ಶಿಕ್ಷಕರೆಂಬ ಒಂದು ವೃತ್ತಿ ಇಲ್ಲದಿದ್ದರೆ ಜಗತ್ತಿನಲ್ಲಿ ಬೆರಾವ ವೃತ್ತಿಯ ಹುಟ್ಟೂ ಸಾಧ್ಯವಿರಲಿಲ್ಲ ಎಂಬ ಜಗತ್ ಪ್ರಖ್ಯಾತ ಮಾತೊಂದಿದೆ. ಅಂತೆಯೇ ಶಿಕ್ಷಕರೆಂಬ ವ್ಯಕ್ತಿ ಒಂದು ಮಗುವಿನ ಪಾರಿಪೂರ್ಣ ವ್ಯಕ್ತಿತ್ವ ನಿರೂಪಣೆಯಲ್ಲಿ ಪಾಲುದಾರರಾಗಿರುತ್ತಾರೆ.
ಹಿಟ್ಲರ್ ತನ್ನ ನಾಝಿ ದ್ವೇಷಕ್ಕಾಗಿ ಶಾಲಾ ಕಾಲೇಜುಗಳನ್ನು ಬಿಟ್ಟಿರಲಿಲ್ಲವಂತೆ. ತನ್ನ ನಾಝಿ ದ್ವೇಷವನ್ನು ಶಿಕ್ಷಕರ ಮೂಲಕವೂ ಹಿಟ್ಲರ್ ಸಾಧಿಸಿದ್ದ ಎಂಬ ಇತಿಹಾಸವಿದೆ. ಹಿಟ್ಲರ್ ನ ಆರ್ಯನ್ ವಾದವನ್ನು ಸಮರ್ಥಿಸುವ ಶಿಕ್ಷಕರು, ನಾಝಿ ವಿದ್ಯಾರ್ಥಿಗಳನ್ನು ನಿರ್ಧಾಕ್ಷೀಣವಾಗಿ ದಂಡಿಸುತ್ತಿದ್ದರು ಮತ್ತು ನಾಝಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಸಹಪಾಟಿ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಿಸುತ್ತಿದ್ದರು. ನಾಝಿ ವಿದ್ಯಾರ್ಥಿಗಳಿಗೆ ನೀಡುವ ತೊಂದರೆ ಅಪರಾಧವೇ ಅಲ್ಲ ಎನ್ನುವಂತೆ ಮಕ್ಕಳ ಮುಗ್ಧ ಮನವನ್ನು ಶಿಕ್ಷಕರೇ ಪೋಷಿಸುತ್ತಿದ್ದರು, ಎನ್ನುತ್ತದೆ ಇತಿಹಾಸದ ಪುಟಗಳು. ಇತ್ತೀಚೆಗೆ ಭಾರತದಲ್ಲೂ ಇಂತಹಾ ಸನ್ನಿವೇಶಗಳು ಸುದ್ದಿಯಾದವು.
ದ್ವೇಷದ ಬೀಜಗಳು ಜಗತ್ತಿನಾದ್ಯoತ ಪಸರಿಸುತ್ತಿರುವ ಈ ಸನ್ನಿವೇಷದಲ್ಲಿ, ಮುಗ್ಧ ಮನಗಳ ಮಧ್ಯೆ ಮಾನವೀಯತೆಯ ಬೀಜ ಬಿತ್ತಲು ಸಾಧ್ಯವಿರುವ ಅತ್ಯಂತ ಶಕ್ತಿಶಾಲಿ ವ್ಯಕಿಗಳಾಗಿದ್ದಾರೆ ಶಿಕ್ಷಕರು. ಒಂದೇ ಕುಟುಂಬ, ಒಂದೇ ಜಾತಿ ಮತ್ತು ಒಂದೇ ಧರ್ಮವನ್ನು ಅರಿತ ಮಕ್ಕಳು ಶಾಲೆಯಿಂದ, ಅಲ್ಲಿರುವ ಶಿಕ್ಷಕರಿಂದ ಭಾರತೀಯ ವಿವಿಧತೆಯಲ್ಲಿ ಏಕತೆಯನ್ನು ಕಲಿಯುತ್ತಾರೆ. ನೈಜ ಭಾರತೀಯತೆ ಮತ್ತು ಸಹಬಾಳ್ವೆ ಯ ಗುಣ ಮಕ್ಕಳು ಅರಿಯುವುದು ವಿವಿಧ ಜಾತಿ -ಧರ್ಮಗಳೊಂದಿಗಿನ ಒಡನಾಟದಲ್ಲಿ. ಈ ಸನ್ನಿವೇಶದಲ್ಲಿ ಬೇಲಿಯೆ ಎದ್ದು ಹೊಲವ ಮೇಯುವಂತಹ ಕೆಲಸ ಶಿಕ್ಷಕರಿಂದ ನಡೆದರೆ, ಮುಂದಿನ ಭಾರತೀಯ ತಲೆಮಾರು ಎತ್ತ ಸಾಗಬಹುದು ಎಂದು ನಾವುಊಹಿಸ ಬಹುದಾದ್ದೇ.
ಈ ಶಿಕ್ಷಕರ ದಿನಾಚರಣೆ ಪ್ರತಿಯೊಬ್ಬ ಶಿಕ್ಷಕರೂ ಉತ್ತಮ ನಾಗರಿಕ ಸೃಷ್ಟಿಯಲ್ಲಿ ಪಣತೊಡುವ ಪ್ರತಿಜ್ಞೆ ಮಾಡಬೇಕು. ಮತ್ತು ಮುಂಬರುವ ಕಾಲದಲ್ಲಿ ತಮ್ಮಿಂದ ದೇಶಕ್ಕಾಗುವ ಅಪಾಯವನ್ನು ತಮ್ಮ ಮೌಲ್ಯಯುತ ಪ್ರಧ್ಯಾಪನದ ಮೂಲಕ ತಡೆಯಬೇಕು.