ಮನುಷ್ಯ ತನ್ನ ಹೆಚ್ಚಿನ ಸಮಯವನ್ನು ಕಳೆಯಲು ಎನಾದರೂ ಒಂದು ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾನೆ. ಕೆಲವರಿಗೆ ಕೈತೋಟ ಹುಚ್ಚು ಇನ್ನು ಕೆಲವರಿಗೆ, ವಿವಿಧ ಅಡುಗೆಯ ಹುಚ್ಚು, ಕ್ರಾಪ್ಟ್, ಪೇಯಿಟಿಂಗ್, ಬರವಣಿಗೆ ಹೀಗೆ ಹಲವು ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ.
ಆದರೆ ಈ ಒಂದು ಹವ್ಯಾಸಗಳು ಮುಂದೆ ಒಂದು ದಿನ ನಮ್ಮ ಕೈ ಹಿಡಿಯಬಹುದು ಎಂಬ ಕಲ್ಪನೆಯು ಕೆಲವರಿಗೆ ಇರುವುದಿಲ್ಲ. ಕೆಲವರು ವ್ಯವಾಹರಿಕವಾಗಿ ಯೋಚನೆಯೇ ಮಾಡಿರುವುದಿಲ್ಲ. ಹವ್ಯಾಸವನ್ನು ಹವ್ಯಾಸವಾಗಿಯೇ ಬೆಳೆಸಲು ಬಯಸುತ್ತಾರೆ.
ಇಂದು ನಮ್ಮ ಸುತ್ತಮುತ್ತಲಿನಲ್ಲಿ ಅದೆಷ್ಟೋ ಮಹಿಳೆಯರು ತಮ್ಮ ಅಡುಗೆರುಚಿಯ ಕೈ ಚಳಕವನ್ನು ಸಣ್ಣಪ್ರಮಾಣದ ಉದ್ಯಮವನ್ನಾಗಿ ಬಳಸಿದಂತಹ ಉದಾಹರಣೆಗಳನ್ನು ಕಾಣಬಹುದು.
ಸಮೋಸ, ದೋಸೆ, ಇಡ್ಲಿ, ಆಪಾ ಹಾಗೂ ಮನೆಯಲ್ಲಿ ಕರಿದ ಚಕ್ಕುಲಿಯಂತಹ ಟೀ ಟೈಮ್ ಸ್ನಾಕ್ಸ್ಗಳು. ಬೇಕಾರಿಗಳಲ್ಲಿ ಲಭ್ಯವಿರುವುದನ್ನು ಕಾಣಬಹುದು.
ಇಂದು ಮನೆಯಲ್ಲೇ ತಯರಾದ ಜ್ಯೂಸ್ನ ಸಣ್ಣದಾದ ಕ್ಯಾನ್ಗಳು ಕೂಡಾ ನಾವು ಬೇಕರಿಗಳಲ್ಲಿ ಕಾಣಬಹುದು. ಇವೆಲ್ಲವು ಲೋಕಲ್ ಉತ್ಪನ್ನಗಳು ಹಾಗೂ ವಿವಿಧ ಹೆಸರಿನಿಂದ ಲಭ್ಯವಿರುತ್ತದೆ.
ಇನ್ನು ಕೆಲವರ ಅಚ್ಚುಮೆಚ್ಚಿನ ವ್ಯವಾಹಾರ ಎಂದರೆ ಕೇಕ್. ಬಹಳಷ್ಟು ಮಹಿಳೆಯರು ಇಂದು ಮನೆಯಲ್ಲಿ ಕೇಕ್ ತಯಾರು ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸಮಾಡುತ್ತಿದ್ದಾರೆ.
ಇನ್ನು ಕೆಲವು ವೃತ್ತಿಪರ ಮಹಿಳೆಯರು ಕೂಡ ಟೆರೇಸ್ ಮೇಲೆ ಗಾರ್ಡನ್ ಅದರಲ್ಲೂ ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟು ಅಧಿಕ ಸಂಪಾದನೆಯನ್ನು ಮಾಡುತ್ತಿರುತ್ತಾರೆ.
ಕಸೂತಿ ಕಲೆ ಗೊತ್ತಿರುವವರು ಕನಿಷ್ಠ ಎರಡು ಸಾವಿರದಿಂದ ಸಂಪಾದನೆ ಶುರುವಾದರೆ ಆಯಾ ವಿನ್ಯಾಸದ ಮೇಲೆ ಬೆಲೆ ಹೆಚ್ಚುತ್ತಾಲೇ ಹೋಗುತ್ತದೆ.
ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಹವ್ಯಾಸ ಅಂದುಕೊಂಡಿರುವ ಕೆಲಸಗಳು ಕೆಲವರ ಕೈ ಹಿಡಿದು ಬದುಕಿಗೆ ಆಧಾರವಾಗಿರುವುದಂತು ಸತ್ಯ.