ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟಗೊಂಡಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬೈನಲ್ಲಿ ನಡೆದ 100 ದಿನಗಳ ವಿಶ್ವಕಪ್ ಸಮಾರಂಭದಲ್ಲಿ ವಿಶ್ವಕಪ್ 2023 ವೇಳಾಪಟ್ಟಿಯನ್ನು ಅನಾವರಣಗೊಳಿಸಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ.ಉದ್ಘಟನಾ ಪಂದ್ಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದ್ದು, ಅಂತಿಮ ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ನಡೆಯಲಿದೆ.
ಏಕದಿನ ವಿಶ್ವಕಪ್ ವೇಳಾಪಟ್ಟಿ :
* ಅಕ್ಟೋಬರ್ 5ರಂದು ಇಂಗ್ಲೆಂಡ್-ಕಿವೀಸ್ ಪಂದ್ಯ
*ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ
*ಅಕ್ಟೋಬರ್ 11ರಂದು ಡೆಲ್ಲಿಯಲ್ಲಿ ಭಾರತ-ಅಪ್ಘಾನಿಸ್ತಾನ ಪಂದ್ಯ
*ಅಕ್ಟೋಬರ್ 15ರಂದು ಅಹ್ಮದಾಬಾದ್ನಲ್ಲಿ ಭಾರತ-ಪಾಕ್ ಪಂದ್ಯ
*ಅಕ್ಟೋಬರ್ 19ರಂದು ಪುಣೆಯಲ್ಲಿ ಭಾರತ-ಬಾಂಗ್ಲಾ ಪಂದ್ಯ
*ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ಭಾರತ-ಕಿವೀಸ್ ಪಂದ್ಯ
*ಅಕ್ಟೋಬರ್ 29ರಂದು ಲಕ್ನೋದಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ
*ನವೆಂಬರ್ 2ರಂದು ಮುಂಬೈನಲ್ಲಿ ಭಾರತ-ಕ್ವಾಲಿಫೈಯರ್-2 ಪಂದ್ಯ
*ನವೆಂಬರ್ 5ರಂದು ಕೋಲ್ಕತ್ತಾದಲ್ಲಿ ಭಾರತ-ಆಫ್ರಿಕಾ ಪಂದ್ಯ
*ನವೆಂಬರ್ 11ರಂದು ಬೆಂಗಳೂರಿನಲ್ಲಿ ಭಾರತ-ಕ್ವಾಲಿಫೈಯರ್-1 ಪಂದ್ಯ
*ನವೆಂಬರ್ 15ರಂದು ಮುಂಬೈನಲ್ಲಿ ಮೊದಲ ಸೆಮಿಫೈನಲ್
*ನವೆಂಬರ್ 16ರಂದು ಕೋಲ್ಕತ್ತಾದಲ್ಲಿ 2ನೇ ಸೆಮಿಫೈನಲ್
*ನವೆಂಬರ್ 19ರಂದು ಅಹ್ಮದಾಬಾದ್ನಲ್ಲಿ ಫೈನಲ್
ಆಗಸದಿಂದ ವಿಶ್ವಕಪ್ ಟ್ರೋಫಿ ಅನಾವರಣ:
ವಿಶ್ವಕಪ್ ಟ್ರೋಫಿಯನ್ನು ಅತ್ಯಂತ ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಯಿತು. ಸುಮಾರು 1,20,000 ಅಡಿ ಎತ್ತರದಲ್ಲಿ ಬಲೂನ್ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಳಿಸಲಾಯಿತು. ಅತ್ಯಾಧುನಿಕ 4ಕೆ ಕ್ಯಾಮೆರಾಗಳ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಇದು ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.