ರಾಕಿಂಗ್ ಸ್ಟಾರ್ ಯಶ್ ಜೀವನದಲ್ಲಿ ಜುಲೈ-18 ತುಂಬಾ ವಿಶೇಷ ದಿನವೇ ಆಗಿದೆ. ಈ ದಿನವನ್ನ ತುಂಬಾ ಬ್ಯುಟಿಫುಲ್ ಮಾಡಿದ್ದ ಪ್ರತಿಯೊಬ್ಬರಿಗೂ ಯಶ್ ಕಡೆಯಿಂದ ಒಂದು ಸಲಾಮ್ ಇದ್ದೇ ಇರುತ್ತದೆ.
ಈ ದಿನವನ್ನ ಯಶ್ ಯಾಕೆ ಅಷ್ಟು ಇಷ್ಟಪಡುತ್ತಿದ್ದರು ಎಂದರೆ ಆ ದಿನ ಕನ್ನಡದಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ಬಂದಿತ್ತು. ಈ ಚಿತ್ರದ ಮೂಲಕ ಕನ್ನಡಕ್ಕೆ ಹೊಸ ನಟಿ-ನಟಿಯರು ಪರಿಚಯ ಆಗಿದ್ದರು. ಆ ಸಾಲಿನಲ್ಲಿ ಇಂದಿನ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಇದ್ದರು. ಇವರ ಜೋಡಿಯ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲದೆ ಈ ಸಿನಿಮಾ ಥಿಯೇಟರ್ನಲ್ಲಿ 100 ದಿನ ಓಡಿತ್ತು ಮತ್ತು ವಿಮರ್ಶಕರೂ ಈ ಚಿತ್ರವನ್ನ ಕೊಂಡಾಡಿದ್ದರು.
ಮೊಗ್ಗಿನ ಮನಸ್ಸಿನ ರಾಕಿ ಭಾಯ್ ಮತ್ತು ರಾಧಿಕಾ ಪಂಡಿತ್ ಜೋಡಿ ಅಂದು ಮೋಡಿ ಮಾಡಿತ್ತು. ಆ ಸಿನಿಮಾದಲ್ಲಿ ಶುಭಾ ಪೂಂಜಾ ಕೂಡ ಇದ್ದರು. ಮನೋ ಮೂರ್ತಿ ಅವರ ಸಂಗೀತ ಕೂಡ ಉತ್ತಮ ರೀತಿಯಲ್ಲಿ ಮೋಡಿ ಮಾಡಿದ್ದವು.
ಯಶ್ ಚಿತ್ರ ಜೀವನದಲ್ಲಿ ಮೊಗ್ಗಿನ ಮನಸು ಎರಡನೇ ಸಿನಿಮಾ ಆಗಿತ್ತು. ಅದಕ್ಕೂ ಮೊದಲು ಜಂಬದ ಹುಡುಗಿ ಸಿನಿಮಾದಲ್ಲಿ ಯಶ್ ಅಭಿನಯಿಸಿದ್ದರು. ಆದರೆ 2008 ರಲ್ಲಿ ಬಂದ ಮೊಗ್ಗಿನ ಮನಸ್ಸು ಸಿನಿಮಾ ಯಶ್ ಕೈ ಹಿಡಿದಿತ್ತು. ಈ ಸಿನಿಮಾದಿಂದ ಕನ್ನಡ ಸಿನಿಪ್ರೇಮಿಗಳಿಗೂ ಯಶ್ ತುಂಬಾ ಪರಿಚಿತರಾದರು.
ಮೊಗ್ಗಿನ ಮನಸು ಸಿನಿಮಾ ಬಂದ ವರ್ಷದಲ್ಲಿಯೇ ರಾಕಿ ಸಿನಿಮಾ ಕೂಡ ಬಂದಿತ್ತು. ಹಾಗೆ ರಾಕಿ ಬಾಯ್ ಸಿನಿಮಾ ಜೀವನದಲ್ಲಿ ಮೊಗ್ಗಿನ ಮನಸು ಸಿನಿಮಾ ಇನ್ನೂ ಒಂದು ಸ್ಪೆಷಲ ಗಿಫ್ಟ್ ಅನ್ನು ಕೊಟ್ಟಿತ್ತು. ಈ ಚಿತ್ರದ ಮೂಲಕವೇ ಕನ್ನಡದ ಸಿಂಡ್ರೇಲಾ ರಾಧಿಕಾ ಪಂಡಿತ್ ತುಂಬಾ ಹತ್ತಿರ ಆಗಿದ್ದರು. ಜನರ ಈ ಜೋಡಿಯನ್ನೂ ಸಿನಿಮಾದಲ್ಲೂ ಒಪ್ಪಿಕೊಂಡಿದ್ದರು. ಮೊಗ್ಗಿನ ಮನಸು ಸಿನಿಮಾ ಹದಿಹರೆಯದ ಮನಸುಗಳ ಪ್ರೀತಿಯನ್ನ ಕಟ್ಟಿಕೊಟ್ಟಿತ್ತು. ಪ್ರೀತಿ-ಪ್ರೇಮ ಎಲ್ಲವೂ ಅಮರ ಅನ್ನೋ ಅರ್ಥದಲ್ಲಿಯೇ ಸಿನಿಮ ಕಥೆ ಸ್ಪೆಷಲ್ ಆಗಿತ್ತು. ಈ ಎಲ್ಲಾ ಕಾರಣಕ್ಕಾಗಿ ಯಶ್ ಗೆ ಜುಲೈ 18 ತುಂಬಾ ಸ್ಪೆಷಲ್ ಡೇ ಆಗಿದೆ.