಇತಿಹಾಸ ತ್ರೇತ ಯುಗದಿಂದ ಸಂಬಂದವನ್ನು ಹೊಂದಿದೆ. ಅಂಜನಿ ಮಹಾದೇವ್ ದೇವಾಲಯದ ಕಥೆಯು ಹನುಮಾನ್ನ ತಾಯಿ ಅಂಜನಿ ದೇವಿಗೆ ಸಂಬಂಧಿಸಿದೆ. ಅಂಜನಿ ದೇವಿ ಈ ಸ್ಥಳದಲ್ಲಿ ಶಿವನ ದರ್ಶನಕ್ಕಾಗಿ ಧ್ಯಾನ ಮಾಡಿದಳು. ಆಕೆಯ ಧ್ಯಾನಕ್ಕೆ ಮೆಚ್ಚಿ ಈ ಸ್ಥಳದಲ್ಲಿ ಶಿವನು ದರ್ಶನ ನೀಡಿದನು.
ಮನಾಲಿಯ ಅಂಜನಿ ಮಹಾದೇವ್ ದೇವಸ್ಥಾನದಲ್ಲಿ ಭೇಟಿ ನೀಡುವುದಾದರೆ ಕೆಲವೊಂದು ಕುತೂಹಲ ಮತ್ತು ಸಾಹಸಮಯ ರೋಮಂಚಾನಾಕಾರಿ ಸಂಗತಿಗಳನ್ನು ಅನುಭವಿಸಬಹುದು.
ಚಾರಣ – ಮನಾಲಿಯಲ್ಲಿರುವ ಅಂಜನಿ ಮಹಾದೇವ್ ದೇವಾಲಯವು ಹಿಮಾಚಲ ಪ್ರದೇಶದ ಅಮರನಾಥ ಯಾತ್ರಾ ಸ್ಥಳವೆಂದು ಜನಪ್ರಿಯವಾಗಿದೆ. ಈ ಹಿಮ ಶಿವಲಿಂಗವು ರಸ್ತೆಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಸುಂದರವಾದ ಜಲಪಾತದ ಕೆಳಗೆ ಇದೆ. ಕೆಲವೊಮ್ಮೆ, ಅಂಜನಿ ಮಹಾದೇವ್ ದೇವಾಲಯದ ಎತ್ತರವು 25 ಅಡಿಗಳನ್ನು ತಲುಪಬಹುದು. ಚಳಿಗಾಲದಲ್ಲಿ ಮಾತ್ರ ಚಾರಣ ಮಾಡಬಹುದು ಮತ್ತು ಹಿಮಭರಿತ ಭೂದೃಶ್ಯವನ್ನು ಕಾಣಬಹುದಾಗಿದೆ.
ಸಾಹಸ – ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಎಟಿವಿ ಮತ್ತು ಕುದುರೆ ಸವಾರಿಯಂತಹ ಸಾಹಸ ಚಟುವಟಿಕೆಗಳು ಲಭ್ಯವಿದೆ. ಜಿಪ್ಲೈನಿಂಗ್, ಸ್ಕೀಯಿಂಗ್ ಮತ್ತು ಇತರ ಚಳಿಗಾಲದ ಆಟಗಳು ಸಹ ಮೇಲ್ಭಾಗದಲ್ಲಿ ಲಭ್ಯವಿದೆ. ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ಭೇಟಿಯನ್ನು ಆನಂದಿಸಲು ಬೂಟುಗಳು, ಬೆಚ್ಚಗಿನ ಬಟ್ಟೆಗಳು ಮತ್ತು ಇತರ ಪರಿಕರಗಳನ್ನು ಇಲ್ಲಿ ಬಾಡಿಗೆಗೆ ಪಡೆಯಬಹುದಾಗಿದೆ.
ಛಾಯಾಗ್ರಹಣ – ಅಂಜನಿ ಮಹಾದೇವ್ ಮಂದಿರವು ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಇಷ್ಟಪಡುವ ಜನರಿಗೆ ಸೂಕ್ತವಾದ ಸ್ಥಳವಾಗಿದೆ. ನೈಸರ್ಗಿಕ ಶಿವಲಿಂಗ ಮತ್ತು ಹಿಮದಿಂದ ಆವೃತವಾದ ಕಲ್ಲಿನ ಭೂದೃಶ್ಯವನ್ನು ಹೊರತುಪಡಿಸಿ, ಹಿಮದಿಂದ ಆವೃತವಾದ ಅನೇಕ ಶಿಖರಗಳನ್ನು ನೋಡಬಹುದು. ಈ ಪ್ರದೇಶವು ಕ್ಯಾಮರ ಕಣ್ಣಿನಿಂದ ನೋಡಲು ಮತ್ತು ಸೆರೆಹಿಡಿಯಲು ಬಯಸುವವರಿಗೆ ಇತರ ಜಲಪಾತಗಳು ಲಭ್ಯವಿದೆ.
ಮನಾಲಿಯಲ್ಲಿರುವ ಅಂಜನಿ ಮಹಾದೇವ್ ಮಂದಿರಕ್ಕೆ ಭೇಟಿ ನೀಡಲು ಮತ್ತು ಅನ್ವೇಷಿಸಲು ಸುಮಾರು 2-3 ಗಂಟೆಗಳ ಸಮಯ ಇರಬೇಕು. ಇದು ಮನಾಲಿ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಸೋಲಾಂಗ್ ನಲ್ಲಿ ಒಂದು ಸಣ್ಣ ಚಾರಣವಾಗಿದೆ. ಅಂಜನಿ ಮಹಾದೇವ್ ದೇವಾಲಯದ ಚಾರಣ ದೂರವು 2 ಕಿ.ಮೀ ಆಗಿದ್ದು, ಕಾಲ್ನಡಿಗೆಯಲ್ಲಿ ದೂರವನ್ನು ಕ್ರಮಿಸಲು ಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಅಂಜನಿ ಮಹಾದೇವನ ಈ ಶಿವಲಿಂಗವು ಚಳಿಗಾಲದಲ್ಲಿ, ನವೆಂಬರ್ ನಿಂದ ಫೆಬ್ರವರಿಯ ಸಮಯದಲ್ಲಿ ಸೃಷ್ಟಿಯಾಗುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಲು ಇದು ಉತ್ತಮ ಸಮಯ. ಈ ಪ್ರದೇಶವನ್ನು ಅನ್ವೇಷಿಸಲು ಮತ್ತು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇದು ಅತ್ಯುತ್ತಮ ಸಮಯ. ಏಪ್ರಿಲ್ ನಲ್ಲಿಯೂ ಶಿವಲಿಂಗವನ್ನು ನೋಡಬಹುದು, ಆದರೆ ಆ ಹೊತ್ತಿಗೆ ಅದರ ಹೆಚ್ಚಿನ ಭಾಗವು ಕರಗಿರುತ್ತದೆ.