ಸಾಮಾನ್ಯವಾಗಿ ಎಲ್ಲಾ ದೇವಾಲಯಗಳ ಆವರಣದಲ್ಲಿ ಮೊಬೈಲ್ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ ಹಾಗೆ, ದೇವಾಲಯವು ಜನರಿಗೆ ಸಭ್ಯ ಉಡುಪುಗಳನ್ನು ಧರಿಸಲು ಆದೇಶಿಸುತ್ತದೆ. ಆದರೆ ಕೇದರನಾಥ ದೇವಾಲಯದ ಆವರಣದಲ್ಲಿ ಇನ್ನುವರೆಗೂ ಈ ಕ್ರಮವನ್ನು ಜಾರಿಗೊಳಿಸಿರಲಿಲ್ಲ.
ಆದರೆ ಇಂದಿನಿಂದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ದೇವಾಲಯದ ಒಳಗೆ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿ ಎಂದು ಎಚ್ಚರಿಕೆ ಬೋರ್ಡ್ಗಳನ್ನು ಹಾಕಲಾಗಿದೆ ಎಲ್ಲೆಡೆ ಹಾಕಸಿದೆ.
ಕೇದಾರನಾಥ ದೇಗುಲದ ಆವರಣದೊಳಗೆ ಹಲವು ಎಚ್ಚರಿಕೆ ಫಲಕಗಳನ್ನು ಹಾಕಿರುವ ದೇವಾಲಯ ಸಮಿತಿ, ಯಾರೇ ಆಗಲಿ ಫೋಟೋ ತೆಗೆಯುವ ಅಥವಾ ವಿಡಿಯೋ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.ಅಲ್ಲದೆ, ದೇವಾಲಯದ ಆವರಣದಲ್ಲಿ ವಿವಿಧೆಡೆ ಬೋರ್ಡ್ಗಳನ್ನು ಹಾಕಿದ್ದು, ‘ಮೊಬೈಲ್ ಫೋನ್ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ ಮತ್ತು ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಸ್ಥಾಪಿಸುವುದನ್ನು ನಿಲ್ಲಿಸುವಂತೆಯೂ ಕೇಳಿಕೊಂಡಿದೆ. ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬರೆದಿರುವ ಬೋರ್ಡ್ಗಳಲ್ಲಿ ಹಾಕಲಾಗಿದೆ.
ಇನ್ನು, ಈ ಬಗ್ಗೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜಯ್ ಅಜೇಂದ್ರ ಮಾತನಾಡಿದ್ದು, ಧಾರ್ಮಿಕ ಸ್ಥಳವು ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಮತ್ತು ಭಕ್ತರು ಅದನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.
ಹಿಂದೆ ಕೆಲವು ಯಾತ್ರಾರ್ಥಿಗಳು ದೇವಸ್ಥಾನದೊಳಗೆ ಅಸಭ್ಯವಾಗಿ ವಿಡಿಯೋ ಮತ್ತು ರೀಲ್ಸ್ ಮಾಡುವುದರ ಜೊತೆಗೆ ಫೋಟೋ ಕ್ಲಿಕ್ ಮಾಡುತ್ತಿದ್ದರು. ಮತ್ತು ದೇವಸ್ಥಾನದ ಹೊರಗೆ ಯುವತಿಯೊಬ್ಬಳು ತನ್ನ ಗೆಳೆಯನಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ, ದೇವಾಲಯದ ಆವರಣಕ್ಕೆ ಪ್ರವೇಶಿಸುವ ಮೊದಲು ಭಕ್ತರು ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಲು ಕೇಳಿಕೊಂಡಿದ್ದಾರೆ ಎಂದೂ ವರದಿಗಳು ಹೇಳುತ್ತಿವೆ.