ಮನೆಯಲ್ಲಿ ಒಂದು ಮದುವೆ ಮಾಡೋದು ಅತಿದೊಡ್ಡ ಕೆಲಸವಾಗಿರುತ್ತೆ. ಖುಷಿ, ಎಂಜಾಯ್ ಮೆಂಟ್ ನಡುವೆ ಇಡೀ ಕಾರ್ಯಕ್ರಮದ ಪ್ಲಾನಿಂಗ್ ಕೂಡ ನೀವೇ ಮಾಡಬೇಕಾದ ಎಷ್ಟೆಲ್ಲ ಕಷ್ಟವಾಗುತ್ತದೆ ಎಂದು ಅಂದಾಜಿಸಿದ್ದೀರಾ? ಇಲ್ಲ ಅಂದ್ರೆ ಮದುವೆಗೆ ಬೇಕಾಗಿರುವ ತಯಾರಿ ಹೇಗಿರಬೇಕು ಒಮ್ಮೆ ನೋಡಿ.. ಇಲ್ಲಿದೆ ಟಿಪ್ಸ್
• ಮದುವೆಗೆ ಬಜೆಟ್ ಸೆಟ್ ಮಾಡಿ, ಅದಕ್ಕೆ ಸ್ಟಿಕ್ ಆನ್ ಆಗಿ.
• ಮದುವೆಯ ಪ್ರತಿ ಹೆಜ್ಜೆಯನ್ನು ಪಟ್ಟಿ ಮಾಡಿಕೊಳ್ಳಿ.
• ಮದುವೆ ಡೆಕೊರೇಷನ್ ಹೇಗಿರಬೇಕು ನೋಡಿಕೊಳ್ಳಿ.
• ನಿಮ್ಮ ಜೊತೆಗೆ ಮತ್ತೊಬ್ಬರ ಸಹಾಯ ತಗೊಳ್ಳಿ.
• ಮದುವೆ ದಿನಾಂಕ ಮತ್ತು ಅದು ಸೀಸನ್ ಯಾವುದು ಎಂದು ನೋಡಿಕೊಂಡು ಪ್ಲಾನ್ ಮಾಡಿ.
• ಮದುವೆ ಲೊಕೇಷನ್ ಪೈನಲ್ ಮಾಡಿಕೊಳ್ಳಿ.
• ಮದುವೆಗೆ ಆಹ್ವಾನಿಸುವವರ ಪಟ್ಟಿ ರೆಡಿ ಮಾಡಿಕೊಳ್ಳಿ.
• ಮದುವೆ ಬಟ್ಟೆ, ಜ್ಯುವೆಲರಿ ಖರೀದಿ ಮಾಡಿ.
• ಅಗತ್ಯವಿರುವವರಿಗೆ ಸಂಚಾರ ವ್ಯವಸ್ಥೆ, ರೂಂ ವ್ಯವಸ್ಥೆ ನೊಡಿ.
• ಅನಗತ್ಯ ವಸ್ತುಗಳ ಖರೀದಿ ಬೇಡ.
• ಫುಡ್ ಮೆನು ರೆಡಿ ಮಾಡಿಕೊಳ್ಳಿ, ಫೋಟೋಗ್ರಾಫರ್ ಕಾಂಟ್ರ್ಯಾಕ್ಟ್ ಮುಂಚಿತವಾಗಿಯೇ ಬುಕ್ ಮಾಡಿಕೊಳ್ಳಿ.
• ಮದುವೆಯನ್ನು ಅಧಿಕೃತವಾಗಿ ರಿಜಿಸ್ಟರ್ ಮಾಡಿಸೋದನ್ನ ಮರೆಯಬೇಡಿ.