ಹಣ್ಣುಗಳನ್ನು ಸೌಂದರ್ಯವರ್ಧಕವಾಗಿ ಬಳಸುವುದು ಹೊಸತೇನಲ್ಲ. ಫ್ರೂಟ್ ಫೇಶಿಯಲ್ ಇಂದು ಜನಪ್ರಿಯವಾಗಿದೆ. ಪೇರಳೆ ಹಣ್ಣನ್ನು ಚರ್ಮದ ಆರೈಕೆಯ ದಿನಚರಿಗೆ ಸೇರಿಸಿ ಇದು ಸೂಪರ್ ಫಲಿತಾಂಶವನ್ನು ನೀಡುತ್ತದೆ.ಪೇರಳೆ ಹಣ್ಣು ತಿನ್ನಲು ಮಾತ್ರವಲ್ಲ, ಜೊತೆಗೆ ಇದನ್ನು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಬಳಸುತ್ತಾರೆ.
ಮೈಬಣ್ಣವನ್ನು ಸುಧಾರಿಸುತ್ತದೆ ಸಾಮಾನ್ಯ ಗುಲಾಬಿ ಪೇರಳೆಯಿಂದ ಕಲೆಗಳು ಮತ್ತು ಹೈಪರ್ ಪಿಗ್ಮೆಂಟೇಶನ್ನ್ನು ದೂರಮಾಡಬಹುದು. ಇದು ಮೈಬಣ್ಣಕ್ಕೆ ಹೊಳಪು ಮತ್ತು ತಾಜಾತನವನ್ನು ತುಂಬುತ್ತದೆ. ಚರ್ಮವನ್ನು ಸುಂದರಗೊಳಿಸಲು ಮತ್ತು ಸತ್ತ ಚರ್ಮದ ಕೋಶಗಳನ್ನು ತೊಡೆದುಹಾಕಲು ಫೇಸ್ ಸ್ಕ್ರಬ್ ತಯಾರಿಸಬಹುದು.
ಸೂರ್ಯನ ತೀಕ್ಷಣ ಕಿರಣಗಳಿಂದ ರಕ್ಷಣೆ ಮಾಡಲು ಸಹಾಯ ಮಾಡುತ್ತದೆ. ಸೂರ್ಯನ ಯುವಿ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯಿಂದ ರಕ್ಷಿಸುವ ಶಕ್ತಿಯು ಪೇರಳೆ ಹಣ್ಣಿಗಿದೆ ಮಾತ್ರವಲ್ಲದೆ ಸಾಮಾನ್ಯ ಮಾಲಿನ್ಯದಿಂದ ಆಗುವ ಸಮಸ್ಯೆಯಿಂದಲು ಪರಾಗಬಹುದು.
ವಯಸ್ಸಾದ (ಆಂಟಿ-ಏಜಿಂಗ್) ಚಿಹ್ನೆಗಳ ಗುಣಲಕ್ಷಣಗಳ ವಿರುದ್ಧ ಹೋರಾಡುವ ಪ್ರಮುಖ ಪಾತ್ರವಹಿಸುತ್ತದೆ. ಪೇರಳೆ ಹಣ್ಣಿನ ಪೋಷಕಾಂಶಗಳು ಚರ್ಮದ ಫ್ರೀ ರಾಡಿಕಲ್ ಹಾನಿಯ ವಿರುದ್ಧ ಹೋರಾಡುತ್ತವೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಪೇರಳೆ ಹಣ್ಣಿನಲ್ಲಿ ೮೧% ನೀರಿನಿಂದ ಮಾಡಲ್ಪಟ್ಟಿರುವುದರಿಂದ ದೇಹವನ್ನು ಹೈಡ್ರೇಟ್ ಮಾಡುತ್ತದೆ.ಪ್ರತಿದಿನ ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ನಿಧಾನವಾಗಿ ನೀರನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಚರ್ಮದ ಕೋಶಗಳನ್ನು ತೇವಾಂಶಗೊಳಿಸುವ ಪೋಷಕಾಂಶಗಳಲ್ಲಿನ ಇದು ಒಂದಾಗಿದೆ.
ವಿವಿಧ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪೇರಳೆ ಹಣ್ಣುಗಳನ್ನು ಅವುಗಳ ಸೌಂದರ್ಯದ ಪ್ರಯೋಜನಗಳಿಗಾಗಿ ತುಂಬಾ ಉಪಯೊಗಿಸಲು ಒಂದು ಕಾರಣವಿದೆ. ಏಕೆಂದರೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಪುನರುತ್ಪಾದಿಸುತ್ತದೆ. ಇದು ವಿಟಮಿನ್ ಕೆ ಹೊಂದಿರುವ ಅಪರೂಪದ ಆಹಾರಗಳಲ್ಲಿ ಒಂದಾಗಿದೆ.