ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಕಿಚ್ಚ ಸುದೀಪ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ.
ಸುದೀಪ್ ಅವರ 46ನೇ ಸಿನಿಮಾ ಇದಾಗಿದ್ದು ತಮಿಳು ಸ್ಟಾರ್ ನಿರ್ಮಾಪಕ ಕಲೈಪುಲಿ ಎಸ್ ಧಾನು ಅವರು ನಿರ್ಮಾಣ ಮಾಡಲಿದ್ದಾರೆ.
ಕಬಾಲಿ, ತುಪಾಕಿ, ಅಸುರನ್ ಮುಂತಾದ ಹಿಟ್ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದ ವಿ ಕ್ರಿಯೇಷನ್ಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.
ಸುದೀಪ್ ಕಾರಿನಿಂದ ಇಳಿಯುತ್ತಿರುವ ಹಾಗೂ ಮೇಕಪ್ ಮಾಡಿಸಿಕೊಳ್ಳುತ್ತಿರುವ ವೀಡಿಯೋ ಬಿಡುಗಡೆಯಾಗಿದ್ದು ಕಿಚ್ಚ ವಿಭಿನ್ನ ಲುಕ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಈ ಸಣ್ಣ ವೀಡಿಯೋ ನೀಡಿದೆ.
ಸುದೀಪ್ ಮತ್ತು ಕಲೈಪುಲಿ ಎಸ್ ಧಾನು ಕಾಂಬಿನೇಷನ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಫ್ಯಾನ್ ಇಂಡಿಯಾ ಸಿನಿಮಾನಾ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಇದರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
ಶೀಘ್ರದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು ಸಿನಿಮಾವನ್ನು ಯಾರು ನಿರ್ದೇಶಕ ಮಾಡಲಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಇನ್ನು ಸುದೀಪ್ ಈ ಹಿಂದೆಯೇ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಯಾವುದು ಮೊದಲು ಬಿಡುಗಡೆಯಾಗಲಿದೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.