ಈಗಿರುವ ತಂತ್ರಜ್ಞಾನ ಒಂದೆಡೆ ಸಹಾಯಕವಾದರೂ ಮತ್ತೊಂದೆಡೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಈ ಗ್ಯಾಜೆಟ್ ಗಳನ್ನು ಹಿಡಿದುಕೊಂಡರೆ ಸಾಕು ನಿದ್ದೆ ಮಾಯವಾಗಿಬಿಡುತ್ತದೆ ಅಲ್ವಾ? ಇದು ನಿದ್ರಾಹೀನತೆಯ ಕಾರಣಗಳಲ್ಲಿ ಒಂದಾಗಿದೆ. ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
• ರಾತ್ರಿ ಬೇಗ ಮಲಗೋದು, ಪ್ರತಿದಿನ ಬೆಳಗ್ಗೆ ಒಂದೇ ಸಮಯಕ್ಕೆ ಏಳೋದನ್ನು ರೂಢಿಸಿಕೊಳ್ಳಿ.
• ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರಿ.
• ಹಗಲಿನಲ್ಲಿ ನೀವು ಎಷ್ಟೇ ಬಿಡುವಿದ್ದರೂ ನಿದ್ದೆ ಮಾಡಬೇಡಿ.
• ದೇಹಕ್ಕೆ ವ್ಯಾಯಾಮ ಅತ್ಯಗತ್ಯ. ಪ್ರತಿದಿನ ತಪ್ಪದೇ ಪಾಲಿಸಿ
• ಹಾಸಿಗೆ ಮೇಲೆ ಮಲಗಿ ಮೊಬೈಲ್ ನೋಡೋದು ಬೇಡ.
• ಮಲಗುವ ಕೋಣೆ ಶುಚಿಯಾಗಿರಲಿ.
• ಮಲಗುವ ಕನಿಷ್ಠ 2 ಗಂಟೆಗಳ ಮುನ್ನ ಊಟ ಸೇವಿಸಿ. ಆಹಾರ ಸೇವನ ಮಿತವಾಗಿರಲಿ.
• ಮಲಗುವಾಗ ಯಾವುದೇ ಚಿಂತೆ ನಿಮ್ಮನ್ನು ಕಾಡದಿರಲಿ.