ಒಡಿಶಾದ ಖಾಸಗಿ ಸುದ್ದಿ ಸಂಸ್ಥೆಯೊಂದು ಭಾರತದಲ್ಲೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುದ್ದಿ ನಿರೂಪಕಿ ಲೀಸಾ ಅವರನ್ನು ಪರಿಚಯಿಸಿತ್ತು.ಅದಾದ ನಂತರ ಕರ್ನಾಟಕದ ಖಾಸಗಿ ಸುದ್ದಿವಾಹಿನಿಯೊಂದು AI ಸುದ್ದಿ ನಿರೂಪಕಿಯನ್ನು ಪರಿಚಯಿಸಿತ್ತು. ಆದರೆ ಈಗಿನ ವಿಷಯವೇ ಬೇರೆ.
‘ನಮಸ್ಕಾರ ವೀಕ್ಷಕರೇ ಅಕ್ಕ ಟಿವಿ ನ್ಯೂಸ್ಗೆ ಸ್ವಾಗತ. ನಾನು ಅಕ್ಕ ಟಿವಿಯ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ನ್ಯೂಸ್ ರೀಡರ್ ಆಶಾ ಹೀಗೆಂದು ಸುಲಲಿತ ಕನ್ನಡದಲ್ಲಿ ಸ್ಪುಟವಾಗಿ ವಾರ್ತೆಯನ್ನು ಓದುವ ಮೂಲಕ ಗಮನ ಸೆಳೆದಿರುವುದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಪ್ರಾಯೋಗಿಕ ನಡೆಸಿಕೊಂಡು ಬರುತ್ತಿರುವ ನ್ಯೂಸ್ ಚಾನಲ್ ‘ಅಕ್ಕ’ ವಾಹಿನಿಯಲ್ಲಿ!
‘ಅಕ್ಕ’ ಟಿವಿ ವಾರ್ತೆಯನ್ನು ಪ್ರಥಮ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಅಂಕ ಆಶಾ ವಾರ್ತೆ ವಾಚಿಸಿರುವುದು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಾಧನೆಯೇ ಸರಿ..
ಅಕ್ಕ ಟಿವಿಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವನ್ನು ಬಳಸಿ ಪ್ರಾಯೋಗಿಕವಾಗಿ ನ್ಯೂಸ್ ಬುಲೆಟಿನ್ (News Bulletin) ಅನ್ನು ವಿದ್ಯಾರ್ಥಿನಿಯರು ನಿರ್ಮಿಸಿದ್ದಾರೆ. ಇಲ್ಲಿ ಎಐ ಸಹಾಯದಿಂದ ಸುದ್ದಿ ನಿರೂಪಕಿಯ ಧ್ವನಿ ಹಾಗೂ ಹಾಗೂ ದೃಶ್ಯವನ್ನು ಕ್ರಿಯೇಟ್ ಮಾಡಲಾಗಿದೆ’ ಎಂದು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಬುಲೆಟಿನ್ ನಿರ್ಮಿಸುವ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ನ್ಯೂಸ್ ಸ್ಕ್ರಿಪ್ಟ್ ಬರೆದು ವಿಡಿಯೊ ಫುಟೇಜ್ಗಳನ್ನು ರೆಕಾರ್ಡ್ ಮಾಡಲಾಯಿತು. ಎರಡನೇ ಹಂತದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಸ್ಕ್ರಿಪ್ಟ್ಗೆ ಧ್ವನಿಯನ್ನು ನೀಡಲಾಗಿದೆ. ಮೂರನೇ ಹಂತದಲ್ಲಿ ಎಐ ಮೂಲಕ ಮುದ್ರಿಸಿದ ಧ್ವನಿಗೆ ಮತ್ತೊಂದು ಎಐ ವೆಬ್ಸೈಟ್ ಸಹಾಯದಿಂದ ನ್ಯೂಸ್ ಅಂಕ ಅನ್ನು ರಚಿಸಲಾಗಿದೆ. ಕೊನೆಯ ಹಂತದಲ್ಲಿ ನ್ಯೂಸ್ ಅಂಕ, ವಿಡಿಯೊ ಫುಟೇಜ್, ಗ್ರಾಫಿಕ್ಸ್ ಹಾಗೂ ಹಿನ್ನೆಲೆ ಸಂಗೀತವನ್ನು ಸೇರಿಸಿ ಎಡಿಟ್ ಮಾಡಲಾಗಿದೆ’ ಎಂದು ವಿವರಿಸಿದರು.
‘ಅಕ್ಕ’ ಟಿವಿಯ ಹೊಸ ಪ್ರಯೋಗಕ್ಕೆ ನೋಡುಗರು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ವಿದ್ಯಾರ್ಥಿನೀಯರ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.