ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದೂ ಅಭ್ಯರ್ಥಿಗಳು ಬೀರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ವಿಷ ಸರ್ಪ ಮತ್ತು ವಿಷ ಕನ್ಯೆ ಈ ಎರಡು ವಿಷಯಗಳು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ವಾಕ್ಸಾಮರಕ್ಕೆ ಕಾರಣವಾಗಿದೆ.
ಲಿಂಗಾಯುತ ಭ್ರಷ್ಟ ಸಿಎಂ ಎಂದು ಹೇಳಿಕೆ ನೀಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವಾದ ಸೃಷ್ಠಿಸಿದ್ದರು. ಅದು ತಣ್ಣಗೆ ಆಗುವ ಮೊದಲೇ ಕಾಂಗ್ರೇಸ್ ಕಡೆಯಿಂದ ಮತ್ತೊಂದು ವಿವಾದ ಸೃಷ್ಠಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರ ವಿಷದ ಹಾವು ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ “ವಿಷ ಸರ್ಪ’ದ ಮಾತಿನಿಂದ ಬಿಜೆಪಿಗೆ ಚುನಾವಣಾ ಪ್ರಚಾರದಲ್ಲಿ ಪ್ರಬಲ ಅಸ್ತ್ರವೇ ಸಿಕ್ಕಂತಾಗಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಖರ್ಗೆ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೂ ಬಿಜೆಪಿ ಈ ವಿಚಾರವನ್ನು ಸುಮ್ಮನೆ ಬಿಡದೆ ಮುಂದುವರೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಬಿಜೆಪಿಯ ಹಿರಿಯ ನಾಯಕರು ಖರ್ಗೆ ವಿರುದ್ಧ ಮುಗಿ ಬಿದ್ದಿದ್ದಾರೆ.
ಇನ್ನೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಚುನಾವಣಾ ಪ್ರಚಾರ ಮಾಡುವಾಗ , ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು “ವಿಷಕನ್ಯೆ”, ಚೀನಾ ಹಾಗೂ ಪಾಕಿಸ್ತಾನದ ಏಜೆಂಟ್ ಎಂದು ಟೀಕಿಸಿದ್ದಾರೆ. ಇದು ಕಾಂಗ್ರೇಸ ನಾಯಕರನ್ನು ಕೆರಳಿಸಿದೆ. ಯತ್ನಾಳ್ರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಈ ಬಗ್ಗೆ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ವಿಷ ಸರ್ಪ ಅಂತ ಕಲ್ಯಾಣ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಸರ್ಪ ನೀಲಕಂಠನ ಸಂಕೇತ. ಮೋದಿ ದೇಶದ ಭಯೋತ್ಪಾದನೆ, ಭ್ರಷ್ಟಾಚಾರ, ಬಡತನವನ್ನು ಒದ್ದೋಡಿಸಿ ಸಶಕ್ತ ಭಾರತ ಕಟ್ಟಲು ಹಲವಾರು ರೀತಿಯ ವಿಷವನ್ನು ನುಂಗಿ ನೀಲಕಂಠ ಆಗಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಖರ್ಗೆ ಮಾತಿಗೆ ತಿರುಗೇಟನ್ನು ನೀಡಿದ್ದಾರೆ.
ಚುನಾವಾಣ ಪ್ರಚಾರದಲ್ಲಿ ಇಷ್ಟು ದಿನಗಳ ಕಾಲ ಚರ್ಚೆಯ ವಸ್ತುವಾಗಿದ್ದ ಭ್ರಷ್ಟಾಚಾರ, ದುರಾಡಳಿತ ವಿಷಯಗಳು ಹಿಂದೆ ಸರಿದು ಲಿಂಗಾಯುತ ಸಮುದಾಯ ಮತ್ತು ವಿಷಸರ್ಪ ಮತ್ತು ವಿಷಕನ್ಯೆ ವಿಚಾರಗಳು ಮುಂಚೂಣಿಗೆ ಬಂದಿರುವುದು ವಿರ್ಪಯಾಸವೇ ಸರಿ.