ಮತ ಹಾಕಲು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇಲ್ಲ. ಮೊದಲ ಬಾರಿಗೆ ರಾಜ್ಯದಲ್ಲಿ ಫೇಸ್ ರೆಕಾಗ್ನೈಜೇಷನ್ ಟೆಕ್ನಾಲಜಿ ಅಳವಡಿಕೆ ಮಾಡಲಾಗುತ್ತಿದೆ.
ಕರ್ನಾಟಕದ ಈ ಬಾರಿಯ ವಿಧಾನಸಭಾ ಚುನಾವಣೆಗೆ ಒಂದು ವಿಶೇಷತೆಯಿಂದ ಕೂಡಿದ್ದು, ಮೊಟ್ಟಮೊದಲ ಬಾರಿಗೆ ಬೆಂಗಳೂರಿನ ಮತಗಟ್ಟೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಕೆಗೆ ತಂದಿದೆ. ಬೇರೆ ರಾಜ್ಯಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಈ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತಿದ್ದು, ಆದರೆ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಲಾಗುತ್ತಿದೆ.
ಈ ಚುನಾವಣಾ ತಂತ್ರಜ್ಞಾನವನ್ನು ಅರಮನೆ ರಸ್ತೆಯಲ್ಲಿರುವ ಸರ್ಕಾರಿ ರಾಮ ನಾರಾಯಣ ಚೆಲ್ಲಾರಂ ಕಾಲೇಜು, ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಬಳಿ ಇರುವ ಮತಗಟ್ಟೆಯಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುವುದೆಂದು ಮೂಲಗಳು ತಿಳಿಸಿವೆ. ಶಿವಾಜಿನಗರದಲ್ಲಿನ ಈ ಬೂತ್ ನ್ನು ಪ್ರಾಯೋಗಿಕವಾಗಿ ಗುರುತಿಸಿದ್ದಾರೆ. ಏಕೆಂದರೆ ಈ ಬೂತ್ ಕಡಿಮೆ ಮತದಾರರನ್ನು ಹೊಂದಿದೆ ಬೇರೆ ಬೂತ್ ನಲ್ಲಿ 1500 ಮತದಾರರಿದ್ದರೆ ಇಲ್ಲಿ ಕೇವಲ 300 ಮತದಾರರು ಇದ್ದು, ಸಿಇಓ ಕಚೇರಿಗೆ ಹತ್ತಿರದಲ್ಲಿದೆ. ಅಧಿಕಾರಿಗಳು (BLO) ಈ ಮತಗಟ್ಟೆಯಲ್ಲಿನ ಎಲ್ಲಾ ಮತದಾರರ ಮನೆಗಳಿಗೆ ಭೇಟಿ ನೀಡಿ ಹೊಸ ತಂತ್ರಜ್ಞಾನದ ಬಗ್ಗೆ ವಿವರಿಸಿದ್ದಾರೆ.
ಈ ತಂತ್ರಜ್ಞಾನ ಮತದಾರರಿಗೆ ಕಡ್ಡಾಯವಾಗಿಲ್ಲ, ಆಸಕ್ತಿ ಇದ್ದವರು ಬಳಕೆ ಮಾಡಬಹುದು ಅಥವಾ ಸಾಂಪ್ರದಾಯಿಕ ಮಾರ್ಗವನ್ನೇ ಅನುಸರಿಸಬಹುದು. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಪ್ರಯೋಜನ ಪಡೆಯುವ ಮತದಾರರಿಗೆ ಪ್ರತ್ಯೇಕ ಸರತಿ ಸಾಲು ಇರುತ್ತದೆ ಎಂದು ಕರ್ನಾಟಕ ವಿಶೇಷ ಅಧಿಕಾರಿ (ಚುನಾವಣೆ) ಎವಿ ಸೂರ್ಯ ಸೇನ್ ತಿಳಿಸಿದ್ದಾರೆ.
ಮತದಾರರು ಮತಗಟ್ಟೆಯನ್ನು ತಲುಪಿದ ನಂತರ, ಪರಿಶೀಲನೆಗಾಗಿ ಅವರು/ಅವಳು ಮುಖ ಗುರುತಿಸುವಿಕೆ ಸ್ಕ್ಯಾನಿಂಗ್ಗೆ ಒಳಗಾಗುತ್ತಾರೆ. EC ಯ ಡೇಟಾಬೇಸ್ನೊಂದಿಗೆ ಫೋಟೋ ಹೊಂದಾಣಿಕೆಯಾದರೆ, ಮತದಾರರು ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ. ಮತ್ತು ಅವರು ಮತವನ್ನು ಸುಲಭವಾಗಿ ಚಲಾಯಿಸಬಹುದು. ಈ ತಂತ್ರಜ್ಞಾನವು ಸರತಿ ಸಾಲಿನಲ್ಲಿ ನಿಂತು ಕಾಯುವ ಸಮಸ್ಯೆಯನ್ನು ತಪ್ಪಿಸುತ್ತದೆ ಮತ್ತು ನಕಲಿ ಮತದಾನ, ಚುನಾವಣಾ ಅಕ್ರಮಗಳನ್ನು ತಡೆಯುತ್ತದೆ ಎಂದು EC ಅಧಿಕಾರಿಗಳು ತಿಳಿಸಿದ್ದಾರೆ.
ಈ ಮತಗಟ್ಟೆಯಲ್ಲಿ ಮತದಾರರು ಚುನಾವಣಾ ಆಯೋಗದ ಚುನಾವಣಾ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ನಂತರ ತಮ್ಮ ಮತದಾರರ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು OTP ಅನ್ನು ರಚಿಸಿದ ನಂತರ, ಅವರು ಈ ಅಪ್ಲಿಕೇಶನ್ ಮೂಲಕ ಸೆಲ್ಫಿಯನ್ನು ಅಪ್ಲೋಡ್ ಮಾಡಬೇಕಾಗಿದೆ.
ಇದರಿಂದ ಕಾಯುವಿಕೆ ತಪ್ಪಿಸಬಹುದು. ಮತ್ತು ಒಂದು ಬೂತ್ನಲ್ಲಿ ನಾಲ್ಕು ಪೋಲಿಂಗ್ ಅಧಿಕಾರಿಗಳ ಬದಲಿಗೆ, ಕೇವಲ ಮೂವರನ್ನು ಮಾತ್ರ ನಿಯೋಜಿಸಲಾಗುತ್ತದೆ. ಏಕೆಂದರೆ ಈ ಮುಖ ಗುರುತಿಸುವ ತಂತ್ರಜ್ಞಾನದಿಂದ ಹೆಚ್ಚಿನ ಪರಿಶೀಲನೆಯ ಅಗತ್ಯವಿಲ್ಲ ಎಂದು ತಂತ್ರಜ್ಞಾನದ ಪ್ರಯೋಜನದ ಬಗ್ಗೆ ಎವಿ ಸೂರ್ಯ ಸೇನ್ ತಿಳಿಸಿದ್ದಾರೆ.