ಕೋವಿಡ್ ಸಮಯದಲ್ಲಿ ಟಿವಿಯಲ್ಲಿ ಮರುಪ್ರಸಾರವಾದ 80ರ ದಶಕದ ರಾಮಾಯಣ ಸೀರಿಯಲ್ ಇಂದಿಗೂ ಎಲ್ಲಾ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದಂತೆ ಕೂತಿಗೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಬಾಲಿವುಡ್ ಈ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ.
ಭಾರತೀಯ ಪುರಾಣ ಕಥೆಯಾಗಿರುವ ರಾಮಾಯಣದಲ್ಲಿ ಸ್ಯಾಂಡಲ್ವುಡ್ ನಟ ಯಶ್ ಕೂಡ ನಟಿಸಲಿದ್ದಾರೆ. ರಾಮಾಯಣದ ನಟ ಯಶ್ ರಾವಣನ ಪಾತ್ರದಾರಿಯಾಗಿ ಬಣ್ಣ ಹಚ್ಚಲಿದ್ದಾರೆ.
ರಾಮಾಯಣದ ಚಿತ್ರೀಕರಣವು 2024ರ ಮೊದಲಲ್ಲಿ ಆರಂಭವಾಗುವ ಸಾಧ್ಯತೆ ಇದೆ. ರಾಮಾಯಣದ ಪಾರ್ಟ್ 1ಗೆ ಹದಿನೈದು ದಿನದ ಕಾಲ್ ಶೀಟ್ ಅನ್ನು ಯಶ್ ನೀಡಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ.
ಇನ್ನು ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ನಿತೇಶ್ ತಿವಾರಿ ತಿವಾರಿ ಮತ್ತು ತಂಡವು ಫೆಬ್ರವರಿ 2024ರ ಬಳಿಕ ರಾಮಾಯಣದ ಶೂಟಿಂಗ್ ಆರಂಭಿಸುವ ನಿರೀಕ್ಷೆಯಿದೆ.
“ವಲ್ಡ್ ಆಫ್ ರಾಮಾಯಣ ಸೃಷ್ಟಿಸಲು ನಿತೇಶ್ ತಿವಾರಿ ಮತ್ತು ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಿನಿಮಾದ ಬ್ಲೂಪ್ರಿಂಟ್ ರೆಡಿಯಾಗಿದೆ.