ಮಲ್ಲಿಗೆ ಎಲ್ಲೇ ಇದ್ದರೂ ಕೂಡ ಅದರ ಸುವಾಸನೆ ನಮ್ಮನ್ನು ಕೈಬೀಸಿ ಕರೆಯುತ್ತದೆ. ಮಲ್ಲಿಗೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮತ್ತೆ ಯಾವುದೇ ದೇವಸ್ಥಾನಕ್ಕೆ ಹೋಗುವುದಿದ್ದರೆ ನಮಗೆ ಮಲ್ಲಿಗೆ ಹೂವಿನ ಅವಶ್ಯಕತೆ ಇರುತ್ತದೆ. ಮಲ್ಲಿಗೆಯನ್ನು ಎಷ್ಟೋ ಜನರ ಆದಾಯದ ಮೂಲಕವಾಗಿದೆ. ಮಲ್ಲಿಗೆಯಿಂದಲೇ ಲಕ್ಷಗಟ್ಟಲೆ ಹಣ ಸಂಪಾದಿಸುವುದನ್ನು ನಾವು ನೋಡಬಹುದು.
ಆದರೆ ನಾನಿವತ್ತು ಮನೆಯಲ್ಲಿ ಮಲ್ಲಿಗೆ ಗಿಡ ನೆಡಲು ಸಾಕಷ್ಟು ಜಾಗವಿಲ್ಲದೇ ಇದ್ದರೂ ಕೂಡ ಹೇಗೆ ಪಾಟ್ ನಲ್ಲಿ ಮಲ್ಲಿಗೆ ಬೆಳೆಯಬಹುದು ಎಂಬ ಸಲಹೆಯನ್ನು ನೀಡುತ್ತಿದ್ದೆನೆ.
ಒಂದು ಪಾಟ್ ನಲ್ಲಿ ಕೆಳಗೆ ಒಣಗಿದ ಎಲೆಗಳನ್ನು ಹಾಕಿಕೊಂಡು ಅದರ ಮೇಲಿಂದ 30% ಮಣ್ಣು, 30 ಪ್ರತಿಶತ ಗೊಬ್ಬರ, 30% ಮರಳು ಮಿಶ್ರಣ ಮಾಡಿಕೊಂಡು ಆ ಮಿಶ್ರಣವನ್ನು ಪಾಟ್ ನ ಒಳಗೆ ತುಂಬಿಸಬೇಕು. ಆಮೇಲೆ ಅದರಲ್ಲಿ ಒಂದು ಮಲ್ಲಿಗೆ ಗಿಡವನ್ನು ನೆಡಬೇಕು. ನೆಡುವಾಗ ಕಹಿಬೇವಿನ ಹಿಂಡಿಯನ್ನು ಸ್ವಲ್ಪ ಹಾಕಬೇಕು. ಮಲ್ಲಿಗೆ ನೆಡುವಾಗ ಸ್ವಲ್ಪ ನೀರನ್ನು ಹಾಕಿ ಅದನಂತರ ಎರಡು ದಿನದ ತನಕ ನೀರನ್ನು ಹಾಕಬಾರದು. ಮೂರನೇ ದಿನ ಪೂರ್ತಿಯಾಗಿ ಪಾಟ್ ಅನ್ನು ನೀರಿನಿಂದ ತುಂಬಿಸಬೇಕು.
ಒಮ್ಮೆ ಗಿಡ ಹುಟ್ಟಿದ ಮೇಲೆ ಅದಕ್ಕೆ ದಿನಾಲು ನೀರು ಹಾಕುವುದನ್ನು ಮರೆಯಬಾರದು. ಹೂ ಬಿಟ್ಟು ಒಣಗಿದ ತುದಿಯನ್ನು ಕತ್ತರಿಸುತ್ತಿರಬೇಕು. ಮಲ್ಲಿಗೆ ಗಿಡವನ್ನು ಐದರಿಂದ ಆರು ಗಂಟೆ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಸ್ಥಳದಲ್ಲಿ ಇಟ್ಟಿರಬೇಕು. ಹೀಗೆ ಮಾಡುವುದರಿಂದ ನಮ್ಮ ಮಲ್ಲಿಗೆ ಪಾಟ್ ನಲ್ಲಿ ಸದಾ ಹೂವು ಅರಳುತ್ತಲೇ ಇರುತ್ತವೆ. ಅಂಗಳಕ್ಕೆ ಒಮ್ಮೆ ಬಂದು ಕುಳಿತುಕೊಂಡರೆ ಸಾಕು ಹಾಗೆ ಘಮ್ ಎಂದು ಮಲ್ಲಿಗೆ ತನ್ನ ಪರಿಮಳವನ್ನು ಬೀರುತ್ತದೆ.