ಚಂದ್ರಯಾನ -3 ಯಶಸ್ವಿಯಾದ ಬೆನ್ನಲ್ಲೆ ಪ್ರಗ್ಯಾನ್ ರೋವರ್ ತನ್ನ ಕೆಲಸಗಳನ್ನು ಪ್ರಾರಂಭಿಸಿದೆ.
ಚಂದ್ರನ ಮೇಕೆ ಅಧ್ಯಯನ ಆರಂಭಿಸಿರುವ ರೋವರ್ ಇದೀಗ ಚಂದ್ರನ ತಾಪಮಾನದ ಮಾಹಿತಿಯನ್ನು ಇಸ್ರೋಗೆ ನೀಡಿದೆ.
ಚೇಸ್ಟ್ ಅಥವಾ ‘ಚಂದ್ರಾಸ್ ಸರ್ಫೇಸ್ ಥರ್ಮೊ ಫಿಸಿಕಲ್ ಎಕ್ಸಪಿರಿಮೆಂಟ್ ನಿಂದ ಮೊದಲ ಅವಲೋಕನಗಳು ಬಂದಿವೆ. ಚಂದ್ರನ ಮೇಲ್ಮೈಯ ತಾಪಮಾನ ಅರ್ಥ ಮಾಡಿಕೊಳ್ಳಲು ಚೇಸ್ಟ್ ಚಂದ್ರನ ಮೇಲ್ಪದರವನ್ನು 10 ಸೆಂಟಿಮೀಟರ್ ನಷ್ಟು ಕೊರೆದು ಅದರ ಮಾಹಿತಿಯನ್ನು ಇಸ್ರೋಗೆ ರವಾನೆ ಮಾಡಿದೆ.
50 ಸೆಲ್ಸೊಯಸ್ ನಿಂದ 10 ಸೆಲ್ಸಿಯಸ್ ರವರೆಗೆ ಹಗಲಿನ ತಾಪಮಾನ ಇದೆ ಎಂದು ರೋವರ್ ತಿಳಿಸಿದೆ. -10 ಡಿಗ್ರಿ ಸೆಲ್ಸಿಯಸ್ ನಿಂದ 60 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ. 10 ಸೆನ್ಸಾರ್ ಗಳು ಚಂದ್ರನ 10 ಸೆ.ಮೀ ಆಳಕ್ಕೆ ಇಳಿದಿವೆ ಎಂದು ಇಸ್ರೋ ತಿಳಿಸಿದೆ.