ಧಾರವಾಡ: ಧಾರವಾಡ- ಬೆಂಗಳೂರು ಮಧ್ಯೆ ‘ವಂದೇ ಭಾರತ್‘ ಇಂಟರ್ಸಿಟಿ ಸೆಮಿ ಹೈಸ್ಪೀಡ್ ರೈಲು ಸಂಚಾರಕ್ಕೆ ಧಾರವಾಡ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಧಾರವಾಡ – ಬೆಂಗಳೂರು ಮಧ್ಯದ ವಂದೇ ಭಾರತ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದರು.
ರಾಜ್ಯದ ಎರಡನೇಯ ವಂದೇ ಭಾರತ್ ಎಕ್ಸ್ ಪ್ರೆಸ್ ಇದಾಗಿದ್ದು, ಪ್ರಯಾಣಿಕರಿಗೆ ಒಂದು ಸುಂದರ ಪ್ರಯಾಣದ ಅನುಭವ ನೀಡಲಿದೆ. ತನ್ನ ವೇಗದಿಂದಲೇ ಗುರುತಿಸಿಕೊಂಡಿರುವ ಸ್ವದೇಶಿ ನಿರ್ಮಿತ ಎಕ್ಸ್ ಪ್ರೆಸ್, ಪ್ರಯಾಣದ ಸಮಯವನ್ನು ತಗ್ಗಿಸಿಲಿದೆ. ಧಾರವಾಡ – ಬೆಂಗಳೂರಿನೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ನೀಡಲಿರುವ ಇನ್ನೂ ನಾಲ್ಕು ವಂದೇ ಭಾರತ ಎಕ್ಸ್ ಪ್ರೆಸ್ ಗಳಿಗೂ ಸಹ ಚಾಲನೆ ನೀಡಿದರು.ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಶಾಸಕರಾದ ಶ್ರೀ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ವ್ಹಿ ಸಂಕನೂರ, ಹುಬ್ಬಳ್ಳಿ – ಧಾರವಾಡ ಮಾಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ವೀಣಾ ಬರದ್ವಾಡ, ಉಪ ಮಹಾಪೌರರಾದ ಶ್ರೀ ಸತೀಶ್ ಹಾನಗಲ್ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.