ತುಳಸಿಯು ಮನೆಮದ್ದಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ತುಳಸಿಯ ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಕೆಮ್ಮು ಶೀತ ದಿಂದ ಮುಕ್ತಿ ಪಡೆಯಬದು. ಬಲು ಉಪಾಯೋಗಿ ತುಳಸಿಯ ಬೀಜ ಮತ್ತು ಅದರ ಆರೋಗ್ಯದ ವಿಷಯದಲ್ಲಿ ಬಹಳ ಮಹತ್ವವನ್ನು ಪಡೆದಿರುತ್ತದೆ.
ತುಳಸಿಯ ಹೂವಿನಲ್ಲಿ ಚಿಕ್ಕ ಚಿಕ್ಕದಾದ ಕಪ್ಪಗಿನ ಬೀಜವು ಶತಮಾನದಿಂದಲೂ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದೆ. ಸಾಮಾನ್ಯವಾಗಿ ತುಳಸಿ ಬೀಜವು ತೂಕ ಇಳಿಸಲು, ಹೃದಯದ ಆರೋಗ್ಯ ಕಾಪಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೋಳಿಸಲು ಮತ್ತು ಕಾಡುವ ಚಿಂತೆಯಿಂದ ಮುಕ್ತಿ ನೀಡಲು ಸಹಾಯಕ.
ತುಳಸಿ ಬೀಜದಿಂದಾಗುವ ಆರೋಗ್ಯ ಪ್ರಯೋಜನಗಳು
ಶೀತ ನೆಗಡಿಯನ್ನು ಕಡಿಮೆಮಾಡಲು ಇದು ರಾಮಬಾಣ. ತುಳಸಿ ಬೀಜವು ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿ ಬೀಜವನ್ನು ನೀರಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.
ತೂಕವನ್ನು ಇಳಿಸಲು ಸಹಾಕಾರಿಯಾಗಿದೆ ಮತ್ತು ಅಧಿಕ ರಕ್ತದೊತ್ತಡವನ್ನು, ಮಧುಮೇಹದಿಂದ ಬಳಲುವವರು ಇವೆರಡನ್ನು ತುಳಸಿ ಬೀಜದಿಂದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು.
ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಗೋಳಿಸುತ್ತದೆ ಮತ್ತು ಹೃದಯವನ್ನು ಕಾಪಾಡುತ್ತದೆ,
ಇಂದು ಎಲ್ಲರು ತಮ್ಮ ತಮ್ಮ ಕೆಲಸದಲ್ಲಿ ವ್ಯಸ್ತರಾಗಿರುವುದರಿಂದ ಕೆಲಸದ ಒತ್ತಡದಿಂದ ಸಾಕಷ್ಟು ಮಾನಸಿಕ ಒತ್ತಡವನ್ನು ಮತ್ತು ಚಿಂತೆಯನ್ನು ಕಡಿಮೆಗೋಳಿಸಲು ತುಳಸಿ ಬೀಜವು ಉಪಯುಕ್ತ. ಇದರಿಂದ ಉತ್ತಮ ನಿದ್ರೆ ಮತ್ತು ದೇಹದ ನರನಾಡಿಗಳನ್ನು ಶಾಂತಗೋಳಿಸುತ್ತದೆ ಇದರಿಂದ ಒತ್ತಡವು ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆಯು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ, ಅಜೀರ್ಣ, ಹೊಟ್ಟೆ ನೋವು, ಆರಾಮ ಇಲ್ಲದಂತಹ ಪರಿಸ್ಥಿತಿಯಿಂದಲು ಹೊರಬರಬಹುದು.
ಇನ್ನು ಚರ್ಮದ ಆರೋಗ್ಯದ ಬಗ್ಗೆ ಹೇಳುವುದಾದರೆ ಮೊಡವೆಗಳನ್ನು ದೂರ ಮಾಡುತ್ತದೆ ಹಾಗೂ ಚರ್ಮದಲ್ಲಿನ ಎಣ್ಣೆ ಅಂಶವನ್ನು ಕಡಿಮೆ ಮಾಡಿ ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮುಕ್ತವಾಗಿಸಿ ಚರ್ಮವು ಹೊಳೆಯುವಂತೆ ಮಾಡುತ್ತದೆ.
ಪ್ರತಿಯೊಂದು ಕ್ರಿಯೆಗೂ ಅಡ್ಡ ಪರಿಣಾಮಗಳು ಇರುತ್ತವೆ ತಮಗೆ ಸೂಕ್ತವಲ್ಲದ ಆರೋಗ್ಯ ವರ್ಧಕಗಳನ್ನು ನಿರಾಕರಿಸುವುದು ಉತ್ತಮ.