ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ ಜಿಎಸ್ಎಲ್ವಿ -ಎಫ್12 ಮತ್ತು ಎನ್ವಿಎಸ್-01 ನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್-01 ನ್ನು ಇಂದು ಬೆಳಿಗ್ಗೆ 10.42ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 130 ಕಿ.ಮೀ. ದೂರದ ಎರಡನೇ ಉಡಾವಣಾ ಕೇಂದ್ರದಿಂದ ನಡೆಸಲಾಗಿದೆ.
ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಉಪಗ್ರಹ ಜಿಎಸ್ಎಲ್ವಿ -ಎಫ್12 ಮತ್ತು ಎನ್ವಿಎಸ್-01 ನ್ನು ಉಡಾವಣೆ ಮಾಡಲಾಗಿದ್ದು, ಇದು ಬಾಹ್ಯಾಕಾಶ ನೌಕೆ ಎನ್ಎವಿಎಲ್ಸಿ ಸರಣಿಯ ಭಾಗವಾಗಿದೆ, ಎನ್ವಿಸಿ-01 ಎನ್ಎವಿಎಲ್ಸಿ ಸರಣಿಯಲ್ಲಿ ಎರಡನೇ ತಲೆಮಾರಿನ ಉಪಗ್ರಹಗಳ ಆರಂಭಕ್ಕೆ ಈ ಉಡಾವಣೆ ಸಾಕ್ಷಿಯಾಗಿದೆ. ಹಾಗೆಯೇ ಈ ಉಪಗ್ರಹ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.
51.7 ಮೀಟರ್ ಎತ್ತರದ ಜಿಯೋಸಿಂಕ್ರೊನಸ್ ಉಪಗ್ರಹ 2,232 ಕೆಜಿ ತೂಕವಿರುತ್ತದೆ ಎಂದು ಇಸ್ರೋ ತಿಳಿಸಿದೆ. ರಾಕೆಟ್ ಸುಮಾರು 20 ನಿಮಿಷಗಳ ನಂತರ ಹಾರಾಟ ನಡೆಸಿ ,ನಂತರ 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ಹೇಳಿದೆ.
ದೇಶೀಯ ಆಟೋಮಿಕ್ ಗಡಿಯಾರ ಬಳಕೆ:
ಇದೇ ಮೊದಲ ಬಾರಿಗೆ ದೇಶಿಯವಾಗಿ ತಯಾರು ಮಾಡಲಾಗಿರುವ ರುಬೀಡಿಯಂ ಅಣು ಗಡಿಯಾರವನ್ನು ಕೌಂಟಿಂಗ್ಗೆ ಬಳಕೆ ಮಾಡಲಾಗುತ್ತಿದೆ. ಇದನ್ನು ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ತಯಾರಿಸಿದೆ.
ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಭಿವೃದ್ಧಿಪಡಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಬಳಕೆ ಮಾಡಲಾಗಿದೆ. ಇದು ಬೆರಳೆಣಿಕೆಯ ದೇಶಗಳು ಮಾತ್ರ ಹೊಂದಿರುವ ಪ್ರಮುಖ ತಂತ್ರಜ್ಞಾನವಾಗಿದೆ ಎಂದು ಇಸ್ರೋ ಹೇಳಿದೆ.