ಓಲಿಂಪಿಕ್ ಪದಕ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಏಷ್ಯನ್ ಗೇಮ್ಸ್ 2023ರಲ್ಲಿ ಪದಕವಿಲ್ಲದೆ ಭಾರತಕ್ಕೆ ಮರಳುತ್ತಿದ್ದಾರೆ. ಹೌದು ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು.
ಕಂಚಿನ ಪದಕ ಗೆಲ್ಲುವ ಪ್ರಯತ್ನದಲ್ಲಿ ಚಾನು 117 ಕೆ.ಜಿ ಕ್ಲೀನ್ ಮತ್ತು ಜರ್ಕ್ ಭಾರ ಎತ್ತಲು ಹೋಗಿ ಕೆಳಗೆ ಬಿದ್ದ ಕಾರಣ ಅವರ ತೊಡೆಗೆ ಪೆಟ್ಟಾಗಿದೆ. ಈ ನಿಟ್ಟಿನಲ್ಲಿ ಚಾಲು ಪದಕ ಗೆಲ್ಲುವ ಕನಸು ವಿಫಲವಾಗಿದೆ.
ಉತ್ತರ ಕೊರಿಯಾದ ರಿ ಸಾಂಗ್-ಗಮ್, ಕ್ಲೀನ್ ಮತ್ತು ಜರ್ಕ್ ನಲ್ಲಿ 124 ಕೆಜಿ ಎತ್ತುವ ಮೂಲಕ ವಿಶ್ವ ದಾಖಲೆಯ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಥೈಲ್ಯಾಂಡ್ ನ ತಾನ್ಯಾಥಾನ್ ಸುಕ್ ಚರೋ ಕಂಚಿನ ಪದಕ ಪಡೆದರು.