ಬೆಂಗಳೂರು: ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗದಿರುವುದಕ್ಕೆ ಯಾರೂ ಕಾರಣ ಅಲ್ಲ. ರಾಜ್ಯಸಭಾ ಮೆಂಬರ್ ಮಾಡ್ತೀವಿ ಅಂತ ಹೇಳಿದ್ವಿ. ಅನಗತ್ಯವಾಗಿ ಬಿ.ಎಲ್. ಸಂತೋಷ ಮೇಲೆ ಆರೋಪ ಮಾಡೋದು ಶೋಭೆ ತರಲ್ಲ. ಹೀಗೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಬಿ. ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬಿ ಎಲ್ ಸಂತೋಷ್ ರಿಂದ ಜಗದೀಶ್ ಶೆಟ್ಟರ್ ಗೆ ಟಿಕೆಟ್ ತಪ್ಪಿದ್ದು ಎಂಬ ಮಾತು ಸುಳ್ಳು. ಜಗದೀಶ್ ಶೆಟ್ಟರ್ ಗೆ ಎಲ್ಲ ರೀತಿಯಿಂದಲೂ ಮನವೊಲಿಸುವ ಪ್ರಯತ್ನ ಆಯ್ತು. ಆದರೆ ಅವರು ಅಂತಿಮವಾಗಿ ಪಕ್ಷ ಬಿಟ್ಟು ಹೋದ್ರು. ಅವರು ಪಕ್ಷ ಬಿಟ್ಟು ಹೋಗಿದ್ರಿಂದ ಬಿಜೆಪಿಗೆ ಏನು ನಷ್ಟ ಆಗಲ್ಲ. ಸುಮ್ಮನೆ ಸಂತೋಷ್ ಹೆಸರು ತಂದಿದ್ದು ಕೂಡ ಶೆಟ್ಟರ್ ಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟರೆ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಯಾಕೆಂದರೆ ಜಗದೀಶ್ ಶೆಟ್ಟರ್ ನಂಬಿ ಅವರ ಜೊತೆಗೆ ಯಾವ ಕಾರ್ಯಕರ್ತರು ಹೋಗಿಲ್ಲ. ನಡ್ಡಾ ಸಹ ಇಂದು ಹುಬ್ಬಳ್ಳಿಗೆ ಬರ್ತಿದ್ದಾರೆ. ಶೆಟ್ಟರ್ ಈ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದಾಗಿತ್ತು. ಅಷ್ಟೆಲ್ಲಾ ಮನವಿ ಮಾಡಿದ್ರೂ ಅವ್ರು ಒಪ್ಪಿಲ್ಲ. ಇನ್ಮೇಲ್ ಅವ್ರ ದಾರಿ ಅವರಿಗೆ ನಮ್ಮ ದಾರಿ ನಮಗೆ. ಅವರು ಹೋಗಿರೋದ್ರಿಂದ ನಮಗೆ ಏನೂ ಆಗಲ್ಲ. ಬಹುಮತ ತೆಗೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬರುತ್ತೆ.
ಶಿವಮೊಗ್ಗ ಟಿಕೆಟ್ ಪೆಂಡಿಂಗ್ ವಿಚಾರ ಮಾತಾಡಿ ಯಡಿಯೂರಪ್ಪರವರು ಶಿವಮೊಗ್ಗ ಟಿಕೆಟ್ ಇವತ್ತು ಘೋಷಣೆ ಮಾಡುತ್ತೇವೆ ಎಂದರು.