ಬೆಂಗಳೂರು: ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಗೆ ತಲುಪಿಸಲು ತರಲಾಗುತ್ತಿದ್ದ ಬರೋಬ್ಬರಿ 12,000 ಕೋಟಿ ರೂ. ಮೌಲ್ಯದ ಡ್ರಗ್ಸನ್ನು NCB ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಬೆಂಗಳೂರು NCB ಜೋನಲ್ ಡೈರೆಕ್ಟರ್ ಅರವಿಂದನ್, NCB ಡೆಪ್ಯುಟಿ ಡೈರೆಕ್ಟರ್ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬೃಹತ್ ಜಾಲವನ್ನು ಬೇಧಿಸಿದೆ.
ನೇವಿ ಮತ್ತು NCB ಜಂಟಿ ಕಾರ್ಯಾಚರಣೆಯಲ್ಲಿ ಆಪರೇಶನ್ ಸಮುದ್ರಗುಪ್ತ ಹೆಸರಲ್ಲಿ ಭಾರತದ ಸಮುದ್ರದಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬೋಟ್ ನಲ್ಲಿ ಭಾರತದ ಕಡೆಗೆ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು.
ಭಾರತದ ಇತಿಹಾಸದಲ್ಲಿ ಸೀಜ್ ಮಾಡಿರುವ ಅತಿದೊಡ್ಡ ಕಾರ್ಯಚರಣೆ ಇದಾಗಿದ್ದು, ಕ್ರಿಸ್ಟಲ್ ಮಾದರಿಯಲ್ಲಿ ಇದ್ದ 2500 ಕೆಜಿ ಡ್ರಗ್ಸನ್ನು ಒಟ್ಟು 134 ಚೀಲಗಳಲ್ಲಿ ಪ್ಯಾಕ್ ಮಾಡಿ ತರಲಾಗಿತ್ತು. ಸದ್ಯ ಆರೋಪಿಗಳ ಗುರುತು ಗೌಪ್ಯವಾಗಿಟ್ಟಿದ್ದು, NCB ತನಿಖೆ ಮುಂದುವರೆಸಿದ್ದಾರೆ.