ಜೀವನದಲ್ಲಿ ಖುಷಿಯಾಗಿರಬೇಕು ಅಂತ ಅನಿಸುತ್ತದೆ. ಆದರೆ ಯಾವಾಗಲೂ ಅದು ಆಗೋಕೆ ಸಾಧ್ಯವಾಗುವುದಿಲ್ಲ. ಕೆಲವರು ಎಲ್ಲಾ ನೋವನ್ನು ಮರೆತು ಸದಾ ಖುಷಿಯಾಗಿರುವ ಬಗ್ಗೆ ಗಮನ ಹರಿಸುತ್ತಾರೆ.
ಈ ರೀತಿ ನಮ್ಮ ಜೀವನದಲ್ಲು ಒಬ್ಬ ವ್ಯಕ್ತಿ ಇದ್ದೇ ಇರತ್ತಾರೆ. ಜೀವನದಲ್ಲಿ ಏನೇ ಆದರು ಮುಖದಲ್ಲಿ ಮತ್ತು ಮನದಲ್ಲಿ ಮಂದಹಾಸ ಹೊಂದಿರುತ್ತಾರೆ. ನೀವು ಸದಾ ಕಾಲ ಖುಷಿಯಾಗಿರಬೇಕೆಂದರೆ ನಿಮ್ಮ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ..
ಪ್ರತೀಕಾರ ಬೇಡ:
ಯಾವುದೇ ವ್ಯಕ್ತಿ ಮೇಲೆ ದ್ವೇಷ, ಪ್ರತೀಕಾರದ ಮನಸ್ಥಿತಿ ಹೊಂದಿರಬೇಡಿ. ಬದಲಿಗೆ ಕ್ಷಮೆ, ತಾಳ್ಮೆ ಅನ್ನುವುದು ಇರಲಿ. ಇದರಿಂದ ನಿಮ್ಮ ಮನಸ್ಸು ನೆಮ್ಮದಿ ನೀಡಲಿದೆ. ಇದರಿಂದ ನಿಜವಾಗಿಯು ಖುಷಿ ನಿಮ್ಮ ಜೊತೆ ಇರುತ್ತದೆ.
ಪರ್ಸನಲ್ ಆಗಿ ಪರಿಗಣಿಸುವುದು:
ಕಚೇರಿ, ಸಂಘಟನೆಗಳಲ್ಲಿ ನಮಗಿಂತ ಉನ್ನತ ಸ್ಥಾನದಲ್ಲಿರುವವರು ಏನಾದರೂ ಹೇಳಿದರೆ ಅದನ್ನು ಹೆಚ್ಚು ವೈಯಕ್ತಿಕವಾಗಿ ಪರಿಗಣಿಸದೆ ಕೆಲಸಕ್ಕೆ ನೀಡಿದ ಸೂಚನೆಯನ್ನು ಪಾಲಿಸಿದರೆ ಖುಷಿಯಾಗಿರಬಹುದು.
ನೆಗೆಟಿವಿಟಿ:
ನೆಗೆಟಿವ್ ಭಾವನೆಗಳನ್ನು ಮೊದಲು ಮನಸ್ಸಿನಿಂದ ಹೊರ ತೆಗೆಯಬೇಕು. ಇದರಿಂದ ನೆಗೆಟಿವ್ ತುಂಬುವ ಜನರಿಂದ ಹಲವರು ದೂರವಾಗುತ್ತಾರೆ. ಇದು ನಮ್ಮ ಗೆಳೆತನದ ಮೇಲೆ ಪರಿಣಾಮ ಬೀರಲಿದೆ.
ಇತರರ ಆಸಕ್ತಿ:
ಸದಾ ಸಂತಸದಿಂದ ಇರುವವರು ಬೇರೆಯವರ ಖುಷಿ ಹಾಗೂ ಆಸಕ್ತಿಗಳ ಬಗ್ಗೆ ಗಮನ ಹರಿಸುವುದರ ಜೊತೆಗೆ ಅವರ ಬೆಳವಣಿಗೆಗೂ ಕಾರಣವಾಗುತ್ತಾರೆ.
ಕಾರಣ ಬೇಕಿಲ್ಲ:
ಖುಷಿಯಾಗಿರಲು ಜನ ಹಿಂದಿನ ಘಟನೆ, ಮುಂದಿನ ದಿನಗಳ ಬಗ್ಗೆ ಯೋಚಿಸುವುದಿಲ್ಲ. ಬದಲಿಗೆ ಈಗಿನ ಕ್ಷಣವನ್ನು ಖುಷಿಯಿಂದ ಕಳಿಯುತ್ತಾರೆ.
ಕಂಪೇರ್ ಮಾಡಬೇಡಿ:
ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದ ಗುಣ ಖುಷಿಯಾಗಿರುವವರಲ್ಲಿ ಕಂಡುಬರುತ್ತದೆ. ಅವರು ತಮ್ಮನ್ನು ಎಂದಿಗೂ ನೆಗ್ಲೆಕ್ಟ್ ಮಾಡಿಕೊಳ್ಳುವುದಿಲ್ಲ.