ವೆಬ್ ಸರಣಿ ಎಂದರೆ ಸ್ಕ್ರಿಪ್ಟೆಡ್ ಅಥವಾ ಸ್ಕ್ರಿಪ್ಟ್ ಮಾಡದ ಆನ್ ಲೈನ್ ವಿಡಿಯೋಗಳು ಸರಣಿಯಾಗಿದ್ದು ಸಾಮಾನ್ಯವಾಗಿ ಇಂಟರ್ನೆಟ್ ನಲ್ಲಿ ಬಿಡುಗಡೆಯಾಗುವ ಕಂತುಗಳು.
ಇದು ಮೊದಲು 1990ರ ದಶಕದಲ್ಲಿ ಆರಂಭವಾಯಿತು. ವೆಬ್ ಸೀರೀಸ್ ಗಳನ್ನು ವಿವಿಧ ಸ್ಕ್ರೀನಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ವೀಕ್ಷಿಸಬಹುದು ಲ್ಯಾಪ್ಟಾಪ್, ಡೆಸಕಟಾಪ, ಟ್ಯಾಬ್ಲೆಟ್ ಗಳು ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುತ್ತದೆ. ವೆಬ್ ಸೀರೀಸ್ ಗಳಲ್ಲಿ ಕ್ರೈಂ, ಕಾಮಿಡಿ, ಆಕ್ಷನ್, ಡ್ರಾಮಾ, ಥ್ರಿಲ್ಲರ್, ರೋಮ್ಯಾಂಟಿಕ್ ಸೀರಿಸ್ ಗಳನ್ನೂ ವೀಕ್ಷಿಸಬಹುದು.
ಪ್ರಮುಖ ಸ್ಟ್ರೀಮಿಂಗ್ ಫ್ಲ್ಯಾಟ್ ಫಾರ್ಮ್ ಗಳು ಯಾವುದೆಂದರೆ ಅಮೆಜಾನ್, ನೆಟ್ ಫ್ಲಿಕ್ಸ್, ಸೋನಿ ಲೈವ್ , ಹಾಟ್ ಸ್ಟಾರ್ , ವೂಟ್ ,ಜಿ5 ಇವೇ ಮೊದಲಾದವುಗಳು. ವೆಬ್ ಸರಣೀಯ ಅನೂಕೂಲವೆಂದರೆ ಇದು ಧಾರವಾಹಿಗಳಂತೆ ಯಾವುದೇ ಕಾರಣಕ್ಕೂ ಕಥಾಹಂದರವನ್ನು ಏಳಿಯುವುದಿಲ್ಲ ಬದಲಾಗಿ ಕಥೆಯು ತೀಕ್ಷ್ಣ ಗರಿಗರಿಯಾಗಿ ಸೀಮಿತ ಸಂಖ್ಯೆಯ ಸಂಚಿಕೆಗಳಲ್ಲಿ ಕೊನೆಗೊಳ್ಳುತ್ತದೆ.
ಒಂದು ವೆಬ್ ಸೀರೀಸ್ ಪ್ರಸಿದ್ಧವಾದರೆ ಮತ್ತು ಕಥೆಯನ್ನು ವಿಸ್ತರಿಸಲು ಬಯಸಿದ್ದರೆ ಹೊಸ ಸಂಚಿಕೆಗಳನ್ನು ಬಿತ್ತರಿಸುತ್ತಾರೆ ಹಾಗಾಗಿ ವೆಬ್ ಸೀರೀಸ್ ಯುವಕರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ವೆಬ್ ಸೀರಿಸಿಗಳು ಧಾರಾವಾಹಿಗಳಂತೆ ನಿರ್ದಿಷ್ಟ ಸಮಯಕ್ಕೆ ಪ್ರಸಾರವಾಗದೆ ಅಂತರ್ಜಾಲದಲ್ಲಿ ಯಾವಾಗ ಬೇಕೆಂದರೆ ನೋಡಲುಬಹುದಾದ ಸಂಚಿಕೆಗಳಾಗಿದ್ದು, ಜನರ ಒಲವನ್ನು ಪಡೆದಿರುತ್ತದೆ. ಹಾಗೆ ಅತಿಯಾಗಿ ಇದನ್ನು ವೀಕ್ಷಣೆ ಮಾಡುವುದರಿಂದ ಕಣ್ಣಿನ ತೊಂದರೆ, ನಿದ್ರಾಹೀನತೆ, ಬೊಜ್ಜು ಮತ್ತು ಕುತ್ತಿಗೆ ನೋವುಗಳ ಕೂಡ ಉಂಟಾಗಬಹುದು.