ಹೆಣ್ಣಿಗೆ ಕೂದಲು ಎಂಬುದು ಅಲಂಕಾರ ಹಾಗೂ ಸೌಂದರ್ಯಪ್ರಾಯವಾಗಿದೆ. ಕೆಲವರಿಗೆ ಬಾಲ್ಯದಲ್ಲಿಯೇ ದಟ್ಟನೆಯ ರೇಷ್ಮೆಯಂತಹ ನೀಳ ಕೂದಲು ದೊರಕಿದರೆ ಇನ್ನು ಕೆಲವರು ತಮ್ಮ ಚೋಟುದ್ದ ಕೂದಲನ್ನು ನೀಳವಾಗಿಸಲು ಹರಸಾಹಸ ಪಡುತ್ತಿರುತ್ತಾರೆ. ಆದರೆ ಇದೀಗ ಕೂದಲನ್ನು ಅಂದವಾಗಿಸುವ ಹಾಗೂ ಕೂದಲನ್ನು ಬಲಶಾಲಿಯಾಗಿಸುವ ಅನೇಕ ತಂತ್ರಜ್ಞಾನಗಳು ಟೆಕ್ನಿಕ್ಗಳು ಕಾಲಿಟ್ಟಿವೆ. ಅಂತಹದೇ ಒಂದು ವಿಧಾನವಾಗಿ ಹೇರ್ ಸ್ಟ್ರೇಟನಿಂಗ್ ಹಾಗೂ ಹೇರ್ ಸ್ಮೂತನಿಂಗ್ ಪ್ರವರ್ಧಮಾನದಲ್ಲಿದೆ.
ರೇಷ್ಮೆಯಂತಹ ಕೂದಲಿಗಾಗಿ ಸ್ಟ್ರೇಟನಿಂಗ್ ಹಾಗೂ ಸ್ಮೂತನಿಂಗ್
ಸ್ಟ್ರೇಟನಿಂಗ್ ಹಾಗೂ ಸ್ಮೂತನಿಂಗ್ ಕೂದಲನ್ನು ಆಕರ್ಷಕವಾಗಿಸುವಲ್ಲಿ ಪ್ರಧಾನವಾಗಿದೆ. ಕೂದಲಿನ ಕಾಳಜಿ ಹಾಗೂ ಪೋಷಣೆಗೆ ಸಮಯವಿಲ್ಲ ಎಂದಾದಲ್ಲಿ ಸ್ಮೂತನಿಂಗ್ ಹಾಗೂ ಸ್ಟ್ರೇಟನಿಂಗ್ ಹೆಚ್ಚು ಸಹಕಾರಿಯಾಗಲಿದೆ.
ಇದು ಕೂದಲನ್ನು ಸುಂದರಗೊಳಿಸುವುದು ಮಾತ್ರವಲ್ಲದೆ ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ. ಹೇರ್ ಸ್ಟ್ರೇಟನಿಂಗ್ಗೂ ಮುನ್ನ ಹೇರ್ ಸ್ಮೂತನಿಂಗ್ ಮೊದಲು ಬಂದಿತು ಎಂದು ಹೇಳಬಹುದು.
ಸ್ಟ್ರೇಟನಿಂಗ್ ವಿಧಾನವನ್ನು ಮೊದಲು ಆಫ್ರಿಕನ್ ಕೂದಲಿನ ಮೇಲೆ ಪ್ರಯೋಗಿಸಲಾಯಿತು. ಇಂತಹ ಕೂದಲಿನ ಚಿಕಿತ್ಸೆಗೆ ಈ ವಿಧಾನ ಹೆಚ್ಚು ಪ್ರಯೋಜನಕಾರಿ ಎಂದು ತಿಳಿಸಲಾಗಿದೆ. ಆದರೆ ನಂತರದ ದಿನಗಳಲ್ಲಿ ಹೇರ್ ಸ್ಟ್ರೇಟನಿಂಗ್ ಒಂದು ಫ್ಯಾಶನ್ ಆಗಿಯೇ ಬದಲಾಯಿತು.
ಬ್ರೆಜಿಲಿಯನ್ ಕೆರಾಟಿನ್ ಚಿಕಿತ್ಸೆ ಅಥವಾ ಬ್ರೆಜಿಲಿಯನ್ ಬ್ಲೋಔಟ್ ಎಂದು ಸಾಮಾನ್ಯವಾಗಿ ಕರೆಯಲಾದ ಕೂದಲು ಮೃದುಗೊಳಿಸುವಿಕೆಯನ್ನು ಬ್ರೆಜಿಲ್ನಲ್ಲಿ 2003 ರಲ್ಲಿ ಕಂಡುಹಿಡಿಯಲಾಯಿತು. ಈ ಎರಡೂ ವಿಧಾನಗಳ ನಡುವೆ ಸಾಕಷ್ಟು ವ್ಯತ್ಯಾಸವಿದ್ದು ಅದೇನು ಎಂಬುದನ್ನು ಕಂಡುಕೊಳ್ಳೋಣ
ಹೇರ್ ಸ್ಟ್ರೇಟನಿಂಗ್ ಎಂದರೇನು?
ಕೂದಲನ್ನು ನೇರಗೊಳಿಸುವ ಎರಡು ವಿಧಾನಗಳಿದ್ದು ಒಂದು ಶಾಶ್ವತವಾಗಿ ನೇರವಾಗಿಸುವ ಇನ್ನೊಂದು ತಾತ್ಕಾಲಿಕವಾಗಿ ನೇರವಾಗಿಸುವ ವಿಧಾನಗಳಾಗಿವೆ.
ಹಾಟ್ ಐರನ್ಗಳು ಅಥವಾ ಹಾಟ್ ಬಾಚಣಿಗೆಗಳಂತಹ ಹೀಟ್ ಸ್ಟೈಲಿಂಗ್ ಉಪಕರಣಗಳೊಂದಿಗೆ ತಾತ್ಕಾಲಿಕ ನೇರಗೊಳಿಸುವಿಕೆಯನ್ನು (ಸ್ಟ್ರೇಟನಿಂಗ್) ಮಾಡಲಾಗುತ್ತದೆ.
ಇದೊಂದು ತಾತ್ಕಾಲಿಕ ವಿಧಾನವಾಗಿದ್ದು ಕೂದಲಿನ ವಾಶ್ ನಂತರ ನಿಮ್ಮ ಹಿಂದಿನ ಸ್ವರೂಪಕ್ಕೆ ಕೂದಲು ಮರಳುತ್ತದೆ. ಹಾಗಾಗಿಯೇ ಇದು ತಾತ್ಕಾಲಿಕ ವಿಧಾನವಾಗಿದೆ.
ಪರ್ಮನೆಂಟ್ ಹೇರ್ ಸ್ಟೇಟನಿಂಗ್
ಕೂದಲಿನ ಪುನರ್ರಚನೆಗೆ ಹೀಟ್ ಅಪ್ಲೈ ಮಾಡಲಾಗುತ್ತದೆ ಅಂತೆಯೇ ಕೆಮಿಕಲ್ಗಳನ್ನು ಕೂದಲಿಗೆ ಹಚ್ಚಲಾಗುತ್ತದೆ. ಈ ಕೆಮಿಕಲ್ಗಳು ಕೂದಲನ್ನು ಸ್ಟ್ರೇಟ್ಗೊಳಿಸಲು ಸಹಕಾರಿಯಾಗಿವೆ ಹಾಗೂ ಕೂದಲನ್ನು ಮೃದುವಾಗಿಸುತ್ತದೆ.
ಆಫ್ರಿಕನ್ ಮಹಿಳೆಯರಲ್ಲಿ ಈ ವಿಧಾನದ ಪ್ರಯೋಗವನ್ನು ನಡೆಸಲಾಯಿತು ಹಾಗೂ ಶಾಶ್ವತ ಮತ್ತು ತಾತ್ಕಾಲಿಕ ಕೂದಲಿನ ಚಿಕಿತ್ಸೆಯ ವಿಧಾನದ ಅಂಕಿಅಂಶಗಳನ್ನು ಕಲೆಹಾಕಲಾಯಿತು.
ಸಮೀಕ್ಷೆಯ ಭಾಗವಾಗಿ 1,555 ಭಾಗವಹಿಸಿದವರು ರಾಸಾಯನಿಕ ಸ್ಟ್ರೇಟ್ನರ್ಗಳನ್ನು ಬಳಸುತ್ತಿದ್ದಾರೆಂಬುದನ್ನು ತಿಳಿಸಿದ್ದಾರೆ. ಲೀವ್ ಆನ್ ಶ್ಯಾಂಪೂ ಹಾಗೂ ಲೀವ್ ಆನ್ ಕಂಡೀಷನರ್ ಕೂದಲಿನ ಸ್ಟ್ರೇಟನರ್ಗೆ ಸಹಕಾರಿ ಎಂದೆನಿಸಿದೆ.
ಹೇರ್ ಸ್ಟ್ರೇಟನಿಂಗ್ ರಾಸಾಯನಿಕಗಳ ಬಳಕೆ
ಹೇರ್ ಸ್ಟ್ರೇಟನರ್, ಕ್ಷಾರೀಯ ಉತ್ಪನ್ನಗಳಾದ ಸೋಡಿಯಂ ಹೈಡ್ರಾಕ್ಸೈಡ್ (ಲೈ-ರಿಲಾಕ್ಸರ್), ಲಿಥಿಯಂ ಹೈಡ್ರಾಕ್ಸೈಡ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅಥವಾ ಈ ಅಂಶಗಳ ಸಂಯೋಜನೆಯನ್ನು ಒಳಗೊಂಡಿರುತ್ತವೆ.
ಈ ರಾಸಾಯನಿಕಗಳ ಹೆಚ್ಚಿನ pH, ಹೊರಪೊರೆ ಮಾಪಕಗಳನ್ನು ತೆರೆಯಲು ಮತ್ತು ಕೂದಲಿನ ನಾರುಗಳಿಗೆ ನೇರವಾಗಿ ತೆರೆದುಕೊಳ್ಳುತ್ತವೆ. ಈ ರಾಸಾಯನಿಕಗಳು ಕಾರ್ಟೆಕ್ಸಿಯೊಂದಿಗೆ ಸಂಪರ್ಕಕ್ಕೆ ಬಂದಾಗ, ಅವು ಕೆರಾಟಿನ್ನೊಂದಿಗೆ ಪ್ರತಿಕ್ರಿಯಿಸುತ್ತವೆ ಹಾಗೂ ಕೂದಲನ್ನು ನೇರವಾಗಿಸುತ್ತವೆ.
ಆದರೆ ಈ ಪ್ರಕ್ರಿಯೆಯಲ್ಲಿ ಕೂದಲು ನಯಗೊಳ್ಳುವುದಕ್ಕಿಂತ ಹೆಚ್ಚು ಹಾನಿಗೊಳಗಾಗಬಹುದು. ಕೂದಲಿನ ಗುಂಗುರನ್ನು ಈ ವಿಧಾನ ನೇರವಾಗಿಸುತ್ತದೆ ಹಾಗೂ ನೈಸರ್ಗಿಕ ಕೂದಲು ಹೊಸದಾಗಿ ಹುಟ್ಟುವವರೆಗೆ ಕೂದಲು ನೇರವಾಗಿಯೇ ಇರುತ್ತದೆ. ಶಾಶ್ವತ ಕೂದಲು ನೇರಗೊಳಿಸುವಿಕೆಯನ್ನು ಜಪಾನೀಸ್ ಸ್ಟ್ರೇಟನಿಂಗ್ ಎಂದೂ ಕರೆಯಲಾಗುತ್ತದೆ.
ಈ ವಿಧಾನವನ್ನು ನೀವು ಯಾವಾಗ ಆರಿಸಿಕೊಳ್ಳಬೇಕು?
ಗುಂಗುರು ಕೂದಲಿನಿಂದ ನಯವಾದ ಕೂದಲಿನವರೆಗೆ ಹೇರ್ ಸ್ಟ್ರೇಟನಿಂಗ್ ಹೊಂದುತ್ತದೆ. ಕೂದಲಿನ ರಚನೆಗೆ ಅನುಗುಣವಾಗಿ ಈ ವಿಧಾನವನ್ನು ಪ್ರತಿ 8-12 ವಾರಗಳಿಗೊಮ್ಮೆ ಪುನರಾವರ್ತಿಸಬೇಕಾಗುತ್ತದೆ.
ಹೇರ್ ಸ್ಟ್ರೇಟನಿಂಗ್ ಅಡ್ಡಪರಿಣಾಮಗಳು
ಕೆಮಿಕಲ್ ವಸ್ತುಗಳನ್ನು ನೇರವಾಗಿ ನೆತ್ತಿಗೆ ಬಳಸಬಾರದು. ಇದು ತ್ವಚೆಯನ್ನು ಸುಟ್ಟುಹಾಕಬಹುದು. ಅದಕ್ಕಾಗಿಯೇ ಇವುಗಳನ್ನು ಹಚ್ಚುವ ಮುನ್ನ ಕೂದಲಿನ ಉದ್ದಕ್ಕೂ ಮತ್ತು ಕಿವಿಗಳ ಮೇಲೆ ಸ್ವಲ್ಪ ಪೆಟ್ರೋಲೇಟಮ್ ಅನ್ನು ಹಚ್ಚಬೇಕು.
ಹೇರ್ ಸ್ಟ್ರೇಟನಿಂಗ್ನ ತಪ್ಪು ವಿಧಾನವು ನೆತ್ತಿಯ ಸುಡುವಿಕೆ ಹಾಗೂ ಕೂದಲಿನ ತುಂಡಾಗುವಿಕೆಗೆ ಕಾರಣವಾಗುತ್ತದೆ.
ಕೂದಲಿನ ಬೇರುಗಳ ಮೇಲೆ ಉಂಟಾಗುವ ಒತ್ತಡ ಹಾಗೂ ರಾಸಾಯನಿಕಗಳ ಪರಿಣಾಮ ಕೂದಲನ್ನು ಘರ್ಷಣೆಗೆ ಒಳಪಡಿಸುತ್ತವೆ ಅಂತೆಯೇ ಕೂದಲಿನ ನಿರೋಧಕ ಶಕ್ತಿ ಮತ್ತು ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
ಹೇರ್ ಸ್ಟ್ರೇಟ್ನಿಂಗ್ನಿಂದ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳೆಂದರೆ ಸುಕ್ಕುಗಟ್ಟಿದ ಕೂದಲು, ತಲೆಹೊಟ್ಟು, ಕೂದಲುದುರುವುದು, ಕೂದಲು ತೆಳುವಾಗುವುದು, ದುರ್ಬಲಗೊಳ್ಳುವುದು, ಕೂದಲು ಬಿಳಿಯಾಗುವುದು ಹಾಗೂ ಸೀಳು ತುದಿ.
ಹೇರ್ ಸ್ಮೂತನಿಂಗ್ ಎಂದರೇನು?
ಇದೊಂದು ತಾತ್ಕಾಲಿಕ ಕೂದಲಿನ ಚಿಕಿತ್ಸಕ ವಿಧಾನವಾಗಿದೆ. ಕೂದಲನ್ನು ನೇರಗೊಳಿಸಲು ಈ ವಿಧಾನ ಸಹಕಾರಿಯಾಗಿದೆ. ಕೂದಲಿನ ಪೋಷಣೆ ಹಾಗೂ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
ಈ ಪ್ರಕ್ರಿಯೆಯಲ್ಲಿ ಫಾರ್ಮಾಲ್ಡಿಹೈಡ್ ದ್ರಾವಣವನ್ನು ಕೂದಲಿಗೆ ಅದ್ದಿ ಸ್ಮೂತನಿಂಗ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ನಂತರ ಅದನ್ನು ಹೀಟ್ ಉಪಕರಣಗಳನ್ನು ಬಳಸಿ ಒಣಗಿಸಿ ಕೂದಲನ್ನು ನೇರವಾಗಿಸಲು ಚಪ್ಪಟೆಯಾಕಾರದ ಪರಿಕರವನ್ನು ಬಳಸಲಾಗುತ್ತದೆ.
ಈ ವಿಧಾನದ ಇನ್ನೊಂದು ಪ್ರಯೋಜನ ಎಂದರೆ ಹೇರ್ ಸ್ಟ್ರೇಟ್ನಿಂಗ್ನಲ್ಲಿ ಬಳಸುವ ರಾಸಾಯನಿಕಗಳ ಪ್ರಮಾಣಕ್ಕಿಂತ ಇದರಲ್ಲಿ ಕಡಿಮೆ ಇರುತ್ತದೆ. ಇದು ಕೂದಲಿಗೆ ಅಷ್ಟೊಂದು ಹಾನಿಯನ್ನುಂಟು ಮಾಡುವುದಿಲ್ಲ. ಇದು ಎಲ್ಲಾ ರೀತಿಯ ಕೂದಲಿಗೆ ಸೂಕ್ತವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದುದು.
ಬ್ರೆಜಿಲಿಯನ್ ಕೆರಾಟಿನ್ ಚಿಕಿತ್ಸೆಯು ಜನಪ್ರಿಯವಾಗಿದೆ. ಏಕೆಂದರೆ ಈ ವಿಧಾನವು ಬ್ಲೀಚ್ ಮಾಡಿದ ಕೂದಲಿಗೂ ಸೂಕ್ತವಾಗಿದೆ. ಕೂದಲನ್ನು ನೈಸರ್ಗಿಕವಾಗಿ ನಯವಾಗಿಸುತ್ತದೆ ಹಾಗೂ ಹೊಳಪನ್ನುಂಟು ಮಾಡುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ಮೊದಲಿಗೆ, ಫಾರ್ಮಾಲ್ಡಿಹೈಡ್ ದ್ರಾವಣವನ್ನು ಕೂದಲಿಗೆ ಹಚ್ಚಲಾಗುತ್ತದೆ. ದ್ರಾವಣದಲ್ಲಿರುವ ನೀರು ಕೆರಾಟಿನ್ ಅಣುವಿನ ಹೈಡ್ರೋಜನ್ ಬಾಂಡ್ಗಳನ್ನು ಒಡೆಯುತ್ತದೆ. ನಂತರ ಅದನ್ನು ಬ್ಲೋ ಡ್ರೈ ಮಾಡಲಾಗುತ್ತದೆ.
ಈ ವಿಧಾನ ಯಾವಾಗ ಸೂಕ್ತ?
ಕೂದಲಿನ ಸ್ಮೂತನಿಂಗ್ ಪರಿಣಾಮಗಳು 2 ರಿಂದ 5 ತಿಂಗಳ ಕಾಲ ಇರುತ್ತದೆ. ಗುಂಗುರು ಹಾಗೂ ಸುಕ್ಕುಗಟ್ಟಿದ ಕೂದಲಿಗೆ ಈ ವಿಧಾನ ಸೂಕ್ತ. ಏಕೆಂದರೆ ಇದು ಕೂದಲಿನ ರಚನೆಗೆ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ, ಅತ್ಯಂತ ಒರಟಾದ, ದಪ್ಪ ಅಥವಾ ಸುರುಳಿಯಾಕಾರದ ಕೂದಲಿಗೆ ಅಷ್ಟೊಂದು ಪರಿಣಾಮಕಾರಿಯಲ್ಲ.
ಹೇರ್ ಸ್ಮೂತನಿಂಗ್ ಅಡ್ಡಪರಿಣಾಮಗಳು
ಈ ಹಿಂದೆ, ಬ್ರೆಜಿಲಿಯನ್ ಕೆರಾಟಿನ್ ಚಿಕಿತ್ಸೆಯಲ್ಲಿ ಫಾರ್ಮಾಲ್ಡಿಹೈಡ್ ಅನ್ನು ಬಳಸಿದಾಗ ಗ್ರಾಹಕರಿಗೆ ಕಣ್ಣಿನ ಉರಿ, ಕಟು ವಾಸನೆ ಹಾಗೂ ಮೂಗು ಬಾಯಿಯ ಸುಡುವಿಕೆಯ ದುಷ್ಪರಿಣಾಮ ವರದಿಯಾಗಿದೆ. ಇದೀಗ ಮೀಥಿಲೀನ್ ಗ್ಲೈಕಾಲ್ ಅಥವಾ ಗ್ಲೈಆಕ್ಸಿಲಿಕ್ ಆಮ್ಲದಂತಹ ಫಾರ್ಮಾಲ್ಡಿಹೈಡ್ಗಳನ್ನು ಬಳಸಲಾಗುತ್ತಿದೆ.
ಸ್ಮೂತನಿಂಗ್ಗೆ ಬಳಸಲಾಗುವ ಫಾರ್ಮಾಲ್ಡಿಹೈಡ್ ಕಣ್ಣಿನ ಸಮಸ್ಯೆಗಳು, ನರಮಂಡಲದ ಸಮಸ್ಯೆಗಳು (ಉದಾಹರಣೆಗೆ, ತಲೆನೋವು ಮತ್ತು ತಲೆತಿರುಗುವಿಕೆ), ಉಸಿರಾಟ ಸಮಸ್ಯೆ, ವಾಕರಿಕೆ, ಎದೆನೋವು, ವಾಂತಿ, ದದ್ದುಗಳಿಗೆ ಕಾರಣವಾಗಿವೆ.
ಫಾರ್ಮಾಲ್ಡಿಹೈಡ್ ಆಸ್ತಮಾವನ್ನು ಹೆಚ್ಚಿಸುತ್ತದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ಕೂದಲಿನ ಮೃದುಗೊಳಿಸುವಿಕೆಯಲ್ಲಿ ಬಳಸಲಾಗುವ ಫ್ಲಾಟ್ ಐರನ್ ಕೂದಲಿಗೆ ಹೆಚ್ಚು ಹಾನಿಕಾರಕ ಎಂಬುದು ತಿಳಿದುಬಂದಿದೆ.
ಹೇರ್ ಸ್ಟ್ರೇಟನಿಂಗ್ಗಿಂತ ಸ್ಮೂತನಿಂಗ್ ಬೆಸ್ಟ್ ಏಕೆ?
ಇದು ಗ್ರಾಹಕರ ಕೂದಲಿನ ವಿಧ ಹಾಗೂ ಅವರ ಇಚ್ಛೆಯನ್ನು ಆಧರಿಸಿದೆ. ಕೆಲವರಿಗೆ ತಮ್ಮ ಕೂದಲು ನೈಸರ್ಗಿಕವಾಗಿ ನೇರವಾಗಿರಬೇಕೆಂಬ ಆಸೆ ಇರುತ್ತದೆ.
ಹೇರ್ ಸ್ಮೂತನಿಂಗ್ ಮಾಡುವುದರಿಂದ ಕೂದಲಿನ ಅಂದ ಹೆಚ್ಚುತ್ತದೆ ಹಾಗೂ ಹೆಚ್ಚು ನಯವಾಗುತ್ತದೆ. ಹೊಳಪು ಮತ್ತು ಮೃದುತ್ವವನ್ನು ಸುಧಾರಿಸಲು ಸಹ ಇದು ಉತ್ತಮವಾಗಿದೆ. ಹೇರ್ ಸ್ಮೂತನಿಂಗ್ನಲ್ಲಿ ಕೂದಲಿಗೆ ಹಾನಿ ಇದೆಯಾದರೂ ಸ್ಟ್ರೇಟನಿಂಗ್ನಷ್ಟಿಲ್ಲ ಎಂಬುದು ಇಲ್ಲಿ ಹೆಚ್ಚು ಉಲ್ಲೇಖವಾದುದು.
ಹೇರ್ ಸ್ಮೂತನಿಂಗ್ ಈಗಾಗಲೇ ಡ್ಯಾಮೇಜ್ ಆಗಿರುವ ಕೂದಲಿಗೆ ಸೂಕ್ತವಾದುದು. ಗುಂಗುರು ಕೂದಲನ್ನು ಇದು ನೇರವಾಗಿಸುವುದಿಲ್ಲ ಎಂಬುದನ್ನು ಗಮನಿಸಬೇಕು ಹಾಗೂ ದಪ್ಪನಾಗಿ ಕಾಣುವಂತೆ ಮಾಡುವುದಿಲ್ಲ. ಈ ಸಮಯದಲ್ಲಿ ಹೇರ್ ಸ್ಟ್ರೇಟನಿಂಗ್ಗೆ ಆದ್ಯತೆ ನೀಡಿ.
ಹೇರ್ ಸ್ಮೂತನಿಂಗ್ ವರ್ಸಸ್ ಹೇರ್ ಸ್ಟ್ರೇಟನಿಂಗ್
ಯಾವುದೇ ವಿಧಾನವನ್ನು ಅನ್ವಯಿಸುವಾಗಲೂ ಪರಿಣಿತ ಹಾಗೂ ತರಬೇತಿ ಪಡೆದ ವಿನ್ಯಾಸಕರ ಸಹಾಯ ಪಡೆದುಕೊಳ್ಳಿ. ಕೂದಲಿನ ರಚನೆ ಮತ್ತು ವಿನ್ಯಾಸವನ್ನು ನಿರ್ವಹಿಸಲು ಎರಡೂ ವಿಧಾನಗಳಿಗೆ ನಿಯಮಿತ ನಿರ್ವಹಣೆ ಹಾಗೂ ಕಾಳಜಿಯ ಅಗತ್ಯವಿರುತ್ತದೆ.
ಆದ್ದರಿಂದ ಪರಿಣಿತ ಹಾಗೂ ಉತ್ತಮ ಸಲೂನ್ಗಳಲ್ಲಿ ಈ ವಿಧಾನಗಳನ್ನು ಅನುಸರಿಸಿ. ಹೇರ್ ಸ್ಟೈಲಿಶ್ಗಳ ಸಲಹೆಯನ್ನು ಪಾಲಿಸಿ ಹಾಗೂ ಅವರು ತಿಳಿಸುವ ಅದೇ ಶ್ಯಾಂಪೂ ಕಂಡೀಷನರ್ಗಳ ಬಳಕೆಯನ್ನು ಮಾಡಿ.
ಕೂದಲಿನ ಕಾಳಜಿ ಹಾಗೂ ನಿರ್ವಹಣೆ
ಸಿಲಿಕೋನ್ ಆಧಾರಿತ ಕೂದಲು ಸಂರಕ್ಷಕ ಉತ್ಪನ್ನಗಳನ್ನು ಬಳಸಿ.
ಕೂದಲಿನ ಸಾಫ್ಟ್ನೆಸ್ ಮೇಲೆ ಪರಿಣಾಮ ಬೀರುವ ಕೃತಕ ಬಣ್ಣಗಳು ಮತ್ತು ಸುಗಂಧ, ರಾಸಾಯನಿಕಗಳನ್ನು ಬಳಸಬೇಡಿ
ಕೂದಲಿಗೆ ನೆತ್ತಿಯಿಂದ ಹಿಡಿದು ತುದಿಯವರೆಗೆ ಎಣ್ಣೆಯಿಂದ ಮಸಾಜ್ ಮಾಡಿ. ತೆಂಗಿನೆಣ್ಣೆಯು ಹಾನಿಗೊಳಗಾದ ಕೂದಲಿನ ಪ್ರೋಟೀನ್ ನಷ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಕೂದಲನ್ನು ಹೈಡ್ರೇಟ್ ಮಾಡಲು ಮತ್ತು ಬಲಪಡಿಸಲು ಲೀವ್-ಆನ್ ಕಂಡಿಷನರ್ ಮತ್ತು ಹೇರ್ ಮಾಸ್ಕ್ಗಳನ್ನು ಬಳಸಿ.
ಹೆಚ್ಚು ಹೀಟ್ ಹಾಗೂ ಸ್ಟೈಲಿಂಗ್ ಪರಿಕರಗಳನ್ನು ಕೂದಲಿಗೆ ಬಳಸಬೇಡಿ.