ಟೆಹ್ರಾನ್: ಇರಾನ್ನ ಉತ್ತರ ಭಾಗದ ಅಮೋಲ್ನಲ್ಲಿ ಇರಾನ್ ವಿರೋಧಿ ಮುಜಾಹೆದಿನ್-ಇ ಖಾಲ್ಕ್ ಆರ್ಗನೈಸೇಶನ್ (ಎಂಕೆಓ) ನೊಂದಿಗೆ ಸಂಬಂಧ ಹೊಂದಿದ್ದ ಭಯೋತ್ಪಾದಕ ಸಂಘಟನೆಯನ್ನು ಇರಾನ್ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ) ಯು ಭೇದಿಸಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಅಮೋಲ್ನಲ್ಲಿ ಐಆರ್ಜಿಸಿ ಗುಪ್ತಚರ ಸಂಸ್ಥೆಯ ಪಡೆಗಳು ಇರಾನ್ ನ ಭದ್ರತಾ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ತಂಡದ ಸದಸ್ಯರನ್ನು ಗುರುತಿಸಿ ಬಂಧಿಸಿದೆ ಎಂದು ಅಮೋಲ್ನಲ್ಲಿರುವ ಐಆರ್ಜಿಸಿಯ ಪ್ರಾದೇಶಿಕ ಕಮಾಂಡರ್ ಅಬೇದಿನ್ ದಾಗ್ಮೆಚಿ ಹೇಳಿರುವುದಾಗಿ ತಸ್ನಿಮ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.
ಗುಪ್ತಚರ ಸಂಸ್ಥೆಯ ಪಡೆಗಳು ಭಯೋತ್ಪದಕರನ್ನು ಬಂಧಿಸುವ ಮೊದಲು ಅಮೋಲ್ನಲ್ಲಿರುವ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಭಯೋತ್ಪದಕ ಸಂಘಟನೆಯ ಸದಸ್ಯರು ಕೆಲವು ಭಯೋತ್ಪದನ ಕೃತ್ಯಗಳನ್ನು ಮಾಡಲು ಪ್ರಯತ್ನಿಸಿದ್ದರು ಎಂದು ದಾಗ್ಮೆಚಿ ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಷ್ಟೆ ಅಲ್ಲದೇ ಇವರು ಪ್ರಮುಖ ಎಂಕೆಒ ಜತೆ ಗುರುತಿಸಿಕೊಂಡಿರುವ ಮಾಧ್ಯಮಗಳೊಂದಿಗೆ ಸಹಕರಿಸಿದ್ದಾರೆ ಹಾಗೂ ಸ್ಪೋಟಕ ಮತ್ತು ಮೊಲೊಟೊವ್ ಕಾಕ್ಟೈಲ್ಗಳನ್ನು ತಯಾರಿಸಿ ಇತ್ತೀಚಿನ ಇರಾನ್ ಗಲಭೆಗಳ ಸಮಯದಲ್ಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ ಎಂದು ದಾಗ್ಮೆಚಿ ಹೇಳಿದ್ದಾರೆ.
ದೇಶ ತೊರೆದು ಅಲ್ಬೇನಿಯಾದಲ್ಲಿ ನೆಲೆಸಿರುವ ಈ ಗುಂಪಿನ ಸದಸ್ಯರನ್ನು ಭಯೋತ್ಪಾದಕರು ಎಂದು ಇರಾನ್ ಪರಿಗಣಿಸುತ್ತದೆ