ಬೆಂಗಳೂರು: ಬಹುಶ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮ ಬಾರಿಗೆ ಇಂತಹ ಒಂದು ಸನ್ನಿವೇಶ ಸಂದರ್ಭವನ್ನು ರಾಜ್ಯ ನೋಡುತ್ತಿದೆ. ವರ್ಷಾನು ಗಟ್ಟಲೆ ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದ ಮಾಹನ್ ಧುರೀಣರನ್ನು ಪಕ್ಷವೊಂದು ಕೈ ಬಿಟ್ಟಿರುವುದು ಸೋಜಿಗದ ವಿಷಯ. ಇದು ಕಾಲ್ಪನಿಕ ಕಥೆಯಂತೆ ಭಾಸವಾಗುತ್ತಿದ್ದರು ಇದು ನಿಜವಾಗಲು ನಡೆದಿದೆ. ಬಹುಶ ಇದನ್ನೇ ರಾಜಕೀಯ ಅನ್ನೊದು.
ಬಹಳ ಉತ್ಸಕತೆಯಿಂದ ಪಕ್ಷಕ್ಕೆ ನಿಯತ್ತಾಗಿ ದುಡಿಯುತ್ತಿದ್ದವರನ್ನು ಪಕ್ಷವು ಈ ಭಾರಿಯ ವಿಧಾನಸಭೆ ಚುನಾವಣೆ ಅಭ್ಯರ್ಥಿ ಸ್ಥಾನಕ್ಕೆ ಪರಿಗಣಿಸಲೆ ಇಲ್ಲ. ಇದು ಬಹುತೇಕ ಶಾಸಕರಿಗೆ ಅಸಮಾಧಾನವಾಗಿದೆ. ಇನ್ನು ಕೆಲವರಿಗೆ ಮನೋಬಲವೇ ಕುಗ್ಗಿದಂತಾಗಿದೆ.
ಇತ್ತ ಸಾರ್ವಜನಿಕ ವಲಯದಲ್ಲಿ ವಯಸ್ಸಾದವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ಈ ಮಹತ್ತರವಾದ ಬದಲಾವಣೆಯನ್ನು ತಂದಿದ್ದಾರೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಇನ್ನು ಪ್ರಭುದ್ದ ಜೀವಿಗಳು ಇದೊಂದು “ಹಿಡನ್ ಅಜೆಂಡಾ” ಇಟ್ಟುಕೊಂಡು ಮಾಡಿರುವ ನಿರ್ಧಾರ ಎಂದು ಅಭಿಪ್ರಾಯಿಸುತ್ತಿದ್ದಾರೆ.
ಇನ್ನೊಂದೆಡೆ ಚುನಾವಣೆ ದಿನಾಂಕ ಘೋಷಣೆಗೆ ಮೊದಲಿನ ದಿನಗಳಲ್ಲಿ ಕೆಲವೊಂದು ಕಾರ್ಯಕರ್ತರು ಪಕ್ಷದ ವಿರುದ್ಧ ತಿರುಗಿ ಬಿದ್ದಿರುವುದನ್ನು ಸ್ಮರಿಸಬಹುದು. ಕಟ್ಟಾ ಭಕ್ತರು ಎನಿಸಿಕೊಂಡಿರುವವರು, ನಮ್ಮಂತಹ ನಿಷ್ಟವಂತರಿಗೆ ಇಂದು ಪಕ್ಷದಲ್ಲಿ ಬೆಲೆ ಇಲ್ಲ. ಪಕ್ಷವು ಬರೇ ಭ್ರಷ್ಟತೆಯನ್ನು ನಡೆಸುತ್ತಿದೆ ಎಂದು ಹೇಳಿಕೆಗಳನ್ನು ನೀಡಿ ಆ ಭಾಗದ ಶಾಸಕರ ವಿರುದ್ಧ ತಿರುಗಿಬಿದ್ದಿರುವು ಕಂಡುಬಂದಿದೆ. ನಿಧಾನಕ್ಕೆ ಪಕ್ಷಕ್ಕಾಗಿ ದುಡಿಯುತ್ತಿದ್ದ ಕಾರ್ಯಕರ್ತರು ಪಕ್ಷದಿಂದ ದೂರ ಸರಿಯಲಾರಂಬಿಸಿದ್ದಾರೆ ಜೊತೆಗೆ ಕೆಲವೊಂದು ಅವ್ಯವಹಾರಗಳ ಬಗ್ಗೆ ಬಹಿರಂಗವಾಗಿ ವೇದಿಕೆಯಲ್ಲಿ ರಾಜರೋಷವಾಗಿ ಹೇಳುತ್ತಿದ್ದಾರೆ.
ನಮ್ಮ ಊರು, ಭಾಷೆ, ಜಾತಿ, ಧರ್ಮ, ಮೀಸಲಾತಿ ಹೀಗೆ ಹಲವು ಚದುರಂಗದ ದಾಳವನ್ನು ಉರುಳಿಸಿ ಜನರಿಂದ ಗೆದ್ದು ಬಂದು ಗದ್ದುಗೆ ಅಲಂಕರಿಸುತ್ತಿದ್ದರು. ಜನರನ್ನು ವಿವಿಧ ರೀತಿಯಲ್ಲಿ ಮನವೊಲಿಸುತ್ತಿದ್ದ ರಾಜಕೀಯ ನಾಯಕರು ಇಂದು ಇತರ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ನೋಡುತ್ತಿದ್ದಾರೆ.