ಬೇಸಿಗೆಕಾಲದಲ್ಲಿ ಸೂರ್ಯನಿಂದ ಹೊರಹೊಮ್ಮುವ ಶಾಖಯುಕ್ತ ಕಿರಣಗಳಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹಕ್ಕೆ ಆಗತ್ಯವಾದ ನೀರಿನಾಂಶ ಸಿಗದೇ ಇದ್ದರೆ ಡಿಹೈಡ್ರೇಷನ್ ಉಂಟಾಗುವುದು ಸಾಮಾನ್ಯವಾಗಿದೆ. ಹಾಗೆಯೇ ಚರ್ಮದ ರೋಗಗಳು, ವಿಟಮಿನ್ ಮತ್ತು ಖನಿಜದ ಕೊರತೆಯಿಂದ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾವು ಸೇವಿಸುವ ಆಹಾರಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದರಿಂದ ಬೇಸಿಗೆಕಾಲದಲ್ಲಿ ನಮ್ಮ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮವನ್ನು ತಡೆಯ ಬಹುದು.
ಕಲ್ಲಂಗಡಿ
ಕಲ್ಲಂಗಡಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ದೊರೆಯುವ ಹಣ್ಣು. ಇದರಲ್ಲಿ ೯೧.೪೫% ನೀರಿನಾಂಶ ಇದ್ದು. ನಮ್ಮ ದೇಹದ ನೀರಿನ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲೈಕೋಪೀನ್ ಚರ್ಮದ ಕೋಶಗಳನ್ನು ಸೂರ್ಯ ಹಾನಿಯಿಂದ ರಕ್ಷಿಸುತ್ತದೆ. ಹಾಗೆಯೇ ಇದರ ಸೇವನೆಯು ದೇಹವನ್ನು ತಂಪಾಗಿರಿಸುತ್ತದೆ.
ಜುಕೀನಿ
ನೋಡಲು ಸೌತೆಕಾಯಿಯನ್ನೇ ಹೋಲುವ ಜುಕೀನಿ ಸಂಪೂರ್ಣ ನೀರಿನ ಅಂಶದಿಂದ ಕೂಡಿದ್ದು, ಇದರ ಸೇವನೆಯಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಅಧಿಕವಾಗಿ ಫೈಬರ್ ಅಂಶದಿಂದ ತುಂಬಿದ್ದು, ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಟೊಮೇಟೊ
ವಿಟಮಿನ್ ಸಿ ಮತ್ತು ಲೈಕೋಪೀನ್ನಂತಹ ಉತ್ಕರ್ಷಣ ರೋಗನಿರೋಧಕ ಶಕ್ತಿ ಹೊಂದಿರುವ ಟೊಮೇಟೊ ಬೇಸಿಗೆಯಲ್ಲಿ ಹೆಚ್ಚು ಸೇವಿಸುವುದು ಉತ್ತಮ.
ಮೊಸರು
ಮೊಸರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಉತ್ತಮ ಆಹಾರ. ಮೊಸರಿನ ಸೇವನೆಯಿಂದ ದೇಹದ ಉಷ್ಟಾಂಶವನ್ನು ಸಮತೋಲನದಲ್ಲಿರಿಸುತ್ತದೆ. ಹಾಗೆಯೇ ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕಿತ್ತಲೆಹಣ್ಣು
ಬೇಸಿಗೆಯಲ್ಲಿ ನಮ್ಮ ದೇಹದಿಂದ ಬರುವ ಬೆವರಿನ ಜತೆಗೆ ನಾವು ಪೊಟ್ಯಾಶಿಯಮ್ ಅನ್ನು ಕೂಡ ಕಳೆದುಕೊಳ್ಳುತ್ತೆವೆ. ಆದರಿಂದ ಕಿತ್ತಳೆ ಸೇವನೆಯು ದೇಹದಲ್ಲಿ ಪೊಟ್ಯಾಸಿಯಮ್ ಅನ್ನು ಸಮತೋಲನದಲ್ಲಿಡುತ್ತದೆ. ಹಾಗೆಯೇ ಕಿತ್ತಳೆಹಣ್ಣು ಶೇಕಡಾ 80 ರಷ್ಟು ನೀರಿನ ಪ್ರಮಾಣ ಹೊಂದಿದ್ದು ನಿರ್ಜಲೀಕರಣ ನಿವಾರಣೆಗೂ ಸಹಕಾರಿಯಾಗಲಿದೆ.
ಕರ್ಬೂಜ
ಕರ್ಬೂಜ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವಿರುವುದರಿಂದ ದೇಹವನ್ನು ತಂಪಾಗಿರಿಸುದಲ್ಲದೇ ಆಯಾಸವನ್ನು ಕಡಿಮೆ ಮಾಡುತ್ತದೆ ಆದರಿಂದ ಬೇಸಿಗೆ ಕಾಲದಲ್ಲಿ ಕರ್ಬೂಜ ಹಣ್ಣು ತಿನ್ನುವುದು ಒಳ್ಳೆಯದು.
ಹಸಿರು ಸೊಪ್ಪು ತರಕಾರಿಗಳು
ಹಸಿರು ಸೊಪ್ಪು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿದೆ. ಹೆಚ್ಚಿನ ಪ್ರಮಾಣದಲ್ಲಿ ಹಸಿರು ಸೊಪ್ಪು ತರಕಾರಿ ಸೇವನೆಯಿಂದ ಬೇಸಿಗೆಯಲ್ಲಿ ದೇಹದ ಉಷ್ಟಾಂಶವನ್ನು ಸಮತೋಲನದಲ್ಲಿಡಬಹುದು.
ಪಾನೀಯಗಳು
ಏಳನೀರು, ನಿಂಬೆಹಣ್ಣಿನ ಪಾನೀಯ, ಕಬ್ಬಿನ ರಸ ಹಾಗೂ ಕರ್ಬೂಜ ಪಾನೀಯದಂತಹ ಹಣ್ಣಿನ ಪಾನೀಯಗಳ ಸೇವನೆಯಿಂದ ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ದಿನಕ್ಕೆ ಸಾಧ್ಯವಾದಷ್ಟು ನೀರನ್ನು ಕುಡಿಯುವುದು ಉತ್ತಮ.