ಇಂದಿನ ಕಾಲದಲ್ಲಿ ಎಲ್ಲವೂ ಡಿಜಿಟಲ್ ಆಗಿದ್ದು, ನಮ್ಮ ದೈನಂದಿಕ ಬಹುತೇಕ ವ್ಯವಹಾರಗಳು ಡಿಜಿಟಲ್ ಮೂಲಕವೇ ನಡೆಯುತ್ತದೆ. ಮೂಬೈಲ್ ಕೈಯಲ್ಲಿ ಇದ್ದರೆ ಪ್ರಪಂಚವೇ ನಮ್ಮ ಅಂಗೈಯಲ್ಲಿದೆ ಎನ್ನುವಷ್ಟರ ಮಟ್ಟಿಗೆ ಈಗ ಡಿಜಿಟಲ್ ಪ್ರಭಾವವನ್ನು ಬೀರಿದೆ. ನಮ್ಮ ಹೆಚ್ಚಿನ ಕೆಲಸಗಳು ಡಿಜಿಟಲ್ನಲ್ಲಿ ಆಗುವುದರಿಂದ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಡಿಜಿಟಲ್ ಹಾದಿಯನ್ನೇ ಹಿಡಿದಿದ್ದಾರೆ.
ಈಗೀನ ಕಾಲದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರಿಂದ ಇಂತಹ ಅನ್ಲೈನ್ ಮಾರ್ಕೆಟಿಂಗ್ ಉದ್ಯೋಗದಲ್ಲಿ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ಈ ಸಂಬಂದಿತ ಕೋರ್ಸ್ಗಳನ್ನು ಕಲಿಯುವುದರಿಂದ ಯುವ ಜನತೆಗೆ ಉದ್ಯೋಗ ಅವಕಾಶಗಳು ಹೆಚ್ಚಾಗಿರುತ್ತದೆ.
ಮೊಬೈಲ್, ಲ್ಯಾಪ್ಟಾಪ್, ಡೆಸ್ಕ್ಟಾಪ್ ಮುಂತಾದವುಗಳ ಮೂಲಕ ಉತ್ಪನ್ನ ಹಾಗೂ ಸೇವೆಗಳ ಜಾಹಿರಾತು ಮಾಡುವುದೇ ಆನ್ಲೈನ್ ಮಾರ್ಕೆಟಿಂಗ್. ಈ ರೀತಿಯ ಕ್ಷೇತ್ರದಲ್ಲಿ ಆಕರ್ಷಕ ವೇತನವಿರುವ ಉದ್ಯೋಗಗಳನ್ನು ಪಡೆಯಬಹುದು. ಇಂತಹ ಕೇತ್ರಗಳ ಬಗ್ಗೆ ತರಭೇತಿ ನೀಡಲು ಹಲವಾರು ಕೋರ್ಸ್ಗಳು ಲಭ್ಯವಿದೆ.
ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಬೇಕಾದ ಆರ್ಹತೆ:
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ಗಳು ಆನ್ಲೈನ್ನಲ್ಲಿ ಲಭ್ಯವಿದ್ದು, ಪಿಯುಸಿ, ಪದವಿ ವ್ಯಾಸಾಂಗ ಮಾಡಿದವರು ಅಥವಾ ವ್ಯಾಸಾಂಗ ಮಾಡುತ್ತಿರುವವರು ಇದನ್ನು ಮಾಡಬಹುದು. ಕೆಲವು ಸಂಸ್ಥೆಗಳು ಶುಲ್ಕ ವಿಧಿಸುತ್ತವೆ. ಇನ್ನೂ ಉಚಿತವಾಗಿ ದೊರೆಯುವ ಕೋರ್ಸ್ಗಳು ಬೇಕಾದಷ್ಟು ಇರುತ್ತದೆ.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡಲು ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಮೊಬೈಲ್ ಮೂಲಕವು ಕೋರ್ಸ್ನ್ನು ಪಡೆಯಬಹುದು. ಹೆಚ್ಚಾಗಿ ಇಂಗ್ಲೀಷ್ನಲ್ಲಿ ಇರುವುದರಿಂದ ಇಂಗ್ಲೀಷ್ ಓದಲು ಬರೆಯಲು ಬರಬೇಕು. ಒಳ್ಳೆಯ ಭಾಷಾ ಕೌಶಲ್ಯವನ್ನು ಬೆಳೆಸಿಕೊಂಡವರಿಗೆ ಇದರಲ್ಲಿ ಉತ್ತಮ ಭವಿಷ್ಯವಿದೆ