ನಾವು ಯಾವಾಗಲು ನಮ್ಮನ್ನು ನಂಬಿ ಬದುಕು ನಡೆಸಬೇಕಾಗುತ್ತದೆ. ಇನ್ನೊಬ್ಬರ ಮೇಲೆ ಅತಿಯಾಗಿ ಭರವಸೆ ಇಟ್ಟುಕೊಂಡು ಅವರು ಹೇಳಿದ ಹಾಗೆ ಕೇಳಿಕೊಂಡು ಬದುಕಲು ಹೋದರೆ ನಾವು ಕೆಲವೊಮ್ಮೆ ಕೆಟ್ಟ ಪರಿಸ್ಥಿತಿಯನ್ನು ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ಕಾನ್ಫಿಡೆಂಟ್ ಆಗಿ ಬದುಕಲು ಕೆಲವು ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು.
ಸ್ವಂತ ನಿರ್ಧಾರ ತೆಗೆದುಕೊಳ್ಳುವಲ್ಲಿ ಆಸಕ್ತಿ ತೋರಿಸಿ ಸುತ್ತ ನಡಿಯಿರಿ. ಪ್ರತಿ ಬಾರಿಯೂ ಬೇರೆಯವರ ಮೇಲೆ ಡಿಪೆಂಡ್ ಆಗಿ ನಿರ್ಧಾರ ತೆಗೆದುಕೊಳ್ಳುವುದನ್ನು ಸಾಧ್ಯವಾದಷ್ಟು ದೂರ ಮಾಡಿ. ನಿಮ್ಮದೇ ಸ್ವಂತ ನಿರ್ಧಾರ ಕೈಗೊಳ್ಳುವಲ್ಲಿ ನಿಮ್ಮನ್ನು ನೀವು ಮೊದಲು ನಂಬಿ, ಆಗ ನಿಮ್ಮದೇ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಸ್ವಂತ ನಿಲುವು ನಿಮ್ಮನ್ನು ಏಕಾಂಗಿಯಾಗಿ ಯಾವುದೇ ಸಮಸ್ಯೆಯ ವಿರುದ್ಧ ಹೋರಾಡಲು ನಿಮ್ಮ ಮನಸ್ಸು ಸಿದ್ಧವಾಗುತ್ತದೆ.
ನಿಮ್ಮ ಮಾತಿನ ಬಗ್ಗೆ ನಿಮಗೆ ಖಚಿತತೆ ಇರಲಿ. ನಿಮಗೆ ಯಾವುದೇ ವಿಷಯದಲ್ಲಿ ನಂಬಿಕೆ ಬರುವವರೆಗೂ ಅದನ್ನು ಮಾಡಲು ಹೋಗಬೇಡಿ. ನಿಮಗೆ ಸರಿ ಅನಿಸಿದರೆ ಮಾತ್ರ ಅದನ್ನು ಮುಂದುವರಿಸಿ. ಯಾರದೊ ಒತ್ತಾಯಕ್ಕೆ ನಿಮಗೆ ತಪ್ಪು ಅಂತ ಕಂಡುಬಂದರೂ ಸರಿ ಎನ್ನುವ ತಪ್ಪು ಉತ್ತರವನ್ನು ನೀಡಲು ಯಾವತ್ತು ಮುಂದಾಗದಿರಿ.
ನಿಮ್ಮ ಪಾಸ್ಟ್ ಅಥವಾ ಫ್ಯೂಚರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇವತ್ತಿನ ದಿನದಲ್ಲಿ ಬದುಕುವುದನ್ನು ಕಲಿಯಿರಿ. ನಿನ್ನೆ ಅಥವಾ ನಾಳೆ ಏನಾಗುತ್ತದೆ ಎಂದು ಯೋಚನೆ ಮಾಡಿ ಕಾಲಹರಣ ಮಾಡುವುದಕ್ಕಿಂತ ಈ ದಿನ, ಈ ಕ್ಷಣವನ್ನು ಉತ್ತಮಪಡಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ಸದಾ ಜಾಗರೂಕರಾಗಿರಿ.
ನಿಮ್ಮ ಆಪ್ತರ ಆಯ್ಕೆ ಸರಿಯಾಗಿ ಮಾಡಿಕೊಳ್ಳಿ. ನಿಮ್ಮ ಉತ್ತಮ ಕೆಲಸವನ್ನು ಅವರು ಪ್ರೋತ್ಸಾಹಿಸುವವರಾಗಿರಬೇಕು ನಿಮ್ಮನ್ನು ಯಾವಾಗಲೂ ಅನುಮಾನ, ಹಿಂಜರಿಕೆಯನ್ನು ಬಯಸದೇ ಇರುವವರಾಗಿರುವವರನ್ನು ನಿಮ್ಮ ಗೆಳೆಯರನ್ನಾಗಿ ಮಾಡಿಕೊಂಡರೆ ನೀವು ಯಾವುದೇ ಒಂದು ಒಳ್ಳೆಯ ಕೆಲಸ ಮಾಡಲು ಸ್ಪೂರ್ತಿ ಸಿಕ್ಕಂತಾಗುತ್ತದೆ.
ಪ್ರತಿದಿನ ಚೆನ್ನಾಗಿರಲು ಒಂದು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ದೃಢವಾದ ಮನಸಿರಲಿ. ನಾನು ಇದನ್ನು ಇವತ್ತು ಮಾಡಿ ತೀರುತ್ತೇನೆ ಎನ್ನುವ ದೃಢ ನಿರ್ಧಾರ ನಿಮ್ಮದಾಗಲಿ ಆಗ ಮಾತ್ರ ನೀವು ಕಾನ್ಫಿಡೆಂಟ್ ಆಗಿ ಮುಂದುವರೆಯಲು ಸಾಧ್ಯ.
ಕಷ್ಟಕರವಾದ ಸನ್ನಿವೇಶಗಳನ್ನು ನೀವು ಸಮರ್ಥವಾಗಿ ನಿಭಾಯಿಸುವ ತಾಳ್ಮೆಯನ್ನು ನಿಮ್ಮಲ್ಲಿ ತಂದುಕೊಳ್ಳಿ. ಮತ್ತು ಅಂತಹ ಕೆಲಸಗಳನ್ನು ಮಾಡಿ ಮುಗಿಸಿದಾಗ ನಿಮ್ಮ ಬಗ್ಗೆ ನೀವೇ ಹೆಮ್ಮೆಪಟ್ಟು ಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮಲ್ಲಿ ಧನಾತ್ಮಕತೆ ಮತ್ತಷ್ಟು ಹೆಚ್ಚುತ್ತದೆ