ರಾಜ್ಯ ಸರ್ಕಾರ ನೀಡಿರುವ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದೆ. ಆದರೂ ಸರ್ಕಾರದ ಅಡಿಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ ಶಕ್ತಿ ಯೋಜನೆ ಮೂಲಕವಾದರೂ ನೌಕರರಿಗೆ ನಿರೀಕ್ಷೆಯಂತೆ ವೇತನ ಸಿಗುವುದು ಎನ್ನುವ ಆಸೆ ಹುಸಿಯಾಗಿದೆ.
ಸರ್ಕಾರ ನೀಡುತ್ತಿರುವ ಯೋಜನೆಯ ಹಣ ಕೇವಲ ಅರ್ಧದಷ್ಟಿರುವುದರಿಂದ ಚಾಲಕ, ನಿರ್ವಾಹಕರಿಗೆ ಮಾತ್ರ ವೇತನ ನೀಡಲಾಗಿದ್ದು, ಅಧಿಕಾರಿಗಳಿಗೆ ಸಂಬಳ ನೀಡಲು ಸಂಸ್ಥೆಯಲ್ಲಿ ಹಣ ಇಲ್ಲದಂತಾಗಿದೆ.
ಇಂಧನ, ನೌಕಕರ ವೇತನ, ಬಿಡಿಭಾಗಗಳ ಖರ್ಚು ಸೇರಿದಂತೆ ಹಲವಾರು ಖರ್ಚುಗಳಿಗೆ ಸರ್ಕಾರದ ಶಕ್ತಿ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದಂತೆ ಇವೆಲ್ಲದರ ಖರ್ಚು ನಿಭಾಯಿಸಲು ಅನುದಾನದಲ್ಲಿ ಸಿಗಬಹುದು ಎಂದು ನೌಕರರು ಆಶಿಸಿದ್ದರು. ಆದರೆ ಹಣದ ಕೊರತೆಯಿಂದ ನೌಕಕರ ಆಸೆ ಕುಸಿದಂತಾಗಿದೆ.
ಶಕ್ತಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಶೇ.50 ರಷ್ಟು ಹಣ ಪಾವತಿಯಾಗುತ್ತಿದ್ದಂತೆ ಕೆಎಸ್ ಆರ್ಟಿಸಿ ತನ್ನ ನೌಕರರಿಗೆ ವೇತನ ನೀಡಿದೆ.
ಜೂನ್ ತಿಂಗಳಿನಲ್ಲಿ 2.25 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವುಗಳ ಟಿಕೆಟ್ ಮೌಲ್ಯ 65.15 ಕೋಟಿ ರೂ. ಆಗಿದ್ದು, ಇದರ ಹಣದ ಮರುಪಾವತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ ಇದಕ್ಕಿ ಕೇಲವ 32.57 ಕೋಟಿ ರೂ ಮಾತ್ರ ಸಹಾಯವಾಗಿ ನೀಡಿದ್ದು, ಪೂರ್ತಿ ಪಾವರಿಸಿದರೆ ಮಾತ್ರವೇ ಉಳಿದ ಅಧಿಕಾರಿಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತದೆ.
ಇನ್ನು ಜೂನ್ ತಿಂಗಳಿನಲ್ಲಿ 20 ದಿನದ ಖರ್ಚಿನ ಮೊತ್ತ ನೀಡಲು ಸರ್ಕಾರ ಹೀಗೆ ಮಾಡಿದರೆ ಇನ್ನು ಜುಲೈ ತಿಂಗಳಿನಲ್ಲಿ 111.84 ಕೋಟಿ ರೂ. ಪಾವತಿಸಬೇಕಿದೆ. ಅದರ ಜೊತೆಗೆ ಜೂನ್ ತಿಂಗಳ 32.58 ಕೋಟಿ ರೂ. ಸೇರಿಸಿ ಒಟ್ಟು 144.42 ಕೋಟಿ ರೂ. ವಾಯವ್ಯ ಸಾರಿಗೆ ಸಂಸ್ಥೆಗೆ ಪಾವತಿ ಮಾಡಬೇಕಾಗುತ್ತದೆ.
ಸಾರಿಗೆ ಸಂಸ್ಥೆಗಳಲ್ಲಿ ಚಾಲಕ ನಿರ್ವಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇನ್ನು ಅಧಿಕಾರಿಗಳ ವೇತನವನ್ನು ಇನ್ನು ಪುರುಷ ಪ್ರಯಾಣಿಕರ ಆದಾಯವೇ ಆಧಾರವಾಗಿದೆ. ಈಗಾಗಲೇ ಚಾಲಕ ನಿರ್ವಾಹಕರ ಪ್ರೋತ್ಸಾಹ ಭತ್ಯೆ ಪ್ರಮಾಣ ಎರಡು ಪಟ್ಟಾಗಿದೆ. ಹೀಗಿರುವಾಗ ಕನಿಷ್ಠ ಅರ್ಧದಷ್ಟು ವೇತನವನ್ನಾದರೂ ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಉಳಿಕ ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.