ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಆರಂಭಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಬಡವರ ಪಾಲಿನ ಅಕ್ಷಯ ಪಾತ್ರೆಯಾಗಿದ್ದ ಇಂದಿರಾ ಕ್ಯಾಂಟೀನ್ ಅನ್ನು 243 ಸ್ಥಳಗಳಲ್ಲಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಬೆಲೆ ಐದರಿಂದ ಹತ್ತು ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಅದು ಹಾಗೆ ಮುಂದುವರೆದಿದೆ.
ಒಂದು ತಿಂಗಳಲ್ಲಿ ಟೆಂಡರ್ ಗುತ್ತಿಗೆದಾರರಿಗೆ ಹಳೆ ಪೇಮೆಂಟ್ ಮಾಡಲಾಗುವುದು ಜಯರಾಮ್ ರಾಯ್ ಪುರ್ ಹೇಳಿದ್ದಾರೆ.
ಬಸವಣ್ಣನವರ ತತ್ವ, ಕಾಂಗ್ರೆಸ್ ಟ್ವೀಟ್:
ಇಂದಿರಾ ಕ್ಯಾಂಟೀನ್ ಪುನರ್ ಆರಂಭಿಸುವ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು ಕಾಯಕಯೋಗಿ ಬಸವಣ್ಣನವರ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಬಡ ಜನರ ಇಂದಿರಾ ಕ್ಯಾಂಟೀನ್ ಗಳನ್ನು ಪುನಶ್ಚೇತನ ಗೊಳಿಸಲಿದೆ.
ಬಿಜೆಪಿ ಸರ್ಕಾರ ಮಾಡಿದ ಅವಾಂತರಗಳನ್ನು ಸರಿಪಡಿಸಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಗಳಲ್ಲಿ ಅತ್ಯುತ್ತಮ ಆಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಇಂದಿರಾ ಕ್ಯಾಂಟೀನ್ ಹುಟ್ಟು:
2013 ರಿಂದ 2018 ರ ತನಕ ಆಡಳಿತ ನಡೆಸಿದ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಸೇರಿದಂತೆ ಹಲವು ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು.
ಬಡವರಿಗೆ ಹಸು ಬಡವರ ಹಸಿವು ನೀಗಿಸಲು 2017ರಲ್ಲಿ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ 175 ವಾರ್ಡ್ ಗಳಲ್ಲಿ ಇಂದಿನ ಕ್ಯಾಂಟೀನ್ ಗಳನ್ನು ತೆರೆಯಲಾಗಿತ್ತು.