ಪ್ರತೀಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆ ಎಂಬ ಘಟ್ಟ ಅತೀ ಪ್ರಾಮುಖ್ಯವಾದದ್ದು ಮದ್ದು ಭೀತಿ ಹುಟ್ಟಿಸುವಂತದ್ದೂ ಕೂಡ. ಜೀವನ ಪರ್ಯಂತ ನಿಭಾಯಿಸಬೇಕಿರುವ ಒಂದು ಬಂಧವನ್ನು ಕಟ್ಟುವಾಗ ಹಲವಾರು ವಿಷಯಗಳ ಬಗ್ಗೆ ಆದ್ಯತೆ ನೀಡಬೇಕಿದೆ.
ಹೆತ್ತವರು ಪ್ರಮುಖವಾಗಿ ಗಮನ ಹರಿಸಬೇಕಾದದ್ದು:
ಮದುವೆ ಎಂಬ ಬಂಧ ಯಾವಾಗಲೂ ಎರಡು ವ್ಯಕ್ತಿತ್ವದ ಒಮ್ಮತ ದಿಂದ ನಡೆಯ ಬೇಕಾದದ್ದು. ನಮ್ಮ ಮಕ್ಕಳ ಕೆಡುಕನ್ನು ನಾವು ಯಾವತ್ತೂ ಬಯಸುವುದಿಲ್ಲ ಎಂದು ತಿಳಿದುಕೊಳ್ಳುವ ಹೆತ್ತವರು, ತಮ್ಮ ಮಕ್ಕಳ ಸಂಗಾತಿಯ ಆಯ್ಕೆಯಲ್ಲಿ ಮಕ್ಕಳ ಸಹಮತವನ್ನು ಅರಿಯುವಲ್ಲಿ ಎಡವುತ್ತಾರೆ. ಒಂದು ಬಟ್ಟೆ ಕರೀದಿಸಬೇಕಿದ್ದರೂ ಮಕ್ಕಳ ಇಷ್ಟರುಸಾರ ನಡೆಯುವ ಹೆತ್ತವರು, ಮಕ್ಕಳ ಜೀವನದ ಮಹತ್ವ ನಿರ್ಧಾರದ ಹಕ್ಕನ್ನು ತಮಗರಿವಿಲ್ಲದೆಯೇ ಕಸಿದುಕೊಳ್ಳುತ್ತಾರೆ. ಹೆತ್ತವರ ಈ ನಿರ್ಧಾರ ಮಕ್ಕಳ ಇಷ್ಟ ಕ್ಕೆ ವಿರುದ್ಧ ವಾಗಿ ನಡೆದರೆ ಜೀವನ ಪರ್ಯಂತ ಎರಡು ಜೀವಗಳು ಖೇದಿಸ ಬೇಗುತ್ತದೆ.
ಮಕ್ಕಳು ಗಮನ ಹರಿಸಬೇಕಾದದ್ದು:
ವಿದ್ಯೆ ಒಬ್ಬ ವ್ಯಕ್ತಿಯನ್ನು ವ್ಯಕ್ತಿತ್ವ ವನ್ನು ಸೃಷ್ಟಿಸುತ್ತದೆ. ತಮ್ಮ ಹಕ್ಕು ಮತ್ತು ಕರ್ತವ್ಯದ ಅರಿವನ್ನು ಮೂಡಿಸುತ್ತದೆ. ತಮ್ಮ ಇಷ್ಟ ಕಷ್ಟ ಗಳನ್ನು ಹೆತ್ತವರೊಂದಿಗೆ ಮದುವೆ ಯಾಗ ಬೇಕಿರುವ ಹೆಣ್ಣು ಅಥವಾ ಗಂಡು ಮಕ್ಕಳು ಹಂಚಿಕೊಳ್ಳಬೇಕಿದೆ. ತಮ್ಮ ಸಂಗಾತಿಯಲ್ಲಿ ತಾವು ಬಯಸುವ ಗುಣ ಮೌಲ್ಯ ಮತ್ತು ನೀರಿಕ್ಷೆಯನ್ನು ವ್ಯಕ್ತಪಡಿಸಬೇಕು. ಇಷ್ಟವಿಲ್ಲದ ಬಂಧನಕ್ಕೆ ತಮ್ಮ ಹೆತ್ತವರ ಹಠಕ್ಕೆ ಮಣಿದು ಒಪ್ಪಿದರೆ, ಮತ್ತೊಬ್ಬ ವ್ಯಕ್ತಿಯ ಜೀವನ ಹರಣಕ್ಕೆ ತಾನು ಕಾರಣ ಕರ್ತನಾಗುತ್ತೇನೆ ಎಂಬ ಅರಿವಿದ್ದು, ಮಂದಿನ ಹೆಜ್ಜೆ ಇಡಬೇಕು.
ಜೀವನವೆಂಬ ಪಯಣದಲಿ ಸಂಗಾತಿ ಎಂಬ ಆಯ್ಕೆ ಒಬ್ಬ ವ್ಯಕ್ತಿಯ ಜಯ ಮತ್ತು ವಿನಾಶದ ದಾರಿ ಯಾಗುತ್ತದೆ. ಅದು ಬೆರಾರ ಒತ್ತಾಯಕ್ಕೆ ನಡೆಯದೆ, ಮನೋ ಸಮ್ಮತದಿಂದ ನಡೆದರೆ ಜೀವನದ ಪ್ರತೀ ಹೆಜ್ಜೆಯು ಅರ್ಥಪೂರ್ಣವಾಗಿರುವುದು.