ಹೆಣ್ಣುಮಕ್ಕಳು ತಿಂಗಳಿನಲ್ಲಿ ತಮ್ಮ ಋತು ಚಕ್ರದ ದಿನಗಳಲ್ಲಿ ಸಹಿಸಲಾಗದ ನೋವನ್ನು ಅನುಭವಿಸುತ್ತಾರೆ. ಆ ದಿನಗಳಲ್ಲಿ ರಕ್ತಸ್ರಾವ, ಹೊಟ್ಟೆ ನೋವು, ಸುಸ್ತು, ತಲೆತಿರುಗುವಿಕೆ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲಿಹೋಗುತ್ತಾರೆ. ಇದರಲ್ಲಿ ಮುಖ್ಯ ಸಮಸ್ಯೆ ಎಂದರೆ ರಕ್ತಸ್ರಾವ ಆದರಿಂದಾಗಿನೇ ಈ ಸಮಯದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಲು ಅಂಜುತ್ತಾರೆ.
ಅಂದಿನಕಾಲದಲ್ಲಿ ಇಂತಹ ಸಮಯದಲ್ಲಿ ಬಟ್ಟೆಗಳನ್ನು ಬಳಸುತ್ತಿದ್ದರೂ ಆದರೆ ಈಗ ಮಾರುಕಟ್ಟೆಯಲ್ಲಿ ಇದಕ್ಕೆಂದೇ ಹಲವಾರು ಸಾಧನಗಳು ಬಂದಿವೆ.ಸ್ಯಾನಿಟರಿ ನಾಪ್ಕಿನ್ ಗಳು. ಟ್ಯಾಂಪೋನ್ ಗಳು ಅಥವಾ ಮುಟ್ಟಿನ ಕಪ್ ಗಳು ಇದರಲ್ಲಿ ಯಾವುದು ಉತ್ತಮ? ಯಾವುದು ಬಳಸುವುದು ಒಳ್ಳೆಯದಲ್ಲ ಎನ್ನುವುದು ಹಲವರಿಗೆ ಈಗಲೂ ಗೊಂದಲಗಳಿವೆ.ನೀವು ಯಾವುದನ್ನು ಮುಟ್ಟಿನ ಸಮಯದಲ್ಲಿ ಯಾವುದನ್ನು ಬಳಸುವುದು ಸೂಕ್ತ ಎಂಬುದಕ್ಕೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸ್ಯಾನಿಟರಿ ಪ್ಯಾಡ್ ಗಳು:
ಸಾಮಾನ್ಯವಾಗಿ ಮಹಿಳೆಯರು ಬಹಳ ವರ್ಷಗಳಿಂದ ಇದನ್ನು ಬಳಸಿಕೊಂಡು ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಶೇಪ್ ಬೇರೆ ಬೇರೆ ಬೆಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳು ಲಭ್ಯವಾಗುತ್ತದೆ. ಇದನ್ನು ಬಳಸುವಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಕಂಫರ್ಟ್ ಆಗಿರುತ್ತಾರೆ. ಆದರೆ ಇದರಲ್ಲಿ ಬಳಸುವ ರಾಸಾಯನಿಕಗಳು ಕೂಡ ಹೆಣ್ಣುಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ದೀರ್ಘಾವಧಿಗೆ ಸ್ಯಾನಿಟರಿ ಪ್ಯಾಡ್ ಬಳಸುವುದು ಒಳ್ಳೆಯದಲ್ಲ.ಅಷ್ಟೇ ಅಲ್ಲದೇ ಪರಿಸರ ಸ್ನೇಹಿ ಅಲ್ಲ ಪ್ಯಾಡ್ ಗಳು ಪರಿಸರಕ್ಕೂ ಹಾನಿ ಉಂಟುಮಾಡುತ್ತವೆ. ಯಾಕೆಂದರೆ ಇದು ಮಣ್ಣಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಜೊತೆಗೆ . ಹಾಗೆಯೇ ಸ್ಯಾನಿಟರಿ ಪ್ಯಾಡ್ ಗಳು ದುಬಾರಿ ಕೂಡ ಆಗಿರುತ್ತದೆ. ಇದರಿಂದ ತಿಂಗಳಿಗೆ ಸಾಕಷ್ಟು ಹಣ ವೆಚ್ಚವಾಗುತ್ತದೆ.
ಟ್ಯಾಂಪೋನ್ ಗಳು:
ಇದು ಮುಟ್ಟಿನ ರಕ್ತವನ್ನು ಅಧಿಕವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತೆ ಸುಲಭವಾಗಿ ಬಳಸಬಹುದು. ಇದು ಹತ್ತಿಯಿಂದ ಮಾಡಿರುವ ಪ್ಲಗ್ ಗಳಾಗಿದ್ದು ಸಾಕಷ್ಟು ಮಹಿಳೆಯರಿಗೆ ಈ ಟ್ಯಾಂಪೋನ್ ಗಳನ್ನು ಬಳಸುವುದು ರೂಢಿಯಾಗಿರುತ್ತೆ.ಆದರೆ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಇದು ಕೂಡ ಅಷ್ಟು ಸೇಫ್ ಅಲ್ಲ.ಟ್ಯಾಂಪೋನ್ ಗಳನ್ನು ಜಾಸ್ತಿ ಸಮಯ ಬಳಸಿದರೆ ಅದು ವಿಷಕಾರಿ ಸಿಂಡ್ರೋಮ್ಗಳಿಗೆ ಕಾರಣವಾಗಬಹುದು ಹಾಗಾಗಿ ಇವತ್ತಿನ ದಿನಗಳಲ್ಲಿ ಟ್ಯಾಂಪೋನ್ ಗಳನ್ನು ಬಳಸುವುದು ಕೂಡ ಅಷ್ಟು ಸುರಕ್ಷಿತವಲ್ಲ. ಜೊತೆಗೆ ಇದು ಪರಿಸರ ಸ್ನೇಹಿ ಅಲ್ಲ.
ಮೆನ್ಟ್ರುವಲ್ ಕಪ್:
ನಮ್ಮ ಹೆಣ್ಣು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಮೆನ್ಟ್ರುವಲ್ ಕಪ್ ಬಳಕೆಯತ್ತ ಗಮನ ಹರಿಸುತ್ತಿದ್ದಾರೆ. ಇದನ್ನು ಮೊದಲು ವಿದೇಶಗಳಲ್ಲಿ ಮಾತ್ರ ಬಳಸುತ್ತಿದ್ದರೂ ಆದರೆ ಈಗ ಭಾರತದಲ್ಲಿಯೂ ಬಳಕೆಯಲ್ಲಿದೆ. 1935 ರಲ್ಲಿ ಇದನ್ನ ಕಂಡುಹಿಡಿಯಲಾಗಿತ್ತು ಆದರೆ ಹೆಚ್ಚು ಪ್ರಚಲಿತದಲ್ಲಿ ಬಂದಿದ್ದು ಮಾತ್ರ ಇತ್ತೀಚಿನ ವರ್ಷಗಳಲ್ಲಿ. ಇದನ್ನು ಬಳಸುವುದು ಹೆಚ್ಚು ಸೇಫ್ ಎಂದು ವೈದ್ಯರುಗಳು ಸಲಹೆಯನ್ನು ನೀಡುತ್ತಾರೆ. ಹಾಗೆಯೇ ಇದು ಮರು ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗುವಂತಹ ಒಂದು ಅತ್ಯುತ್ತಮವಾದ ಉತ್ಪನ್ನ. ಇದರಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ ಇದನ್ನು ಬಳಸುವುದರಿಂದ ದದ್ದು, ತುರಿಕೆ ಉಂಟಾಗುವಂತಹ ಯಾವ ಸಮಸ್ಯೆಯೂ ಇರುವುದಿಲ್ಲ.
ಇದು ಪರಿಸರ ಸ್ನೇಹಿಯಾಗಿರುವ ಉತ್ಪನ್ನವಾಗಿದ್ದು, ಒಮ್ಮೆ ಇದನ್ನ ಬಿಸಾಡಿದರೆ ಅದು ಮಣ್ಣಿನಲ್ಲಿ ಲೀನವಾಗಿ ಹೋಗುತ್ತದೆ. ಇನ್ನೂ ವಿಶೇಷವೆಂದರೆ ಇದನ್ನು ಒಮ್ಮೆ ಖರೀದಿಸಿದ ಮೇಲೆ 10 ವರ್ಷಗಳವರೆಗೂ ಬಳಸಿಕೊಳ್ಳಬಹುದು. ಯಾವುದೇ ಸಮಸ್ಯೆ ಇಲ್ಲದೆ ಮಹಿಳೆಯರು ತಮ್ಮ ಮುಟ್ಟಿನ ದಿನಗಳನ್ನು ಆರಾಮವಾಗಿ ಚಿಂತೆ ಇಲ್ಲದೆ ಕಳೆಯಬಹುದು.