ವೀರ ಸಾವರ್ಕರ್ 140ನೇ ಜನ್ಮದಿನದ ಪ್ರಯುಕ್ತ ವೀರ ಸಾವರ್ಕರ್ ಜೀವನ ಆಧರಿಸಿ ಸಿನಿಮಾ ನಿಮಾರ್ಣ ಮಾಡುವುದಾಗಿ ನಟ ರಾಮ್ ಚರಣ್ ಘೋಷಣೆಯನ್ನು ಮಾಡಿದ್ದಾರೆ.
ವೀರ ಸಾರ್ವಕರ್ ಕುರಿತಾಗಿರುವ ಈ ಸಿನಿಮಾದ ನಿರ್ಮಾಣದಲ್ಲಿ ರಾಮ್ ಚರಣ್ ಗೆ ‘ದಿ ಕಾಶ್ಮಿರ್ ಫೈಲ್ಸ್’ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಜೊತೆಯಾಗಿದ್ದಾರೆ . ಚಿತ್ರಕ್ಕೆ ‘ದಿ ಇಂಡಿಯಾ ಹೌಸ್’ ಎಂದು ಹೆಸರು ಇಡಲಾಗಿದ್ದು, ನಿಖಿಲ್ ಸಿದ್ದಾರ್ಥ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ದಿ ಇಂಡಿಯಾ ಹೌಸ್:
ಸಾವರ್ಕರ್ ಅವರು 1906ರಿಂದ 1910ರವರೆಗೆ ಲಂಡನ್ನಲ್ಲಿರುವ ಇಂಡಿಯಾ ಹೌಸ್ನಲ್ಲಿ ವಾಸವಾಗಿದ್ದರು. ಅಂದಿನ ಸಮಯದಲ್ಲಿ ಆ ಜಾಗ ಬಹಳ ಪ್ರಸಿದ್ದಿಯನ್ನು ಪಡೆದುಕೊಂಡಿತ್ತು. ಬ್ರಿಟಿಷರ ವಿರುದ್ಧ ಹೋರಾಡಲು ಅದೇ ಸ್ಥಳದಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿತ್ತು. ಈ ಕಾರಣಕ್ಕೆ ಸಿನಿಮಾಗೆ ‘ದಿ ಇಂಡಿಯಾ ಹೌಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ.
ನಟ ರಾಮ್ ಚರಣ್ ಈಗ ನಟನೆಯ ಜೊತೆಗೆ ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು, ಸ್ವಾತಂತ್ರ ಹೋರಾಟಗಾರ ವೀರ ಸಾರ್ವಕರ್ ಕುರಿತಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ರಾಮ್ ಚರಣ್ ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿದೆ.
ಅಭಿಷೇಕ್ ನಿರ್ಮಾಣದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಬಿಜೆಪಿಗರ ಬೆಂಬಲ ಇತ್ತು ಅನ್ನೋದು ಒಂದಷ್ಟು ಮಂದಿಯ ಆರೋಪ. ಈಗ ‘ದಿ ಇಂಡಿಯಾ ಹೌಸ್’ ಚಿತ್ರಕ್ಕೂ ಇದೇ ರೀತಿಯ ಆರೋಪ ಕೇಳಿ ಬಂದಿದೆ.
ಭಾರತದ ಸ್ವಾತಂತ್ರ್ಯ ಹೋರಾಟಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದ್ದು, ನಿಖಿಲ್ ಸಿದ್ದಾರ್ಥ್ ಜೊತೆ ಅನುಪಮ್ ಖೇರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.