ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ 113ನ್ನೂ ಮೀರಿ 136 ಕ್ಷೇತ್ರಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತವನ್ನು ಪಡೆದಿದೆ.
ಈ ಬಾರಿ ಒಟ್ಟು 14 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, 9 ಮಂದಿ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರ ಚುನಾವಣೆಯಲ್ಲಿ ವಿಧಾನಸಭೆಗೆ 7 ಮುಸ್ಲಿಮ್ ಶಾಸಕರು ಆಯ್ಕೆಯಾಗಿದ್ದರು. ಈ ಬಾರಿ ಎರಡು ಸ್ಥಾನಗಳು ಹೆಚ್ಚಾಗಿವೆ.
ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ ಮುಸ್ಲಿಮ್ ಶಾಸಕರ ವಿವರ ಇಲ್ಲಿದೆ.
ಬೆಳಗಾವಿ ಉತ್ತರದಿಂದ ಆಸೀಫ್ ಸೇಠ್, ಕಲಬುರಗಿ ಉತ್ತರ ಕ್ಷೇತ್ರದಿಂದ ಕನೀಝ್ ಫಾತಿಮಾ, ಬೀದರ್ ಕ್ಷೇತ್ರದಿಂದ ರಹೀಮ್ ಖಾನ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ರಿಝ್ವಾನ್ ಅರ್ಷದ್, ಶಾಂತಿನಗರದಿಂದ ಎನ್. ಎ ಹ್ಯಾರಿಸ್, ಚಾಮರಾಜಪೇಟೆ ಕ್ಷೇತ್ರದಿಂದ ಝಮೀರ್ ಅಹ್ಮದ್, ರಾಮನಗರದಿಂದ ಇಕ್ಬಾಲ್ ಹುಸೇನ್, ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಯು.ಟಿ. ಖಾದರ್, ನರಸಿಂಹರಾಜ ಕ್ಷೇತ್ರದಿಂದ ತನ್ವೀರ್ ಸೇಠ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.