ಈ ಲೇಖನ ಸರಣಿಯಲ್ಲಿ ನಾವು ಭಾರತೀಯ ಇತಿಹಾಸವನ್ನು ವಿವಿಧ ಆಯಾಮ ಮತ್ತು ದೃಷ್ಟಿಕೋನದದಿಂದ ತಿಳಿಯುವ ಪ್ರಯತ್ನವನ್ನು ಮಾಡಲಿದ್ದೇವೆ. ಅದಕ್ಕೂ ಮೊದಲು ಇತಿಹಾಸ ಎಂದರೇನು ? ಅದರ ಮಹತ್ವವೇನು ಏಕೆ ಪ್ರತಿಯೊಬ್ಬನು ಇತಿಹಾಸವನ್ನು ತಿಳಿಯಬೇಕು ಎಂಬುದು ಅಗತ್ಯ. ಇತಿಹಾಸ ಎಂದರೆ ಕೇವಲ ರಾಜ, ಆತನ ಆಳ್ವಿಕೆ, ಗೆದ್ದುಕೊಂಡಂತಹ ಪ್ರದೇಶಗಳು ಕಟ್ಟಿಸಿದ ಸ್ವಾರಕಗಳಲ್ಲ ಅದು ಒಂದು ಸಂಸ್ಕೃತಿ ಮತ್ತು ಪರಂಪರೆಯ ದ್ಯೋತಕವಾಗಿದೆ. ಆದರೆ ನಮ್ಮ ದೇಶದಲ್ಲಿ ಈ ಭವ್ಯ ಇತಿಹಾಸವನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿದ್ದೇವೆ. ಭಾರತಕ್ಕೆ ಬ್ರಿಟಿಷರು ಬಂದಾಗ ಅವರು ಹೇಳಿದ್ದು “ ನಿಮ್ಮಲ್ಲಿ 33 ಕೋಟಿ ದೇವರಿದ್ದಾರೆ ಆದರೆ ಇತಿಹಾಸಕ್ಕೆಂದೆ ಮೀಸಲಾದ ಒಬ್ಬರು ದೇವರಿಲ್ಲ” ಎಂದು ಹೇಳಿದ್ದಾರೆ. ಮತ್ತು ಅದು ನಿಜವು ಹೌದು ಕಾರಣ ನಮ್ಮಲ್ಲಿ ಆಗಿನಿಂದ ಇತಿಹಾಸದ ಬಗ್ಗೆ ತಾಸ್ಸಾರವೇ ಇದೆ ಮೊದಲು ನಮ್ಮ ದೇಶದ ಇತಿಹಾಸಕಾರರು ರಾಜಾಶ್ರಯದಲ್ಲಿದ್ದಾಗ ರಾಜನ ಪರಾಕ್ರಮಗಳನ್ನು ಮಿತಿಮೀರಿ ವರ್ಣಿಸಿ ಇತಿಹಾಸದ ನೈಜತೆಯನ್ನು ಮರೆಮಾಚಿದ್ದಾರೆ. ಇದೇ ಇಂದಿನ ಕಾಲದಲ್ಲಿ ಈ ಇತಿಹಾಸವು ಇಸಂಗಳ ಮಧ್ಯೆ ಸಿಲುಕಿ ಒದ್ದಾಡುತ್ತದೆ. ಈ ಇಸಂಗಳ ಸಂಘರ್ಷದಲ್ಲಿ ನೈಜ ಇತಿಹಾಸದ ಮರಣವಾಗುತ್ತಿದೆ ಇದರ ಕಲ್ಪನೆಯಾರಿಗೂ ಇಲ್ಲದಂತಾಗಿದೆ.
ಇಂತಹ ವೈಭವೀಕರಣ ಮತ್ತು ಇಸಂಗಳ ನಡುವೆ ಶಾಲಾ ವಿದ್ಯಾರ್ಥಿಗಳಿಗೆ ಇತಿಹಾಸದ ಪಠ್ಯವು ಕಬ್ಬಿಣದ ಕಡಲೆಯಾಗಿದೆ. ಅವರಿಗೆ ನೀವೊಮ್ಮೆ ವಿಚಾರಿಸಿ ನೋಡಿ ನಿಮಗೆ ಶಾಲೆಯಲ್ಲಿ ಅತ್ಯಂತ ಕಠಿಣವಾದ ವಿಷಯಯಾವುದು ಎಂದು 10ರಲ್ಲಿ 8 ವಿದ್ಯಾರ್ಥಿಗಳು ಇತಿಹಾಸ ಎಂದು ಹೇಳುತ್ತಾರೆ. ಕಾರಣ ಇದರಲ್ಲಿ ಬರುವ ರಾಜರ ಹೆಸರು ಮತ್ತು ಅವರ ಕಾಲಮಾನ ನೆನೆಪಿನಲ್ಲಿ ಇಡುವುದು ಅತ್ಯಂತ ಕಠಿಣವಾದ ಕಾರ್ಯವೆಂದು ಅವರು ಭಾವಿಸುತ್ತಾರೆ. ಮತ್ತು ಶಾಲಾ ಮಟ್ಟದಲ್ಲಿ ಇತಿಹಾಸವನ್ನು ತಿಳಿಸುವ ಕ್ರಮವು ಇದಕ್ಕೆ ಒಂದು ಕಾರಣ ಎಂದು ಹೇಳಬಹುದಾಗಿದೆ.
ನಮಗೆ ಶಾಲೆಯಲ್ಲಿ ಇತಿಹಾಸವೆಂದರೆ ಹೇಳಿಕೊಡುವುದು ನಿನ್ನೆ ನಡೆದ ಘಟನೆ ಎಂದು ಮಾತ್ರ ಆದರೆ ಇತಿಹಾಸವೆಂದರೆ ಸಂಸ್ಜೃತಿ ಪರಂಪರೆಯ ಕುರುಹು. ಹೀಗೆ ಇತ್ತು ಅದು ಇತಿಹಾಸವಲ್ಲ ಹೇಗೆ ಇದೇ ಎಂದು ತಿಳಿಸುವುದೇ ಇತಿಹಾಸ. ಅದರಲ್ಲೂ ಜಗತ್ತಿನ ಇತಿಹಾಸ ಒಂದು ಕಡೆಯಾದರೆ ಭಾರತದ ಇತಿಹಾಸವೇ ಒಂದು ಕಡೆ; ಜಗತ್ತಿನ ಇತಿಹಾಸದಲ್ಲೇ ಅತ್ಯಂತ ವರ್ಣರಂಜಿತ ಇತಿಹಾಸ ವೆಂದರೆ ಅದು ಭಾರತದದ್ದು. ಭಾರತ ಮೊದಲಿನಿಂದಲೇ ಬಂಗಾರದ ಹಕ್ಕಿ ಅದನ್ನು ಲೂಟಿ ಮಾಡಲು ಅನೇಕ ವಿದೇಶಿಯ ಇಸ್ಲಾಮಿಕ ದಾಳಿಕೋರರಿಂದ ಪ್ರಾರಂಭಿಸಿ ಕೊನೆಯಲ್ಲಿ ಪೋರ್ಚುಗೀಸರ ವರೆಗೆ ಎಲ್ಲರ ಮುಖ್ಯ ಉದ್ದೇಶವೆಂದರೆ ಸಂಪತ್ತನ್ನು ಲೂಟಿಮಾಡುವುದೇ ಆಗಿತ್ತು. ಅಷ್ಟೇಲ್ಲದರ ಮಧ್ಯವು ಭಾರತ ಇಂದು ಅದೇ ಗತವೈಭವದಲ್ಲಿ ಮೆರೆಯುತ್ತದೆ ಎಂದರೆ ಭಾರತದ ಭವ್ಯತೆಯನ್ನು ಅಂದಾಜಿಸ ಬಹುದು.
ಭಾರತವೇ ಒಂದು ಶಕ್ತಿ ಇದು ನಿನ್ನೆ ಮೊನ್ನೆಯದ್ದಲ್ಲಾ ಅದು ಜಗತ್ತಿಗೆ ಬೆಳಕನ್ನು ಕೊಡುವ ದೇಶವಾಗಿ ಭಾ ಎಂದರೆ ಜ್ಞಾನ ರತ ಎಂದರೆ ಹರಡು ಎಂಬ ಅರ್ಥವನ್ನು ನೀಡುತ್ತದೆ. ಜಗತ್ತಿಗೆ ಬೆಳಕನ್ನು ನೀಡಿದ ದೇಶವೇ ಭಾರತ. ಜಗತ್ತಿನ ಜನರು ಇನ್ನೂ ಅನಾಗರಿಕರಾಗಿದ್ದಾಗ ನಮ್ಮ ದೇಶದಲ್ಲಿ ನಾವು ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದೆವು ಅಂದರೆ ನಮ್ಮಲ್ಲಿಯ ಜ್ಞಾನಭಂಡಾರದ ಬಗ್ಗೆ ತಿಳಿಯ ಬಹುದು.
ಆದರೆ ಇಂದು ನಾವು ಅದನೆಲ್ಲವನ್ನು ಬಿಟ್ಟು ಯಾರೊ ಎನೋ ಹೇಳಿದ ಇತಿಹಾಸವನ್ನು ಕೇಳಿ ಒಂದು ವಂಶದ ಇತಿಹಾಸವೇ ದೇಶದ ಇತಿಹಾಸವೆಂದು ನಂಬಿದ್ದೇವೆ. ಅದರ ನೈಜತೆ ಜನರಿಗೆ ತಿಳಿಯಬೇಕು. ನಮ್ಮ ಪಠ್ಯದಲ್ಲಿ ಇರಬೇಕಾದ ಇತಿಹಾಸದ ಚಿತ್ರಣವೇ ಬೇರೆ ಅದನ್ನು ತಿಳಿಸುವುದೇ ಈ ಭಾರತ ಇತಿಹಾಸ ಮಾಲೆಯ ಉದ್ದೇಶವಾಗಿದೆ.
ಮುಂದುವರೆಯುತ್ತದೆ.