ಹಸಿರು ತರಕಾರಿಗಳು ಬೇಸಿಗೆಯಲ್ಲಿ ಬೇಗ ಹಾಳಾಗುತ್ತವೆ, ಅದರಲ್ಲಿಯೂ ಕೊತ್ತಂಬರಿ ಬೇಗ ಹಾಳಾಗುತ್ತದೆ. ಇದಕ್ಕೆ ಕಾರಣವೆಂದರೆ ಕೊತ್ತಂಬರಿಯನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡದೇ ಇರುವುದು. ಇದರಿಂದ ಕೊತ್ತಂಬರಿಯೂ ಹಾಳಾಗುತ್ತೆ, ಹಣವೂ ವ್ಯರ್ಥವಾಗುತ್ತದೆ. ಹಾಗಾಗಿ ಕೊತ್ತಂಬರಿ ಸೊಪ್ಪನ್ನು ತಾಜಾವಾಗಿಡುವುದು ಬಹಳ ಮುಖ್ಯ.
ಕೊತ್ತಂಬರಿ ಸೊಪ್ಪನ್ನು ಶೇಖರಿಸುವುದು ಹೇಗೆ: ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು ದೊರೆಯುತ್ತದೆ. ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪನ್ನು ಎಲ್ಲಾ ತರಹದ ಅಡುಗೆಗೆ ಬಳಸಲಾಗುತ್ತದೆ. ಕೊತ್ತಂಬರಿ ಸೊಪ್ಪನ್ನು ಒಣಗಿಸಿ ಕೂಡ ಬಳಸಬಹುದು.ಆದರೆ ಅದು ಕೆಡದಂತೆ ಇಡುವುದು ತುಂಬಾ ಕಷ್ಟ.
ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಇಡಿ
ನೀವು ಮಾರುಕಟ್ಟೆಯಿಂದ ಮನೆಗೆ ತಂದ ಕೊತ್ತಂಬರಿ ಸೊಪ್ಪನ್ನು ಮೊದಲು ಒಂದು ಲೋಟ ಅಥವಾ ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅದರೊಳಗೆ ಅದ್ದಿ. ಹೀಗೆ ಮಾಡುವುದರಿಂದ ಕೊತ್ತಂಬರಿ ಸೊಪ್ಪು ಒಣಗದೇ ತಾಜಾತನದಿಂದ ಕೂಡಿರುತ್ತದೆ.
ನೆರಳಿನಲ್ಲಿ ಇಡಿ
ಕೊತ್ತಂಬರಿ ಸೊಪ್ಪನ್ನು ಯಾವಾಗಲೂ ನೆರಳಿನಲ್ಲಿ ಇಡಿ. ಕೊತ್ತಂಬರಿ ಸೊಪ್ಪನ್ನು ಬಿಸಿಲಿನಲ್ಲಿಟ್ಟರೆ ಬೇಗ ಕೆಡುತ್ತದೆ. ಕೊತ್ತಂಬರಿ ಸೊಪ್ಪನ್ನು ನೆರಳಿನಲ್ಲಿ ಇಡುವುದರಿಂದ ಅದು ಹೆಚ್ಚು ಕಾಲ ತಾಜಾವಾಗಿರುತ್ತದೆ. ಕೊತ್ತಂಬರಿ ಸೊಪ್ಪನ್ನು ನೆರಳಿನಲ್ಲಿ ಇಡುವುದರಿಂದ ಅದರ ಅಂಶಗಳು ನಾಶವಾಗುವುದನ್ನು ತಡೆಯುತ್ತದೆ. ತಾಜಾ ಕೊತ್ತಂಬರಿ ಸೇವಿಸುವುದರಿಂದ ಪೋಷಕಾಂಶಗಳು ಲಭಿಸುತ್ತದೆ. ಕೊತ್ತಂಬರಿಯಲ್ಲಿರುವ ಅಂಶಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಗಾಳಿಯಾಡದ ಡಬ್ಬದಲ್ಲಿ ಇರಿಸಿ
ಕೊತ್ತಂಬರಿ ಸೊಪ್ಪನ್ನು ಗಾಳಿಯಾಡದ ಡಬ್ಬದಲ್ಲಿ ಪ್ಯಾಕ್ ಮಾಡಿ. ಕೊತ್ತಂಬರಿ ಸೊಪ್ಪನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ ಅದು ಹಾಳಾಗುವುದನ್ನು ತಡೆಯುತ್ತದೆ ಮತ್ತು ತಾಜಾವಾಗಿರುತ್ತದೆ. ನೀವು ಒದ್ದೆಯಾದ ಟಿಶ್ಯೂ ಪೇಪರ್ನಲ್ಲಿ ಕೂಡ ಕೊತ್ತಂಬರಿ ಸೊಪ್ಪನ್ನು ಸುತ್ತಿಡಬಹುದು. ಈ ರೀತಿ ಮಾಡುವುದರಿಂದ ಕೊತ್ತಂಬರಿ ಸೊಪ್ಪು ತಾಜಾವಾಗಿರುತ್ತದೆ.
ಐಸ್ ನೀರಿನಿಂದ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ ಐಸ್ ನೀರಿನಿಂದ ಕೊತ್ತಂಬರಿಯನ್ನು ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಐಸ್ ನೀರಿನಿಂದ ತೊಳೆದರೆ ಹಸಿರಾಗಿಯೇ ಇರುತ್ತದೆ.