ಖಾರ್ತೂಮ್: ಸುಡಾನ್ ನಲ್ಲಿ ಮಿಲಿಟರಿ ಪಡೆಗಳ ನಡುವಿನ ಹೋರಾಟ ತೀವ್ರಗೊಂಡ ಪರಿಣಾಮ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟು ಜಿದ್ದಾ ತಲುಪಿದ ಭಾರತೀಯರ ಸಂಖ್ಯೆ 1,100 ಕ್ಕೆ ಏರಿಕೆಯಾಗಿದೆ.
ಏಪ್ರಿಲ್ 24 ಸೋಮವಾರ ಪ್ರಾರಂಭಿಸಲಾದ ಆಪರೇಷನ್ ಕಾವೇರಿ ಭಾಗವಾಗಿ 128 ಜನರ ಹೊಸ ತಂಡ ಆಗಮಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಸುಡಾನ್ ನಿಂದ ಭಾರತೀಯ ವಾಯುಪಡೆಯ ಸಿ -130 ಜೆ ವಿಮಾನದಲ್ಲಿ ಆರನೇ ಬ್ಯಾಚ್ ಆಗಮಿಸಿದೆ. ಜಿದ್ದಾ ತಲುಪಿದವರನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಳೀಧರನ್ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯ ನಿಮಿತ್ತ ಸಚಿವರು ಜಿದ್ದಾದಲ್ಲಿದ್ದಾರೆ. ಸುಡಾನ್ ಕದನದಲ್ಲಿ ಈವರೆಗೆ ಕನಿಷ್ಠ 450 ಜನರು ಸಾವನ್ನಪ್ಪಿದ್ದಾರೆ.