ನವದೆಹಲಿ: ಇಂಡಿಯಾ ಹೆಸರು ಬದಲಾವಣೆ ವಿಚಾರ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಾಗ ಇದಕ್ಕೆ ಪೂರಕವಾಗುವಂತಹ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿಯೂ ಇಂಡಿಯಾ ಬದಲಿಗೆ ‘ಭಾರತ”ಹೆಸರಿನ ಪ್ರಸ್ತಾಪ ಬಂದಿದೆ.
ಇಂದು ಜಿ-20 ಶೃಂಗಸಭೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾಗ ದೇಶದ ಹೆಸರನ್ನು ‘ಭಾರತ್” ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿಯೂ ಭಾರತ ಎಂದು ಎಂದೇ ಉಲ್ಲೇಖಿತ ವಾಗಿತ್ತು. ಮತ್ತುತಮ್ಮ ಉದ್ಘಾಟನಾ ಭಾ಼ಷಣಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಜಿ-20 ಶೃಂಗಸಭೆ ಸ್ಥಳವಾದ ಭಾರತ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಸ್ವಾಗತಿಸಿದರು.
ಜಿ-20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖದ ನಂತರ ವಿವಾದಕ್ಕ ಕಾರಣವಾಗಿದ್ದು, ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ (INDIA) ಎಂದು ಹೆಸರಿಟ್ಟಿರುವುದರಿಂದ ಹೆಸರು ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಟೀಕಿಸುತ್ತಿವೆ.
ಜಿ-20 ಸಭೆಯಲ್ಲಿ ಭೂಕಂಪದಿಂದ ತತ್ತರಿಸಿರುವ ಮೊರಾಕ್ಕೊಗೆ ಕೈಲಾದ ಸಹಾಯವನ್ನು ಮಾಡುವುದಾಗಿಯು ಮತ್ತು ತಮ್ಮ ಸ್ವಾಗತ ಭಾಷಣದಲ್ಲಿ ʼಒಂದು ಭೂಮಿʼ ಎಂಬ ಧ್ಯೇಯ ವಾಕ್ಯವನ್ನು ಪುನಃ ಉಚ್ಚರಿಸಿದ್ದಾರೆ.
ಕೆಲವು ನಾಯಕರು ‘ಇಂಡಿಯಾ’ ಎಂಬ ಇಂಗ್ಲಿಷ್ ಹೆಸರನ್ನು ವಸಾಹತುಶಾಹಿ ಪರಂಪರೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಸಂವಿಧಾನದಲ್ಲಿ ದೇಶಕ್ಕೆ ಎರಡೂ ಹೆಸರುಗಳನ್ನು ಬಳಸಲಾಗಿದೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳುವುದರೊಂದಿಗೆ ‘ಭಾರತ್ ವರ್ಸಸ್ ಇಂಡಿಯಾ’ ಚರ್ಚೆಗೆ ಸ್ವಲ್ಪ ಕಡಿವಾಣ ಹಾಕಿದ್ದಾರೆ.