ವಿಜಯ್ ದೇವರಕೊಂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ಮೂರು ಸಿನಿಮಾ ದೇವರಕೊಂಡ ಅವರ ಕೈಯಲ್ಲಿದೆ. ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸೂಪರ್ ಹಿಟ್ ಗೀತಗೋವಿಂದಂ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಫೇಮಸ್ ಆಗಿರವ ವಿಷಯ ಎಲ್ಲರಿಗೂ ತಿಳಿದಿದೆ.
ಆದರೀಗ ಪಾರ್ಟ್-2ನಲ್ಲಿ ರಶ್ಮಿಕಾ ಬದಲು ಮೃಣಾಲ್ ಠಾಕೂರ್ ಅಭಿನಯಿಸುತ್ತಿದ್ದಾರೆ. ನಟಿ ಮೃಣಾಲ್ ಠಾಕೂಲ್ ಅವರಿಗೆ ‘ಸೀತಾ ರಾಮಂ’ ಸಿನಿಮಾದಿಂದ ಸಿಕ್ಕ ಯಶಸ್ಸಿನಿಂದ, ದಕ್ಷಿಣ ಭಾರತದಲ್ಲಿ ಅವರು ಭಾರಿ ಫೇಮಸ್ ಆಗಿದ್ದಾರೆ. ತೆಲುಗಿನ ಆ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ಈಗ ಟಾಲಿವುಡ್ನಿಂದ ಮೃಣಾಲ್ ಠಾಕೂರ್ ಅವರಿಗೆ ಹೊಸ ಆಫರ್ಗಳು ಬರುತ್ತಿವೆ. ಗುಡ್ ನ್ಯೂಸ್ ಏನೆಂದರೆ, ಗೀತಗೋವಿಂದಂ ಪಾರ್ಟ್ 2 ನಲ್ಲಿ ಅವರು ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇಬ್ಬರ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಮೂಡಿದೆ.
ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅವರು ಜೋಡಿಯಾಗಿ ನಟಿಸಲಿರುವ ಈ ಸಿನಿಮಾ ಈಗ ಸೆಟ್ಟೇರಿದೆ. ಟಾಲಿವುಡ್ನ ಸ್ಟಾರ್ ಹೀರೋ ವಿಜಯ್ ದೇವರಕೊಂಡ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ ‘ಗೀತ ಗೋವಿಂದಂ’. 2018ರಲ್ಲಿ ಪರಶುರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಖತ್ ಹೆಸರು ಮಾಡಿತ್ತು. ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ‘ಗೀತ ಗೋವಿಂದಂ’ ಸಿನಿಮಾಗೆ ಪ್ರೇಕ್ಷಕರು ಫುಲ್ ಫೀದಾ ಆಗಿದ್ದರು. ಆ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅದೇ ಚಿತ್ರತಂಡ ಮಗದೊಮ್ಮೆ ಕೈ ಜೋಡಿಸಿ ಎಂದು ಸುದ್ದಿ ಹರಡಿತ್ತು. ಆದರೆ ಅದಕ್ಕೆ ಸಮಯವೇ ಕೂಡಿ ಬಂದಿರಲಿಲ್ಲ. ಬರೋಬ್ಬರಿ 6 ವರ್ಷದ ನಂತರ ‘ಗೀತ ಗೋವಿಂದಂ’ ಚಿತ್ರದ ಹೀರೋ ಮತ್ತು ಡೈರೆಕ್ಟರ್ ಸಂಗಮ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಅವರ ಕಾಂಬಿನೇಷನ್ನ ಹೊಸ ಸಿನಿಮಾ ಸದ್ಯದಲ್ಲಿಯೇ ತೆರೆಯ ಮೇಲೆ ಬರಲಿದೆ.
ಈ ಚಿತ್ರಕ್ಕೆ ನಾಯಕಿಯಾಗಿ ಮೃಣಾಲ್ ಠಾಕೂರ್ ಆಯ್ಕೆ ಆಗಿದ್ದು, ಇನ್ನು ಉಳಿದ ಪಾತ್ರವರ್ಗದ ಬಗ್ಗೆ ಆದಷ್ಟು ಬೇಗ ಚಿತ್ರತಂಡ ಮಾಹಿತಿ ನೀಡಲಿದೆ. ಹೈದರಾಬಾದ್ನಲ್ಲಿ ಗ್ರ್ಯಾಂಡ್ ಆಗಿ ನಡೆದ ಮುಹೂರ್ತ ಸಮಾರಂಭದ ಫೋಟೋಗಳನ್ನು ಸ್ವತಃ ಮೃಣಾಲ್ ಠಾಕೂರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಇಗ ಸಕತ್ ವೈರಲ್ ಆಗುತ್ತಿದೆ.