ಅನೇಕರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಇದಕ್ಕೆ ನಾನಾ ಕಾರಣವಿದೆ. ಅದರಲ್ಲಿ ಕೈ, ಬೆರಳು ನೋವು ಕೂಡ ಒಂದು. ಹೇಳಿ ಕೊಳ್ಳುವುದಕ್ಕೆ ಒಂಥರಾ ಅನ್ನಿಸಿದರು ಅದರ ನೋವು ತುಂಬಾ ಸಮಸ್ಯೆ ಉಂಟುಮಾಡುತ್ತದೆ. ಈ ಬೆರಳು ನೋವು ರಾತ್ರಿಯ ವೇಳೆ ನಿದ್ರೆಯ ಭಂಗಿ ಸರಿಯಾಗಿಲ್ಲ ಎಂದಾದರೆ ಶರೀರದ ಅಥವಾ ಕೈಗಳ ನೋವು ಕಾಣಿಸಿಕೊಳ್ಳುವುದು ಸಹಜವಾಗಿದೆ.
ಇನ್ನು ಕೆಲವರಿಗೆ ಹಗಲಿನ ಹೆಚ್ಚಿನ ಕೆಲಸ ಮಾಡಿ ನೋವಾಗಿದ್ದರಿಂದ ರಾತ್ರಿ ಕೈಗಳ ನೋವಿಗೆ ಕಾರಣವಾಗುತ್ತದೆ. ಕೈ ಅಥವಾ ಶರೀರದಲ್ಲಿನ ನೋವು ಸಾಮಾನ್ಯ ಸಂಗತಿಯಾದರೂ ಕೈ ಬೆರಳುಗಳ ನೋವು ವಿರಳವಾಗಿದೆ. ಇಂದು ಅನೇಕ ಮಂದಿ ಬೆರಳಿನ ನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಅವರ ನಿದ್ರೆಗೆ ಭಂಗವಾಗುತ್ತಿದೆ ಎಂದು ವೈದ್ಯರು ತಿಳಿಸುತ್ತಾರೆ.
ಕೈ ಬೆರಳುಗಳಲ್ಲಿ ನೋವು ಕಾಣಿಸಿಕೊಂಡರೆ ಅದು ನರಗಳ ಸಮಸ್ಯೆಯಾಗಿರಬಹುದು. ಇದರ ಹೊರತಾಗಿ ಯಾವುದಾದರೂ ಪೆಟ್ಟು, ಗಾಯ, ಬ್ಯಾಕ್ಟೀರಿಯಾ ಇನ್ಫೆಕ್ಷನ್ ಕಾರಣದಿಂದ ಕೈ ಬೆರಳುಗಳಲ್ಲಿ ಜುಮುಗುಡುವಿಕೆ ಅಥವಾ ನೋವು ಕಾಣಿಸಬಹುದು.
ವಿಟಮಿನ್ ಬಿ12 ಕೊರತೆಯಿಂದಾಗಿ ಶರೀರದಲ್ಲಿ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆಯಿಂದಾಗಿ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದಲೇ ರಾತ್ರಿಯ ಸಮಯದಲ್ಲಿ ಕೈ ಬೆರಳುಗಳ ನೋವು ಕಾಣಿಸಿಕೊಳ್ಳುತ್ತದೆ.
ಮಧುಮೇಹಿಗಳು ಅನೇಕ ಶಾರೀರಿಕ ಸಮಸ್ಯೆಯನ್ನು ಅನುಭವಿಸುತ್ತಾರೆ. ಮಧುಮೇಹ ಸಮಸ್ಯೆ ಹೊಂದಿರುವ ಹೆಚ್ಚಿನ ಜನರಿಗೆ ರಾತ್ರಿ ಮಲಗಿದಾಗ ಕೈ ಬೆರಳಿನಲ್ಲಿ ನೋವು ಬಂದ ಹಾಗೆ ಅನಿಸುತ್ತದೆ.
ಎಚ್ಐವಿ, ಏಡ್ಸ್, ಎಪ್ಸ್ಟೀನ್-ಬಾರ್ ಹರ್ಪಿಸ್ ಸಿಂಪ್ಲೆಕ್ಸ್, ಲೈಮ್ ಖಾಯಿಲೆ, ಸರ್ಪಸುತ್ತು, ಸೈಟೊಮೆಗಾಲೊ ವೈರಸ್ ನಂತಹ ಸೋಂಕುಗಳನ್ನು ಮೊದಲೇ ಹೊಂದಿದ ವ್ಯಕ್ತಿಗಳಿಗೆ ರಾತ್ರಿ ಮಲಗುವಾಗ ಕೈ ಮತ್ತು ಕಾಲಿನ ಬೆರಳುಗಳಲ್ಲಿ ಉರಿ ಮತ್ತು ಜುಮ್ಮೆನಿಸುವ ಹಾಗೆ ಫೀಲ್ ಆಗುತ್ತದೆ.
ಕೈ ಬೆರಳುಗಳ ನೋವಿಗೆ ಇಲ್ಲಿದೆ ಪರಿಹಾರ:
ಮನೆಯಲ್ಲಿಯೇ ಕೆಲವು ಸುಲಭ ವಿಧಾನಗಳನ್ನು ಬಳಸುವ ಮೂಲಕ ಕೈಬೆರಳುಗಳಿಗೆ ಅಲ್ಪಮಟ್ಟದ ನೋವಿನಿಂದ ಆಚೆ ಬರಲು ಈ ಕೆಳಗಿನ ಪರಿಹಾರಗಳನ್ನು ಅನುಸರಿಸಿ
• ರಾತ್ರಿ ಮಲಗುವ ಸಮಯದಲ್ಲಿ ಕೈಗಳ ಮೇಲೆ ಯಾವುದೇ ಒತ್ತಡವನ್ನು ಹಾಕಬೇಡಿ. ಕುತ್ತಿಗೆ ಮತ್ತು ಬೆನ್ನುಮೂಳೆಗೆ ಆಧಾರವಾಗುವಂತೆ ಮೃದುವಾದ ದಿಂಬನ್ನು ಉಪಯೋಗಿಸಬೇಕು.
• ವಿಟಮಿನ್ ಕೊರತೆಯಿಂದ ದೂರವಿರಲು ಪೌಷ್ಠಿಕ ಆಹಾರಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬೇಕು.
• ಕೈಗಳಿಗೆ ರಕ್ತ ಸಂಚಲನ ಸರಿಯಾಗಿ ನಡೆಯಲು ವ್ಯಾಯಾಮ ಮಾಡುವ ಹಾಗೆ ನೋಡಿಕೊಳ್ಳಬೇಕು.
• ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವಂತ ಆಹಾರಗಳನ್ನು ಸೇವಿಸಬಾರದು.
ಮನೆಯಲ್ಲಿ ಈ ಕೆಲವು ಪರಿಹಾರಗಳನ್ನು ಅನುಸರಿಸಿದರೂ ಕೂಡ ಕೈಬೆರಳಿಗೆ ನೋವು ಬಂದರೆ ಅಲ್ಲದೆ ರಾತ್ರಿಯಲ್ಲಿ ನಿದ್ರೆ ಅಡ್ಡಿ ಉಂಟುಮಾಡುವ ಕೈಗಳ ನೋವನ್ನು ನಿರ್ಲಕ್ಷ ಮಾಡದೇ ವೈದ್ಯರನ್ನು ಭೇಟಿಯಾಗಿ ವೈದ್ಯರ ಸಹಾಯದಿಂದ ಚಿಕಿತ್ಸೆ ಪಡೆಯುವುದು ಉತ್ತಮ.