ಕೊತ್ತಂಬರಿ ಕಾಫಿ / ಧನಿಯಾ ಕಷಾಯ ಎಂಬುದು ಭಾರತೀಯ ಮಸಾಲೆಗಳಿಂದ ತಯಾರಿಸಿದ ಗಿಡಮೂಲಿಕೆ ಪಾನೀಯವಾಗಿದೆ. ಈ ಕಷಾಯ ಪುಡಿಯನ್ನು ತೆಳುವಾದ ಹಾಲಿನೊಂದಿಗೆ ಕುದಿಸಲಾಗುತ್ತದೆ ಮತ್ತು ಈ ಬಿಸಿ ತುಂಬಾ ಉಲ್ಲಾಸಕರ ಪಾನೀಯವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
ತುಂಬಾನೇ ಸರಳವಾಗಿ ಕೊತ್ತಂಬರಿ ಕಾಫಿ ಮಾಡುವುದು ಹೇಗೆ ಗೊತ್ತಾ?
ಕೊತ್ತಂಬರಿ ಬೀಜವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದುಕೊಂಡ ಕೊತ್ತಂಬರಿ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಬೇಕು.
ನಂತರ ಪಾತ್ರೆಯಲ್ಲಿ ನೀರನ್ನು ಕುದಿಸಬೇಕು.
ನಂತರ ಮಾಡಿಟ್ಟ ಕೊತ್ತಂಬರಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ರುಚಿ ಬೇಕಾಗುವಷ್ಟು ಬೆಲ್ಲವನ್ನು ಅಥವಾ ಸಕ್ಕರೆಯನ್ನು ಸೇರಿಸಬೇಕು. ಹಾಲನ್ನು ಕೂಡ ಸೇರಿಸಬಹುದು.
ರುಚಿಯಾದ ಕೊತ್ತಂಬರಿ ಕಾಫಿ ಸವಿಯಲು ರೆಡಿ.
ಇನ್ನು ಕೆಲವು ಕಡೆ ಕೊತ್ತಂಬರಿಯ ಜೋತೆ ಬೆಲ್ಲ, ಎಲಕ್ಕಿ, ಕರಿಮೆಣಸು ಕಾಳು, ಒಣ ಶುಂಠಿಯನ್ನು ಪುಡಿ ಮಾಡಿ ನೀರಿನಲ್ಲಿ ಕುದಿಸಿ ಅದಕ್ಕೆ ಹಾಲನ್ನು ಸೇರಿಸಿ ಸವಿಯಲು ನೀಡಲಾಗುವುದು.