ಮೊಬೈಲ್ ಸಿಮ್ ಪೋರ್ಟ್ ಮಾಡುವಂತೆ ಕ್ರೆಡಿಟ್ ಕಾರ್ಡ್ ಪೋರ್ಟ್ ಮಾಡುವ ಅವಕಾಶ ಇದೇ ವರ್ಷ ಅಕ್ಟೋಬರ್ 1ರಿಂದ ದೊರಕಲಿದೆ. ಅಕ್ಟೋಬರ್ 1 ರಿಂದ, ನೀವು ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ಗಳಿಗಾಗಿ ಕಾರ್ಡ್ ನೆಟ್ವರ್ಕ್ಗಳನ್ನು ಪೋರ್ಟ್ ಮಾಡಲು ಅಥವಾ ಬದಲಾಯಿಸಲು ಸಹ ಮುಕ್ತರಾಗಿರುತ್ತೀರಿ. ಈ ಹೊಸ ನಿಯಂತ್ರಣವು ಬಳಕೆದಾರರಿಗೆ ವಿವಿಧ ಕಾರ್ಡ್ ನೆಟ್ವರ್ಕ್ಗಳ ನಡುವೆ ಬದಲಾಯಿಸಲು ಅನುಮತಿಸುತ್ತದೆ.
ಕಾರ್ಡ್ ನೆಟ್ವರ್ಕ್ ಎಂದರೇನು?
ಕಾರ್ಡ್ ನೆಟ್ವರ್ಕ್ ಎನ್ನುವುದು ಹಣಕಾಸಿನ ಮೂಲಸೌಕರ್ಯವಾಗಿದ್ದು, ವ್ಯಾಪಾರಿಗಳು, ಕಾರ್ಡ್ ವಿತರಕರು ಮತ್ತು ಕಾರ್ಡ್ ಹೊಂದಿರುವವರ ನಡುವಿನ ವಹಿವಾಟುಗಳು ಮತ್ತು ಸಂವಹನಗಳನ್ನು ಬೆಂಬಲಿಸುತ್ತದೆ, ಕಾರ್ಡ್ ವಹಿವಾಟುಗಳ ದೃಢೀಕರಣ, ಕ್ಲಿಯರಿಂಗ್ ಮತ್ತು ಇತ್ಯರ್ಥವನ್ನು ಸುಲಭಗೊಳಿಸುತ್ತದೆ.
ಉದಾಹರಣೆಗೆ, ಕ್ರೆಡಿಟ್ ಕಾರ್ಡ್ಗಳಿಗೆ ಬಂದಾಗ, ಭಾರತದಲ್ಲಿ ಇರುವ ಕಾರ್ಡ್ ನೆಟ್ವರ್ಕ್ಗಳೆಂದರೆ ವೀಸಾ, ಮಾಸ್ಟರ್ಕಾರ್ಡ್, ಅಮೇರಿಕನ್ ಎಕ್ಸ್ಪ್ರೆಸ್, ಡೈನರ್ಸ್ ಕ್ಲಬ್ ಇಂಟರ್ನ್ಯಾಶನಲ್ ಮತ್ತು ರುಪೇ.
ಆರ್ಬಿಐ ಹೇಳಿದ್ದೇನು?
ಆರ್ಬಿಐ ಸುತ್ತೊಲೆಯ ಪ್ರಕಾರ ಗ್ರಾಹಕರಿಗೆ ತಮ್ಮ ವಿತರಣಾ ಬ್ಯಾಂಕ್ ಅಥವಾ ಹಣಕಾಸು ಕಂಪನಿಯ ಜತೆ ಮುಂದುವರೆಯುವ ಬದಲು ಅವರು ಬಯಸಿದ ಕಾರ್ಡ್ ನೆಟ್ವರ್ಕ್ಗೆ ಹೋಗುವ ಅವಕಾಶ ನೀಡಲಾಗಿದೆ.
ವೀಸಾ, ಮಾಸ್ಟರ್ಕಾರ್ಡ್, ರುಪೇಯಂತಹ ಕಾರ್ಡ್ ವಿತರಕರು ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್ವರ್ಕ್ಗಳಲ್ಲಿ ಕಾರ್ಡ್ಗಳನ್ನು ವಿತರಿಸಲು ತಿಳಿಸಲಾಗಿದೆ. ಇದು ಬ್ಯಾಂಕ್ ಮಾತ್ರವಲ್ಲದೆ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೂ ಅನ್ವಯವಾಗುತ್ತದೆ ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.
ಈ ನಿಯಮವನ್ನು ಅಕ್ಟೋಬರ್ 1ರಿಂದ ಜಾರಿಗೆ ತರಬೇಕು, ಕ್ರೆಡಿಟ್ ಕಾರ್ಡ್ ವಿತರಕರು ಗ್ರಾಹಕರಿಗೆ ತಮ್ಮ ಆಯ್ಕೆಯ ನೆಟ್ವರ್ಕ್ ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು ಎಂದು ಆರ್ಬಿಐ ಪ್ರಸ್ತಾಪಿಸಿದೆ. ಇದರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರು ಒಂದು ನೆಟ್ವರ್ಕ್ನಿಂದ ಇನ್ನೊಂದಕ್ಕೆ ಬದಲಾಯಿಸಿಕೊಳ್ಳಬಹುದು.
ಇತರೆ ಕಾರ್ಡ್ ನೆಟ್ವರ್ಕ್ಗಳ ಜತೆ ಟೈಯಪ್ ಮಾಡುವ ಸಾಮರ್ಥ್ಯಕ್ಕೆ ಮಿತಿ ಹಾಕುವುದನ್ನು ಆರ್ಬಿಐ ನಿರ್ಬಂಧಿಸಿದೆ. ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್ವರ್ಕ್ಗಳು ತಿದ್ದುಪಡಿ ಅಥವಾ ನವೀಕರಣದ ಸಮಯದಲ್ಲಿ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಬದಲಾಯಿಸಿ ಈ ನೂತನ ನಿಯಮಗಳಿಗೆ ತಕ್ಕಂತೆ ಗ್ರಾಹಕರೊಂದಿಗಿನ ಅಗ್ರಿಮೆಂಟ್ ಬದಲಾಯಿಸಿಕೊಳ್ಳಬೇಕು ಎಂದು ಆರ್ಬಿಐ ತಿಳಿಸಿದೆ.
ಒಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಕ್ರೆಡಿಟ್ ಕಾರ್ಡ್ ಇಷ್ಟವಾಗಿಲ್ಲ ಎಂದಾದರೆ ಮೊಬೈಲ್ ಸಿಮ್ ಅನ್ನು ಬೇರೆ ನೆಟ್ವರ್ಕ್ಗೆ ಬದಲಾಯಿಸಿದಂತೆ ಬೇರೆ ಕ್ರೆಡಿಟ್ ನೆಟ್ವರ್ಕಿನೊಂದಿಗೆ ಬದಲಾಯಿಸಲು ಗ್ರಾಹಕರಿಗೆ ಸಾಧ್ಯವಾಗಬೇಕು ಎಂದು ಆರ್ಬಿಐ ತಿಳಿಸಿದೆ.
ಇದು ಕಾರ್ಡ್ ವಿತರಕರಿಗೆ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್ವರ್ಕ್ಗಳಲ್ಲಿ ಕಾರ್ಡ್ಗಳನ್ನು ವಿತರಿಸಲು ಅವಕಾಶ ನೀಡುತ್ತದೆ. ಇದಲ್ಲದೆ, ‘ಕಾರ್ಡ್ ವಿತರಕರು ತಮ್ಮ ಅರ್ಹ ಗ್ರಾಹಕರಿಗೆ ಬಹು ಕಾರ್ಡ್ ನೆಟ್ವರ್ಕ್ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಲು ಆಯ್ಕೆಯನ್ನು ಒದಗಿಸುತ್ತಾರೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕರಡು ಹೇಳಿದೆ. ಈ ಆಯ್ಕೆಯನ್ನು ಗ್ರಾಹಕರು ವಿತರಿಸುವ ಸಮಯದಲ್ಲಿ ಅಥವಾ ನಂತರದ ಯಾವುದೇ ಸಮಯದಲ್ಲಿ ಬಳಸಬಹುದು.