ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸಿ ಪ್ರಮುಖ ಅಂಗವೇ ಕಿಡ್ನಿ. ನಾವು ಆರೋಗ್ಯವಾಗಿ ಜೀವಿಸಲು ಕಿಡ್ನಿಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಬಹು ಮುಖ್ಯವಾಗಿರುತ್ತದೆ. ಕೆಲವೊಂದು ಸಂದರ್ಭದಲ್ಲಿ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡು ನಮ್ಮ ಆರೋಗ್ಯವನ್ನು ಏರುಪೇರು ಮಾಡುತ್ತದೆ. ಅಂತಹ ಸಂದರ್ಭದಲ್ಲಿ ನಾವು ಮನೆಮದ್ದುಗಳ ಮೂಲಕ ಕಿಡ್ನಿ ಸ್ಟೋನ್ನಿಂದ ಮುಕ್ತಿ ಪಡೆಯಬಹುದು.
ಸಾಕಷ್ಟು ನೀರು ಕುಡಿಯಿರಿ:
ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಕಿಡ್ನಿ ಕಲ್ಲುಗಳು ಸ್ವಾಭಾವಿಕವಾಗಿ ನಿವಾರಣೆಯಾಗುತ್ತದೆ. ದಿನಕ್ಕೆ ಕನಿಷ್ಠ 8 ಲೋಟ ನೀರನ್ನು ಕುಡಿಯಬೇಕು. ನೀರು ಮಾತ್ರವಲ್ಲದೇ ಸಿಟ್ರಸ್ ಅಂಶವುಳ್ಳ ಜ್ಯೂಸ್ನ್ನು ಕೂಡ ಸೇವಿಸಬಹುದು.
ಬಾಳೆದಿಂಡು:
ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾಳೆದಿಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಕಿಡ್ನಿ ಸ್ಟೋನ್ ಉಂಟಾದಾಗ ಬಾಳೆದಿಂಡಿನ ಜ್ಯೂಸ್ ಮಾಡಿ ಸೇವಿಸುವರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ನೀವು ನಿತ್ಯವು ಬಾಳೆದಿಂಡಿನ ಜ್ಯೂಸ್ ಸೇವಿಸಿದರೆ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹದು.
ಬಾಳೆದಿಂಡನ್ನು ಸಣ್ಣದಾಗಿ ಹೆಚ್ಚಿಕೊಂಡು ಅದನ್ನು ರಾತ್ರಿ ಪೂರ್ತಿ ಹಾಲಿನಲ್ಲಿ ನೆನೆಸಿಡಿ ನಂತರ ಬೆಳಗ್ಗೆ ಅದಕ್ಕೆ ಸ್ವಲ್ಪ ಸಕ್ಕರೆ ಮತ್ತು ಚಿಟಿಕೆ ಅರಿಶಿನ ಸೇರಿಸಿ ರುಬ್ಬಿಕೊಂಡು ನಿತ್ಯವೂ ಸೇವಿಸಿ.
ಎಳನೀರು ಸೇವನೆ:
ಎಳನೀರು ಮೂತ್ರಪಿಂಡದ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತಾಗಿಸಲೂ ನೆರವಾಗುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವನೆ ಮಾಡಿದರೆ ಕಿಡ್ನಿಯ ಕಲ್ಲು ನಿವಾರಣೆಯಾಗುತ್ತದೆ.
ದಾಳಿಂಬೆ ಜ್ಯೂಸ್:
ದಾಳಿಂಬೆಯು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು, ನಿಮ್ಮ ಕಿಡ್ನಿ ಕಲ್ಲನ್ನು ಮೂತ್ರದ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣವನ್ನು ದಾಳಿಂಬೆ ರಸ ನೀಡುತ್ತದೆ.
ಕಲ್ಲಂಗಡಿ :
ಕಲ್ಲಂಗಡಿ ಮತ್ತು ಅದರ ಬೀಜಗಳು ಕಿಡ್ನಿ ಸ್ಟೋನ್ನ್ನು ನಿವಾರಣೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಕಲ್ಲಂಗಡಿ ಬೀಜವು ಕಿಡ್ನಿ ಸ್ಟೋನ್ನ್ನು ಶೀಘ್ರವೇ ನಿವಾರಿಸುತ್ತದೆ. ಕಲ್ಲಂಗಡಿ ಬೀಜವನ್ನು ಪೇಸ್ಟ್ ಮಾಡಿಕೊಂಡು ಒಂದು ಲೀಟರ್ ನೀರಿನೊಂದಿಗೆ ಸೇರಿಸಿ ಕುದಿಸಿ ಅದು ತಣ್ಣಗಾದ ಬಳಿಕ ಸೇವಿಸಿ.
ಕಿಡ್ನಿಯ ಆರೋಗ್ಯಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮ:
ಅತೀ ಉಪ್ಪು, ಮದ್ಯಸಾರ ಮತ್ತು ಸಂರಕ್ಷಕ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆಮಾಡಬೇಕು. ಕನಿಷ್ಟ ಉಪ್ಪು ಮತ್ತು ತಾಜಾ ಸಾಮಾಗ್ರಿಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಿ. ಹೆಚ್ಚು ಆಂಟಿಯೋಕ್ಸಿಡೆಂಟ್ ಸತ್ವಗಳನ್ನು ಹೊಂದಿರುವ ತರಕಾರಿ ಹಣ್ಣುಗಳಾದ ಟೊಮೇಟೊ, ಬ್ಲುಬೆರ್ರಿ, ಸ್ಕ್ವಾಷಸ್ ಮತ್ತು ಕ್ಯಾರೇಟ್ಗಳಿಗೆ ಸೇವಿಸಿ. ಮಾಂಸಗಳಾದ ಪೋರ್ಕ್ ಹಾಗೂ ಬೀಫ್, ಆಕ್ಸಲೇಟ್ ಅಂಶವುಳ್ಳ ನಟ್ಸ್, ಸ್ಪಿನಾಂಚ್ ಮತ್ತು ಬೀನ್ಸ್ , ರೀಫೈಂಡ್ ಆಹಾರ ಪದಾರ್ಥಗಳಾದ ವೈಟ್ ಬ್ರೆಡ್ ಮತ್ತು ವಾಣಿಜ್ಯ ಫಾಸ್ಟ್ ಫುಡ್ಗಳಾದ ಫ್ರೆಂಚ್ ಫ್ರೈ ಹಾಗೂ ಬರ್ಗರ್ ಬಗ್ಗೆ ಎಚ್ಚರವಿರಲಿ.
ಯಾವುದೇ ಮಾತ್ರೆಗಳು ಔಷಧಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ವೈದ್ಯರನ್ನು ಮೊದಲು ಭೇಟಿಯಾಗಿ. ಕೆಲವೊಂದು ಔಷಧಗಳು ನಿಮ್ಮ ಕಿಡ್ನಿಗೆ ಹೆಚ್ಚು ಹಾನಿಯುಂಟು ಮಾಡುತ್ತವೆ. ಪ್ರತೀ ದಿನ 30 ನಿಮಿಷಗಳಷ್ಟು ಕಾಲ ವ್ಯಾಯಾಮವನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಇದು ನಿಮ್ಮ ದೇಹದ ದ್ರವಗಳಿಗೆ ಚಾಲನೆಗೊಳ್ಳಲು ಸಹಾಯ ಮಾಡಿ ನಿಮ್ಮ ದೇಹದ ವ್ಯವಸ್ಥೆಯನ್ನು ಕಿಡ್ನಿಸ್ಟೋನ್ಗಳಿಂದ ಮುಕ್ತಗೊಳಿಸುತ್ತದೆ.